ಚಾಲೆಂಜಿಂಗ್ ಸ್ಟಾರ್ ದರ್ಶನ್ & ಸ್ನೇಹಿತರ ಮೇಲೆ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಚಾಲೆಂಜಿಂಗ್ ಸ್ಟಾರ್ ದರ್ಶನ್ & ಸ್ನೇಹಿತರ ಮೇಲೆ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ಬೆಂಗಳೂರು: ಮೈಸೂರಿನ ಸಂದೇಶ್ ನಾಗರಾಜ್ ಹೋಟೆಲ್​​ನಲ್ಲಿ ವೇಟರ್​ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿದೆ. ಈ ಬಗ್ಗೆ ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು ಅಂತಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.

ಮೈಸೂರು ಪೊಲೀಸ್​ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸೂಕ್ತ ಹಾಗೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನ ಭೇಟಿಯಾಗಿ ಒತ್ತಾಯಿಸಿದರು.

ಪೊರಕೆ ಹಿಡಿದುಕೊಂಡು ಬಂದಿದ್ದಳು!
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್.. ಅರುಣಾಕುಮಾರಿ ಘಟನೆಗೂ ಮುನ್ನ ಇದೇ ದರ್ಶನ್, ರಾಕೇಶ್ ಪಾಪಣ್ಣ ಜೊತೆಗಿನ ತಂಡ ಸಂದೇಶ್ ನಾಗರಾಜ್ ಹೋಟೆಲ್​​ನಲ್ಲಿ ದೊಡ್ಡ ಗಲಾಟೆ ಮಾಡಿದೆ. ವೇಟರ್​ ಮೇಲೆ ಹಲ್ಲೆ ಮಾಡಲಾಗಿದೆ. ಇದರಿಂದ ಏಟು ತಿಂದವನ ಕಣ್ಣು ಬ್ಲರ್ ಆಗಿದೆ, ನಂತರ ಸೆಟ್ಲ್​ಮೆಂಟ್ ಮಾಡ್ತಾರೆ. ಈ ವೇಳೆ ಸಪ್ಲೈಯರ್ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ದಳು. ಆದರೆ ಈ ಪ್ರಕರಣವನ್ನ ಇವರು ಸೆಟ್ಲಮೆಂಟ್ ಮಾಡ್ತಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

The post ಚಾಲೆಂಜಿಂಗ್ ಸ್ಟಾರ್ ದರ್ಶನ್ & ಸ್ನೇಹಿತರ ಮೇಲೆ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ appeared first on News First Kannada.

Source: newsfirstlive.com

Source link