ದರ್ಶನ್​ಗೆ​ ವಂಚನೆ ಯತ್ನ ಪ್ರಕರಣ; ಕೇಸ್​ ಮುಚ್ಚಿ ಹಾಕಲು ಪ್ರಭಾವಿಯೊಬ್ಬರ ಒತ್ತಡ?

ದರ್ಶನ್​ಗೆ​ ವಂಚನೆ ಯತ್ನ ಪ್ರಕರಣ; ಕೇಸ್​ ಮುಚ್ಚಿ ಹಾಕಲು ಪ್ರಭಾವಿಯೊಬ್ಬರ ಒತ್ತಡ?

ಬೆಂಗಳೂರು : ದರ್ಶನ್​ ವಂಚನೆ ಯತ್ನ ಪ್ರಕರಣದ ಆರೋಪಿ ಅರುಣಾ ಕುಮಾರಿ ರಾಕೇಶ್​ ಪಾಪಣ್ಣ ಸಂಪರ್ಕದಲ್ಲಿದ್ದಾರಾ? ಎಂಬ ಅನುಮಾನಗಳು ಪ್ರಕರಣದ ಸುತ್ತ ಸುಳಿದಿವೆ. ದಶರ್ನ್​ ಆಪ್ತ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯನಾಗಿರುವ ಪಾಪಣ್ಣ ಮತ್ತು ಟೀಂ ಅರುಣಾ ಕುಮಾರಿಯ ಮೇಲೆ ಒತ್ತಡ ಹೇರಿ ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಇಂದ್ರಜಿತ್​ ಲಂಕೇಶ್​ ಆರೋಪಿಸಿದ್ದಾರೆ.

ರಾಕೇಶ್ ಪಾಪಣ್ಣ ಪರವಾಗಿ ರಾಜ್ಯದ ಪ್ರಭಾವಿ ನಾಯಕರೊಬ್ಬರ ಒತ್ತಡ ಹೇರಿದ್ದು ಒತ್ತಡಕ್ಕೆ ಮಣಿದು ಮೈಸೂರು ಪೊಲೀಸರು ಕೇಸ್ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಲಂಕೇಶ್​ ಬಹಿರಂಗವಾಗಿಯೇ ಆರೋಪಿಸಿದ್ದಾರೆ. ಲಂಕೇಶ್​ರ ಈ ಆರೋಪದ ನಂತರವಾದರೂ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಾ ಕಾಯ್ದು ನೋಡಬೇಕು.

The post ದರ್ಶನ್​ಗೆ​ ವಂಚನೆ ಯತ್ನ ಪ್ರಕರಣ; ಕೇಸ್​ ಮುಚ್ಚಿ ಹಾಕಲು ಪ್ರಭಾವಿಯೊಬ್ಬರ ಒತ್ತಡ? appeared first on News First Kannada.

Source: newsfirstlive.com

Source link