ದರ್ಶನ್ vs ಇಂದ್ರಜಿತ್: ದೂರಿನ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು?

ದರ್ಶನ್ vs ಇಂದ್ರಜಿತ್: ದೂರಿನ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು?

ಬೆಂಗಳೂರು: ಮಾದಕ ವಸ್ತುಗಳು ಮತ್ತು ಸೆಲೆಬ್ರಿಟಿ ದೌರ್ಜನ್ಯ ಸಂಬಂಧ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನ ನಿರ್ದೇಶಕ ಇಂದ್ರಜಿತ್ ಲಂಕೇಶ್ ಭೇಟಿ ಮಾಡಿದ್ದಾರೆ.

ಈ ಭೇಟಿಯ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬೊಮ್ಮಾಯಿ.. ಇಂದು ಇಂದ್ರಜಿತ್ ಲಂಕೇಶ್ ನನ್ನನ್ನು ಭೇಟಿಯಾಗಿ ಮೈಸೂರಿನಲ್ಲಿ ಮಾದಕ ವಸ್ತುಗಳ ಹಾವಳಿ ಮತ್ತು ಮಹಿಳೆಯರ ಮೇಲಿನ ಗಣ್ಯರ ದೌರ್ಜನ್ಯ ಕುರಿತು ಬಿಗಿಯಾದ ಕ್ರಮ ತೆಗೆದುಕೊಳ್ಳುವಂತೆ ಮನವಿ ಪತ್ರ ನೀಡಿದ್ದಾರೆ. ನಾನು ಅದನ್ನು ಮೈಸೂರು ಪೊಲೀಸ್ ಕಮಿಷನರ್‌ಗೆ ವರ್ಗಾಯಿಸಿದ್ದೇನೆ. ಇದರ ಬಗ್ಗೆ ಕಮಿಷನರ್ ಕ್ರಮಕೈಗೊಳ್ಳುತ್ತಾರೆ ಎಂದರು.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ & ಸ್ನೇಹಿತರ ಮೇಲೆ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

blank

ಇಂದ್ರಜಿತ್ ಆರೋಪದ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ನೀಡಿರುವ ಮನವಿ ಪತ್ರದ ಮೇಲೆ ತನಿಖೆ ಮಾಡಲು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ವಿವರವಾಗಿ ಏನನ್ನೂ ಸ್ಪಷ್ಟ ಪಡಿಸಿಲ್ಲ. ಜೊತೆಗೆ ಯಾವುದೇ ಪುರಾವೆಗಳನ್ನೂ ಅವರು ನೀಡಿಲ್ಲ. ಹೀಗಾಗಿ ಅವರು ಮುಂದೆ ಯಾವುದೇ ಆರೋಪ ಮಾಡುವ ಮೊದಲು ದೂರು ದಾಖಲಿಸಿ ಆರೋಪ ಮಾಡಲಿ ಎಂದರು.

ಇದನ್ನೂ ಓದಿ: ದರ್ಶನ್ ವೇಟರ್​ಗೆ ಹಲ್ಲೆ ಮಾಡಿಲ್ಲ, ಬೈದಿದ್ದಾರೆ ಅಷ್ಟೇ -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ಡ್ರಗ್ಸ್​ ಕೇಸ್​ನಲ್ಲಿ ಸೆಲೆಬ್ರಿಟಿಗಳು ಭಾಗಿಯಾಗಿರುವುದರ ಕುರಿತು ಮಾತನಾಡಿ.. ಡ್ರಗ್ಸ್​ ಪ್ರಕರಣದಲ್ಲಿ ತುಂಬಾ ಬೇಜಾರಾಗಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ಪ್ರಭಾವ ಬಳಸಿ ಎಸ್ಕೇಪ್​ ಆಗುತ್ತಿದ್ದಾರೆ. ಪೊಲೀಸರು ಸಹಿತ ಸುಮ್ಮನೇ ಕರೆದು ವಿಚಾರಣೆ ಮಾಡಿ ಬಿಟ್ಟು ಕಳಿಸುತ್ತಿದ್ದಾರೆ. ಇವೆಲ್ಲದಕ್ಕೂ ಇನ್ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇದನ್ನೂ ಓದಿ: ದರ್ಶನ್ ಮೇಲೆ ಇಂದ್ರಜಿತ್ ಆರೋಪ -ಬೊಮ್ಮಾಯಿಗೆ ಕೊಟ್ಟ ದೂರಿನಲ್ಲಿ ಏನಿದೆ?

ಇದನ್ನೂ ಓದಿ: ಮಾದಕ ವಸ್ತು, ಸೆಲೆಬ್ರಿಟಿಗಳ ದೌರ್ಜನ್ಯ ವಿರುದ್ಧ ಮತ್ತೆ ಧ್ವನಿ -ಗೃಹ ಸಚಿವರ ಭೇಟಿಯಾದ ಇಂದ್ರಜಿತ್

The post ದರ್ಶನ್ vs ಇಂದ್ರಜಿತ್: ದೂರಿನ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಹೇಳಿದ್ದೇನು? appeared first on News First Kannada.

Source: newsfirstlive.com

Source link