ದರ್ಶನ್ ವೇಟರ್​ಗೆ ಹಲ್ಲೆ ಮಾಡಿಲ್ಲ, ಬೈದಿದ್ದಾರೆ ಅಷ್ಟೇ -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ದರ್ಶನ್ ವೇಟರ್​ಗೆ ಹಲ್ಲೆ ಮಾಡಿಲ್ಲ, ಬೈದಿದ್ದಾರೆ ಅಷ್ಟೇ -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಮ್ಮ ವೇಟರ್​ ಮೇಲೆ ಹಲ್ಲೆ ಮಾಡಿಲ್ಲ, ಜಸ್ಟ್​ ಬೈದಿದ್ದಾರೆ ಅಷ್ಟೇ.. ಬೇರೆ ಏನೂ ನಡೆದಿಲ್ಲ ಅಂತಾ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಹೇಳಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು.. ಕೊರೊನಾ ಸಮಯದಲ್ಲಿ ನಮ್ಮದೆಯಾದ ಕಷ್ಟದಲ್ಲಿದ್ದೇವೆ. ನಮಗೆ ಇದೆಲ್ಲಾ ಅವಶ್ಯಕತೆ ಇಲ್ಲ. ನಿನ್ನೆ, ಮೊನ್ನೆಯ ಪ್ರಕರಣವನ್ನ ಗಮನಿಸುತ್ತಿದ್ದೇವೆ. ಹೋಟೆಲ್ ಅನ್ನೋದು ನಮ್ಮ ಹೊಟ್ಟೆಪಾಡು. ಇಲ್ಲಿ ನಮಗೆ ಯಾರೇ ಬೈದರೂ ಸಹಿಸಿಕೊಳ್ಳಬೇಕು. ಸಣ್ಣ, ಪುಟ್ಟ ಗಲಾಟೆ ಆಗಿದ್ದು ನಿಜ. ನೌಕರಿನಿಗೆ ಹೊಡೆದಿಲ್ಲ, ಬೈದಿದ್ದು ನಿಜ. ಆಗ ನಾನು ಮಧ್ಯ ಪ್ರವೇಶ ಮಾಡಿ ದರ್ಶನ್​ಗೆ ತಿಳಿ ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ & ಸ್ನೇಹಿತರ ಮೇಲೆ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ನಮ್ಮ ತಂದೆ ಎಂಎಲ್​ಸಿ. ಹೋಟೆಲ್ ನಡೆಸುತ್ತಿರೋದು ನಾನು. ಈ ರೀತಿಯ ತಪ್ಪು ಆಗಬಾರದು. ಹೋಟೆಲ್​ನಡೆಸೋದಕ್ಕೂ ತುಂಬಾ ಕಷ್ಟ ಆಗುತ್ತಿದೆ. ಕೆಲವ್ರೆಲ್ಲಾ ಪಬ್ಲಿಸಿಟಿಗೋಸ್ಕರ ಏನೆಲ್ಲಾ ಆರೋಪ ಮಾಡಿಕೊಂಡು, ಅವರ ಮರ್ಯಾದೆಯನ್ನ ಅವರೇ ತೆಗೆದುಕೊಂಡರು. ಪ್ರಚಾರಕ್ಕೆ ಏನೇನೋ ಕ್ರಿಯೇಟ್ ಮಾಡಿಕೊಳ್ತಾರೆ. ನಿನ್ನೆ ಮೊನ್ನೆಯದಕ್ಕೆಲ್ಲಾ ನಾನು ಭಾಗಿಯಾಗಿಲ್ಲ.

blank

ನನಗೆ ದರ್ಶನ್​ಗೂ ಗಲಾಟೆ ಆಗೋದೇ ಅವರು ಜನರನ್ನ ಕರೆದುಕೊಂಡು ಬರೋ ವಿಚಾರದಲ್ಲಿ. ಸುಮಾರು 15ರಿಂದ 30 ಜನ ಬರುತ್ತಾರೆ. ಇಷ್ಟೆಲ್ಲಾ ಜನರನ್ನ ಕರೆದುಕೊಂಡು ಬರಬೇಡಿ ಅಂತಾ ನಾನು ಹೇಳ್ತೇನೆ. ದರ್ಶನ್ ಯಾರ ಮೇಲೂ ಕೈಯೆತ್ತಿಲ್ಲ. ಬೈದಿದ್ದಾನೆ ಅಷ್ಟೇ. ಈ ಪ್ರಕರಣ ಮುಚ್ಚಿ ಹಾಕೋದ್ರಿಂದ ನನಗೆ ಯಾವುದೇ ಲಾಭ ಇಲ್ಲ. ಮಹಾರಾಷ್ಟ್ರದಿಂದ ಬಂದ ಟ್ರೈನಿ ಮೇಲೆ ಬೈದಿದ್ದಾನೆ. ಅವರಿಗೆ ಭಾಷೆ ಸಮಸ್ಯೆ ಇತ್ತು. ಈ ವಿಚಾರಕ್ಕೆ ಗಲಾಟೆ ಆಗಿದೆ ಅಂತಾ ಹೇಳಿದರು.

ಇದನ್ನೂ ಓದಿ: ಮಾದಕ ವಸ್ತು, ಸೆಲೆಬ್ರಿಟಿಗಳ ದೌರ್ಜನ್ಯ ವಿರುದ್ಧ ಮತ್ತೆ ಧ್ವನಿ -ಗೃಹ ಸಚಿವರ ಭೇಟಿಯಾದ ಇಂದ್ರಜಿತ್

The post ದರ್ಶನ್ ವೇಟರ್​ಗೆ ಹಲ್ಲೆ ಮಾಡಿಲ್ಲ, ಬೈದಿದ್ದಾರೆ ಅಷ್ಟೇ -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ appeared first on News First Kannada.

Source: newsfirstlive.com

Source link