ಮಾದಕ ವಸ್ತು, ಸೆಲೆಬ್ರಿಟಿಗಳ ದೌರ್ಜನ್ಯ ವಿರುದ್ಧ ಮತ್ತೆ ಧ್ವನಿ -ಮೈಸೂರು ಪೊಲೀಸ್ರ ಮೇಲೆ ಇಂದ್ರಜಿತ್ ಕೆಂಡ!

ಮಾದಕ ವಸ್ತು, ಸೆಲೆಬ್ರಿಟಿಗಳ ದೌರ್ಜನ್ಯ ವಿರುದ್ಧ ಮತ್ತೆ ಧ್ವನಿ -ಮೈಸೂರು ಪೊಲೀಸ್ರ ಮೇಲೆ ಇಂದ್ರಜಿತ್ ಕೆಂಡ!

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರು ಅಪರಾಧ ಚಟುವಟಿಕೆಗಳ ತಾಣವಾಗಿದೆ ಎಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇದೀಗ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿ ಮಾಡಿದ್ದಾರೆ.

ಇಂದ್ರಜಿತ್ ಲಂಕೇಶ್ ಆರೋಪವೇನು..?
ಆರ್​ಟಿ ನಗರದಲ್ಲಿರುವ ಬೊಮ್ಮಾಯಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮೈಸೂರಲ್ಲಿ ಮಾದಕ ವಸ್ತುಗಳ ಜಾಲ ತನ್ನ ಕಬಂಧ ಬಾಹು ವಿಸ್ತರಿಸಿದೆ. ಈ ವಿಚಾರದಲ್ಲಿ ಮೈಸೂರು ಜಿಲ್ಲಾ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಉದ್ಯಮಿಗಳು, ಪ್ರಭಾವಿಗಳು ಸಾಮಾನ್ಯರ ಮೇಲೆ ಒತ್ತಡ ಹಾಕ್ತಿದ್ದಾರೆ.

ಸಾಮಾನ್ಯರಿಗೆ ನ್ಯಾಯ ಸಿಗ್ತಿಲ್ಲ. ಸಿಡಿ ಲೇಡಿ ಪ್ರಕರಣದಲ್ಲಿ ವ್ಯವಸ್ಥೆ ಒತ್ತಡ ಹೇರಿತ್ತು. ಅರುಣಾಕುಮಾರಿ ವಿಚಾರದಲ್ಲೂ ಇದು ಮುಂದುವರೆದಿದೆ. ಅಪರಾಧ ಚಟುವಟಿಕೆ‌ ಹತ್ತಿಕ್ಕಿ ಕಾನೂನು ಕ್ರಮಕೈಗೊಳ್ಳಿ. ಮೈಸೂರು ಪೊಲೀಸರಿಗೆ ಬಿಸಿ ಮುಟ್ಟಿಸಿ. ಭ್ರಷ್ಟರನ್ನ ಅಮಾನತುಗೊಳಿಸಿ ಅನ್ನೋದು ಇಂದ್ರಜಿತ್ ಲಂಕೇಶ್ ಆಗ್ರಹವಾಗಿದೆ.

blank

The post ಮಾದಕ ವಸ್ತು, ಸೆಲೆಬ್ರಿಟಿಗಳ ದೌರ್ಜನ್ಯ ವಿರುದ್ಧ ಮತ್ತೆ ಧ್ವನಿ -ಮೈಸೂರು ಪೊಲೀಸ್ರ ಮೇಲೆ ಇಂದ್ರಜಿತ್ ಕೆಂಡ! appeared first on News First Kannada.

Source: newsfirstlive.com

Source link