ಒಂದು ಸ್ಲಾಟ್​ಗೆ ನಾಲ್ವರ ಫೈಟ್.. ಕೊನೆಗೂ ​ಪೃಥ್ವಿಗೆ ಮಣೆ ಹಾಕಲು ಕಾರಣ ಇಲ್ಲಿದೆ

ಒಂದು ಸ್ಲಾಟ್​ಗೆ ನಾಲ್ವರ ಫೈಟ್.. ಕೊನೆಗೂ ​ಪೃಥ್ವಿಗೆ ಮಣೆ ಹಾಕಲು ಕಾರಣ ಇಲ್ಲಿದೆ

ಶ್ರೀಲಂಕಾ ಸರಣಿಯಲ್ಲಿ ಶಿಖರ್​​ ಧವನ್​ ಜೊತೆ ಇನ್ನಿಂಗ್ಸ್​​ ಆರಂಭಿಸೋದ್ಯಾರು ಅನ್ನೋ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಿದೆ. ಅಳೆದು ತೂಗಿ ಟೀಮ್ ಮ್ಯಾನೇಜ್​ಮೆಂಟ್​,​ ಪೃಥ್ವಿ ಶಾಗೆ ಮಣೆ ಹಾಕೋಕೆ ಸಿದ್ಧತೆ ನಡೆಸಿದೆ. ಅಷ್ಟಕ್ಕೂ ಮುಂಬೈಕರ್​ಗೆ ಟಿಕೆಟ್​ ನೀಡೋಕೆ ನಿರ್ಧರಿಸಿದ್ಯಾಕೆ..? ಅನ್ನೋ ಉತ್ತರ ಇಲ್ಲಿದೆ.

ಋತುರಾಜ್​ ಗಾಯಕ್ವಾಡ್​, ದೇವದತ್ತ್​​ ಪಡಿಕ್ಕಲ್​, ನಿತೀಶ್​ ರಾಣಾ ಹಾಗೂ ಪೃಥ್ವಿ ಷಾ ಆರಂಭಿಕರಾಗಿ ಈ ನಾಲ್ವರ ಸಾಮರ್ಥ್ಯ ಏನು ಅನ್ನೋದನ್ನ, ಐಪಿಎಲ್​ ಹಾಗೂ ದೇಶಿ ಕ್ರಿಕೆಟ್​​ನ ಅಂಕಿ-ಅಂಶಗಳೇ ಹೇಳ್ತವೆ. ಸಾಮರ್ಥ್ಯದ ಆಧಾರದಲ್ಲಿ ಈ ನಾಲ್ಕು ಆಟಗಾರರನ್ನ ಲಂಕಾ ಪ್ರವಾಸಕ್ಕೆ ಸೆಲೆಕ್ಷನ್​ ಕಮಿಟಿಯೇನೋ, ಆಯ್ಕೆ ಮಾಡಿ ಬಿಡ್ತು. ಆದ್ರೆ ಇರೋ ಒಂದು ಸ್ಲಾಟ್​ಗೆ ಯಾರನ್ನ ಆಯ್ಕೆ ಮಾಡೋದು ಅನ್ನೋದೇ, ಟೀಮ್​ ಮ್ಯಾನೇಜ್​ಮೆಂಟ್​​ ಅನ್ನ ಇಕ್ಕಟ್ಟಿಗೆ ಸಿಲುಕಿಸಿದ ವಿಚಾರ.

blank

ಇದೀಗ ಏಕದಿನ ಸರಣಿಗೂ ಮುನ್ನ ಈ ಒಂದು ವಿಚಾರದಲ್ಲಿ, ಸ್ಪಷ್ಟ ನಿಲುವು ತಳೆದಿದೆ ಅನ್ನೋ ಮೂಲದ ಮಾಹಿತಿ ಹೊರಬಿದ್ದಿದೆ. ಇದರ ಪ್ರಕಾರ ಯುವ ಆಟಗಾರರನ್ನ ಸೈಡ್​​ಲೈನ್​ ಮಾಡಿ, ಈಗಾಗಲೇ ಆಡಿದ ಅನುಭವವಿರುವ ಪೃಥ್ವಿ ಷಾಗೆ ಮಣೆ ಹಾಕಲು ಮ್ಯಾನೇಜ್​ಮೆಂಟ್​​ ನಿರ್ಧರಿಸಿದೆ.

ಪೃಥ್ವಿ ಆಯ್ಕೆಗೆ ಕಾರಣಗಳೇನು..?

  • ತಂಡದಿಂದ ಡ್ರಾಪ್​ ಆದ ಬಳಿಕ ಬೊಂಬಾಟ್​ ಪ್ರದರ್ಶನ
  • ವಿಜಯ್​​ ಹಜಾರೆಯಲ್ಲಿ 165.40 ಸರಾಸರಿಯಲ್ಲಿ ಬ್ಯಾಟಿಂಗ್​
  • 14ನೇ ಆವೃತ್ತಿ ಐಪಿಎಲ್​ನಲ್ಲಿ ಆರಂಭಿಕನಾಗಿ ಸಕ್ಸಸ್​
  • ಐಪಿಎಲ್​ನಲ್ಲಿ ಧವನ್​-​ಪೃಥ್ವಿ ಜೋಡಿಯ ಯಶಸ್ಸು
  • ಪೃಥ್ವಿ ಮರು ಆಯ್ಕೆಗೆ ರವಿ ಶಾಸ್ತ್ರಿ- ವಿರಾಟ್​ ಕೊಹ್ಲಿ ಒಲವು

ಟೀಮ್​ ಇಂಡಿಯಾದಿಂದ ಡ್ರಾಪ್​ ಆದ ಬಳಿಕ ವಿಜಯ್​ ಹಜಾರೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪೃಥ್ವಿ, ಐಪಿಎಲ್​ನಲ್ಲೂ ಧವನ್​ ಜೊತೆಗೂಡಿ ಸಾಲಿಡ್​ ಇನ್ನಿಂಗ್ಸ್​​​ಗಳನ್ನ ಕಟ್ಟಿದ್ರು. ಸ್ವತಃ ಕೋಚ್​ ರವಿ ಶಾಸ್ತ್ರಿ, ನಾಯಕ ವಿರಾಟ್​ ಕೊಹ್ಲಿ ಕೂಡ ಪೃಥ್ವಿ ಫಸ್ಟ್​​ String​ ಟೀಮ್​ನಲ್ಲಿರಬೇಕೆಂದು ಬಯಸ್ತಿದ್ದಾರೆ. ಹೀಗಾಗಿ ಲಂಕಾ ಸರಣಿಯಲ್ಲಿ ಯಂಗ್​ ಮುಂಬೈಕರ್​​ ಸಾಮರ್ಥ್ಯವನ್ನ, ಅಳೆಯೋ ಪ್ಲಾನ್​ ಮ್ಯಾನೇಜ್​ಮೆಂಟ್​​ದ್ದಾಗಿದೆ. ಒಟ್ಟಿನಲ್ಲಿ, ಇರೋ ನಾಲ್ವರಲ್ಲಿ ಪೃಥ್ವಿ ಬೆಸ್ಟ್​​ ಅನ್ನೋ ನಿರ್ಧಾರಕ್ಕೆ ಮ್ಯಾನೇಜ್​ಮೆಂಟ್​​ ಬಂದಾಗಿದೆ. ಆ ನಂಬಿಕೆಯನ್ನ ಪೃಥ್ವಿ ಉಳಿಸಿಕೊಳ್ತಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ಸ್ಲಾಟ್​​ ಒಂದು.. ಪೈಪೋಟಿ ಇಬ್ಬರ ನಡುವೆ.. ಇಬ್ಬರು ಶಿಷ್ಯರಲ್ಲಿ ದ್ರಾವಿಡ್​ ಕೃಪಟಾಕ್ಷ ಯಾರಿಗೆ?

The post ಒಂದು ಸ್ಲಾಟ್​ಗೆ ನಾಲ್ವರ ಫೈಟ್.. ಕೊನೆಗೂ ​ಪೃಥ್ವಿಗೆ ಮಣೆ ಹಾಕಲು ಕಾರಣ ಇಲ್ಲಿದೆ appeared first on News First Kannada.

Source: newsfirstlive.com

Source link