ಬ್ಯಾಡ್​ ನ್ಯೂಸ್​: ಲಂಡನ್​​ ಸರಣಿಗೆ ಹೋಗಿರೋ ಟೀಂ ಇಂಡಿಯಾದ ಇಬ್ಬರಿಗೆ ಕೊರೊನಾ

ಬ್ಯಾಡ್​ ನ್ಯೂಸ್​: ಲಂಡನ್​​ ಸರಣಿಗೆ ಹೋಗಿರೋ ಟೀಂ ಇಂಡಿಯಾದ ಇಬ್ಬರಿಗೆ ಕೊರೊನಾ

ಇಂಗ್ಲೆಂಡ್​ ಸರಣಿಗೆ ತೆರಳಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾಗೆ ದೊಡ್ಡ ಆಘಾತ ಉಂಟಾಗಿದ್ದು, ಇಬ್ಬರು ಆಟಗಾರನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ವರದಿಯಾಗಿದೆ.

ಯಾಱರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಅನ್ನೋ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ವರದಿಗಳ ಪ್ರಕಾರ ಸೋಂಕು ದೃಢಪಟ್ಟ ಬೆನ್ನಲ್ಲೇ ಆ ಆಟಗಾರನನ್ನ ಐಸೋಲೇಷನ್​ಗೆ ಒಳಪಡಿಸಲಾಗಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಳಿದ ಆಟಗಾರರಿಗೂ ಆತಂಕ ಎದುರಾಗಿದೆ.

ಆಗಸ್ಟ್​ 4 ರಿಂದ 5 ಪಂದ್ಯಗಳ ಟೆಸ್ಟ್​ ಸರಣಿ ಆರಂಭವಾಗಬೇಕಿತ್ತು. ಇದೀಗ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್​ ಪಂದ್ಯ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.

The post ಬ್ಯಾಡ್​ ನ್ಯೂಸ್​: ಲಂಡನ್​​ ಸರಣಿಗೆ ಹೋಗಿರೋ ಟೀಂ ಇಂಡಿಯಾದ ಇಬ್ಬರಿಗೆ ಕೊರೊನಾ appeared first on News First Kannada.

Source: newsfirstlive.com

Source link