ದರ್ಶನ್ ವಿರುದ್ಧ ಆರೋಪಗಳ ಸುರಿಮಳೆ; ಇಂದ್ರಜಿತ್ ಲಂಕೇಶ್ ಏನೆಲ್ಲ ಹೇಳಿದ್ರು?

ದರ್ಶನ್ ವಿರುದ್ಧ ಆರೋಪಗಳ ಸುರಿಮಳೆ; ಇಂದ್ರಜಿತ್ ಲಂಕೇಶ್ ಏನೆಲ್ಲ ಹೇಳಿದ್ರು?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸ್ನೇಹಿತರಾ ರಾಕೇಶ್ ಪಾಪಣ್ಣ, ಹರ್ಷ ಮೆಲಂಟಾ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಒಂದನ್ನ ಮಾಡಿದ್ದಾರೆ.

ಮಾಧ್ಯಮಗಳ ಎದುರ ಮಾತನಾಡಿರುವ ಇಂದ್ರಜಿತ್ ಲಂಕೇಶ್.. ಮೈಸೂರು ಜಿಲ್ಲೆಯಲ್ಲಿ ಸೆಲೆಬ್ರಿಟಿಗಳ ನಡವಳಿಕೆ, ಭಾಷೆ ಮಿತಿ ಮೀರುತ್ತಿದೆ. ನಾನು ಯಾರು ಪರ ಅಥವಾ ವಿರೋಧವೂ ಅಲ್ಲ. ನಾನು ಸಾಮಾನ್ಯರ ಪರ. ನಾನೊಬ್ಬ ಪತ್ರಕರ್ತನಾಗಿ, ಸಾಮಾನ್ಯ ಮನುಷ್ಯನಾಗಿ ನೋಡುತ್ತಿದ್ರೆ, ಜನಸಾಮಾನ್ಯರಿಗೆ ಎಲ್ಲಿಯೂ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಬೊಮ್ಮಾಯಿ ಅವರನ್ನ ಭೇಟಿಯಾಗಿದ್ದೇನೆ.

ಸೆಟ್ಲಮೆಂಟ್​ ಸ್ಟೇಷನ್ ಅದು!
ಮೈಸೂರಿನ ಪೊಲೀಸ್ ಸ್ಟೇಷನ್.. ಪೊಲೀಸ್​ ಸ್ಟೇಷನ್ ಆಗಿ ಉಳಿದಿಲ್ಲ. ಸೆಟ್ಲಮೆಂಟ್ ಸ್ಟೇಷನ್ ಆಗಿದೆ. ಇಲ್ಲಿ ಎಲ್ಲವನ್ನೂ ಸೆಟ್ಲಮೆಂಟ್ ಮಾಡಲಾಗುತ್ತಿದೆ. ಮಹಿಳೆ, ಸಾಮಾನ್ಯ ಜನರ ಸಮಸ್ಯೆಗಳನ್ನ ಸೆಟ್ಲಮೆಂಟ್​ ಮಾಡಲಾಗುತ್ತಿದೆ. ಯಾಕಂದ್ರೆ ಇವತ್ತೀನ ದಿನಗಳಲ್ಲಿ ಕೆಲವು ಸೆಲಬ್ರಿಟಿಗಳ ಮಾತುಗಳು ತುಂಬಾ ಭಯಾನಕವಾಗಿದೆ. ಬಳಸುವ ಪದಗಳು ಸರಿಯಾಗಿಲ್ಲ.

ಸಿಡಿ ಲೇಡಿ, ಅರುಣಾಕುಮಾರಿ ಅಂತಹ ಪ್ರಕರಣಗಳು ಸೆಟ್ಲಮೆಂಟ್ ಆಗಿಬಿಟ್ಟರೆ ತುಂಬಾ ದುರಂತ. ನಿನ್ನೆ ಅರುಣಾಕುಮಾರಿ ಮಾಧ್ಯಮಗಳ ಮೂಲಕ ಬಿಟ್ಟುಬಿಡಿ ಅಂತಾ ಹೇಳುತ್ತಿದ್ದಳು. ಆದರೆ ಆ ಸೆಲೆಬ್ರಿಟಿ ಮಾತನಾಡಿದ ಶೈಲಿಯನ್ನ ನೀವೇ ನೋಡಿ. ಅದಕ್ಕೆ ಆಕೆ ಭಯಪಟ್ಟಿರಬಹುದು. ಹಾಗಂತ ನಾನು ಯಾರ ಪರವೂ ಇಲ್ಲ.

ದರ್ಶನ್ ಅಂಡ್​ ಗ್ಯಾಂಗ್​ನಿಂದ ಹಲ್ಲೆ
ಒಬ್ಬ ಸಪ್ಲೈಯರ್​ಗೆ ಹೊಡೆಯೋದು ಅಂದ್ರೆ ಏನ್ರಿ? ನನ್ನ ವರದಿ ಪ್ರಕಾರ ಇದೇ ದರ್ಶನ್ ಅಂಡ್ ಗ್ಯಾಂಗ್ ಸಂದೇಶ್ ಪ್ರಿನ್ಸ್​ ಹೋಟೆಲ್​​ನಲ್ಲಿ ಹಲ್ಲೆ ಮಾಡಿದೆ. ಗಲಾಟೆ ನಂತರ ಅವರೆಲ್ಲ ಹೋಟೆಲ್​ನಿಂದ ಹೊರಗೆ ಹೋಗಿದೆ. ಅವತ್ತಿನ ಸಿಸಿಟಿವಿ ಡಿಲೀಟ್ ಕೂಡ ಆಗಿರುತ್ತದೆ, ಬೇಕಿದ್ದರೆ ನೋಡಿ.

ತಲೆ ಸೀಳುತ್ತೀನಿ ಅನ್ನೋದು ನಟನೆಯಲ್ಲ
ತಲೆ ಸೀಳುತ್ತೀನಿ. ತಲೆ ಒಡೆಯುತ್ತೀನಿ ಅನ್ನೋದು ನಟನೆಯಲ್ಲ. ನಿಜ ಜೀವನದಲ್ಲಿ ಹೊಡಿಯೋದು, ಬಡಿಯೋದನ್ನ ಸಾಕಷ್ಟು ನೋಡಿದ್ದೀವಿ. ಇನ್ನೂ ಬುದ್ಧಿ ಕಲಿತಿಲ್ವಾ? ಇವತ್ತು ಮೈಸೂರು ಪೊಲೀಸರು ಬಳೆ ತೊಟ್ಟಿದ್ದೀರಾ? ಯಾವುದೋ ನಟನ ಕೈಯಲ್ಲಿ ನೀವು ಇದ್ದೀರಾ? ನೊಂದಿದವರಿಗೆ ನ್ಯಾಯ ಒದಗಿಸಿಕೊಡಿ.

ಅರುಣಾಕುಮಾರಿಯನ್ನ ಯಾಕೆ ಮನೆಗೆ ಕರೆಸಿಕೊಂಡ್ರಿ..?
ಅರುಣಾಕುಮಾರಿಯನ್ನ ಯಾಕೆ ಕರೆಸಿಕೊಂಡಿದ್ದರು ಅನ್ನೋದಕ್ಕೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅವರನ್ನ ತೋಟಕ್ಕೆ ಯಾಕೆ ಕರೆಸಿಕೊಂಡಿದ್ದೀರಿ ಅನ್ನೋದನ್ನ ಪ್ರಶ್ನೆ ಮಾಡಬೇಕಿದೆ. ತಲೆ ಸೀಳುತ್ತೀನಿ, ತಲೆ ಒಡೆಯುತ್ತೀನಿ ಅಂತಾ ಹೇಳಿ.. ಇದೀಗ ನಿರ್ಮಾಪಕರೇ ಒಂದಾಗೋಣ ಅಂದ್ರೆ ಏನರ್ಥ? 25 ಕೋಟಿ ವಂಚನೆಯಾಗಿ ಕಾಂಪ್ರಮೈಸ್​ ಆದ್ರೆ ಏನರ್ಥ? ಅದಕ್ಕೆ ಬೆಲೆ ಇಲ್ವಾ? ಯಾಕೆ ಒಂದು ಮಹಿಳೆಗೆ ಬೆದರಿಕೆ ಹಾಕುತ್ತೀರಾ? ಯಾಕೆ ಅವರನ್ನ ಕರೆಸಿಕೊಂಡಿದ್ದೀರಾ? ಒಂದು ಲೇಡಿಗೆ ರೇಪ್​ ಆದರೂ ಹೀಗೆ ಮಾಡುತ್ತೀರಾ? ಹೀಗೆ ಗಂಭೀರ ಪ್ರಶ್ನೆಯನ್ನ ಇಂದ್ರಜೀತ್ ಲಂಕೇಶ್ ಕೇಳಿದ್ದಾರೆ.

 

The post ದರ್ಶನ್ ವಿರುದ್ಧ ಆರೋಪಗಳ ಸುರಿಮಳೆ; ಇಂದ್ರಜಿತ್ ಲಂಕೇಶ್ ಏನೆಲ್ಲ ಹೇಳಿದ್ರು? appeared first on News First Kannada.

Source: newsfirstlive.com

Source link