ಅರರೆ..! ನ್ಯಾಷನಲ್​ ಕ್ರಶ್​ಗೆ ಏನಾಯ್ತು? ಬಿಗ್​ಬಿ ಜೊತೆಗಿನ ‘ಪಾರ್ಟಿ ಫೋಟೊ’ ಡಿಲೀಟ್

ಅರರೆ..! ನ್ಯಾಷನಲ್​ ಕ್ರಶ್​ಗೆ ಏನಾಯ್ತು? ಬಿಗ್​ಬಿ ಜೊತೆಗಿನ ‘ಪಾರ್ಟಿ ಫೋಟೊ’ ಡಿಲೀಟ್

ಬಹುಭಾಷೆಗಳಲ್ಲಿ ಮಿಂಚುತ್ತಿರೋ ಮಡಕೇರಿ ನಲ್ಲೇ ರಶ್ಮಿಕಾ ಮಂದಣ್ಣ ಫುಲ್ ಪಾರ್ಟಿ ಮೂಡ್ನಲ್ಲಿದ್ದಾರೆ.  ರಶ್ಮಿಕಾಗೆ ಸಿಕ್ತಿರೋ ಅವಕಾಶಗಳನ್ನ ನೋಡಿ ಅಚ್ಚರಿ ಪಡ್ತಿರೋ ಜನ ಮನಕ್ಕೆ ಒಂದು ಕ್ಯೂಟ್ ಕ್ವಶ್ಚನ್ ಉದ್ಭವವಾಗಿದೆ. ಅದೇನಂದ್ರೆ ಬಿಗ್ ಬಿ ಜೊತೆ ಇದ್ದ ಫೋಟೋವನ್ನ ಯಾಕೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಾ ಹಾಕಿ ಡಿಲೀಟ್ ಮಾಡಿದ್ದಾರೆ ಅನ್ನೋ ಕೊಶ್ಚನ್ ಫ್ಯಾನ್ಸ್​ನಲ್ಲಿ ಶುರುವಾಗಿದೆ..
blank
5 ವರ್ಷದ ಹಿಂದೆ ಸ್ಯಾಂಡಲ್ವುಡ್ ಕ್ರಶ್, 2 ವರ್ಷದ ಹಿಂದೆ ಸೌಥ್ ಕ್ರಶ್ , ಮೊನ್ನೆ ಮೊನ್ನೆ ಗೂಗಲ್ ಮೆಚ್ಚಿದ ನ್ಯಾಷನಲ್​ ಕ್ರಶ್. ಇದು ಚಿಕ್ಕದಾಗಿ ರಶ್ಮಿಕಾ ಮಂದಣ್ಣನವರ ಬಗ್ಗೆ ಹೇಳಿ ಮುಗಿಸಬಹುದಾದ ಕಲರ್ಫುಲ್ ಗರಿ ಗರಿ ಪರಿಚಯ.

ಅದ್ಯಾವ ಘಳಿಗೆಯಲ್ಲಿ ಬಿಟೌನ್ ಅಂಗಳಕ್ಕೆ ಕಾಲಿಟ್ಟಿದ್ದಾರೋ ಏನೋ ರಶ್ಮಿಕಾ, ಲಕ್​ಗೆ ಲಕ್ಕಾಗಿ, ಕಲರ್​ಫುಲ್​ ಕ್ಲಿಕ್ ಆಗಿ, ಬ್ಯೂಟಿಫುಲ್ ಪಿಕ್ ಆಗಿ, ಮಿರ ಮಿರ ಮಿನುಗುವ ಸುದ್ದಿ ಸಮಾಚಾರವನ್ನ ಕೊಡ್ತಿದ್ದಾರೆ ಕೊಡಗಿನ ಕುಬಸೂರತ್​ ಬೆಡಗಿ.

blank
ಲಕ್ಕಿಂದ ಲಕ ಲಕಾ ಅಂತ ಹೊಳೆಯುತ್ತಾ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ನಟಿಮಣಿ ರಶ್ಮಿಕಾ ಮಂದಣ್ಣ.. ಇಂಡಿಯನ್ ಸಿನಿರಂಗದ ಬಿಗ್ ಬಿ , ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆಗೆ ನಟಿಸೋ ಚಾನ್ಸ್ ಸಿಗೋದಂದ್ರೆ ಸುಮ್ನೇನಾ? ರಶ್ಮಿಕಾಗೆ ಈ ಬಿಗ್ ಚಾನ್ಸ್ ನಲಿದು ಒಲಿದು ಬಂದಿದೆ.. ಬಿಗ್ ಬಿ ಜೊತೆ ಗುಡ್ ಬಾಯ್ ಅನ್ನೋ ಸಿನಿಮಾದಲ್ಲಿ ರಶ್ಮಿಕಾ ನಟಿಸ್ತಿದ್ದಾರೆ. ಈಗ ಹೊಸ ವಿಚಾರವೆನಪ್ಪ ಅಂದ್ರೆ ಒಂದು ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಾಕಿ, ಅದ್ರಲೂ ಬಿಗ್ ಬಿ ಜೊತೆಗಿದ್ದ ಫೋಟೋವನ್ನ ಹಾಕಿ ಮತ್ತೆ ಡಿಲೀಟ್ ಮಾಡಿದ್ದಾರೆ.
blank
ರಶ್ಮಿಕಾ ಏನೇ ಸೋಶಿಯಲ್ ಸಮುದ್ರದಲ್ಲಿ ಹಾಕಿದ್ರು ದೊಡ್ಡ ಮಟ್ಟಕ್ಕೆ ಸೌಂಡ್ ಆಗೇ ಆಗುತ್ತೆ. ಕಾರಣ ರಶ್ಮಿಕಾ ಅವರನ್ನ ಸೋಶಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಫಾಲೋ ಮಾಡ್ತಾರೆ. ಇನ್​ಸ್ಟಾಗ್ರಾಮ್​​ನಲ್ಲಿ ರಶ್ಮಿಕಾಗೆ ಬರೋಬ್ಬರಿ 1 ಕೋಟಿ 90 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ. ಇಂತಹ ಫೇಮಸ್ ನಟಿ ಒಂದು ಪೋಸ್ಟ್ ಹಾಕಿ ಡಿಲೀಟ್ ಮಾಡ್ತಾರೆ ಅಂದ್ರೆ ಏನೋ ಮಿಸ್ಟ್ರಿ ಇದೆ ಅಂತ ಅರ್ಥ.

blank

ಬಾಲಿವುಡ್​ನಲ್ಲಿ ಗುಡ್ ಬಾಯ್ ಸಿನಿಮಾದ ಶೂಟಿಂಗ್​ನಲ್ಲಿರೊ ರಶ್ಮಿಕಾ, ಅಮಿತಾಭ್ ಬಚ್ಚನ್ ಹಾಗೂ ಚಿತ್ರತಂಡದ ಜೊತೆಗೆ ಜೋರ್ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದಾರೆ. ಬಿಗ್ ಬಿ ಜೊತೆ ಕುಣಿಯುತ್ತಿರೋ ಫೋಟೋವೊಂದನ್ನ ಸೋಶೀಯಲ್ ಸಮುದ್ರಲ್ಲಿ ತೇಲಿ ಬಿಟ್ಟು ಕೊನೆಗೆ ಡಿಲೀಟ್ ಮಾಡಿದ್ದಾರೆ. ಈ ರೀತಿ ಮಂದಣ್ಣ ಯಾಕೆ ಮಾಡಿದ್ರು ಅನ್ನೋದು ಗೊತ್ತಿಲ್ಲ.. ಆದ್ರೆ ಕೆಲವರ ಪ್ರಕಾರ ಕೋವಿಡ್ ಟೈಮ್​​ನಲ್ಲಿ ಪಾರ್ಟಿ ಮಾಡಿರೋ ಫೋಟೋ ಹಾಕಿದ್ರೆ ಜನ ವಿವಾದ ಮಾಡ್ತಾರೆ ಅನ್ನೋ ಭಯ ರಶ್ಮಿಕಾಗೆ ಬಂದಿರಬೇಕು. ಅದಕ್ಕೆ ಡಿಲೀಟ್ ಮಾಡಿರಬೇಕು ಎಂದು ಮಾತನಾಡಿಕೊಳ್ತಿದ್ದಾರೆ.

 

The post ಅರರೆ..! ನ್ಯಾಷನಲ್​ ಕ್ರಶ್​ಗೆ ಏನಾಯ್ತು? ಬಿಗ್​ಬಿ ಜೊತೆಗಿನ ‘ಪಾರ್ಟಿ ಫೋಟೊ’ ಡಿಲೀಟ್ appeared first on News First Kannada.

Source: newsfirstlive.com

Source link