ವಿಕೆಟ್ ಕೀಪರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ -ಪಂತ್ ರಿಪ್ಲೇಸ್​ ಮಾಡ್ತಾರಾ ಕೆ.ಎಲ್​​.ರಾಹುಲ್

ವಿಕೆಟ್ ಕೀಪರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ -ಪಂತ್ ರಿಪ್ಲೇಸ್​ ಮಾಡ್ತಾರಾ ಕೆ.ಎಲ್​​.ರಾಹುಲ್

ಟೆಸ್ಟ್ ತಂಡದ ವಿಕೆಟ್ ಕೀಪರ್​ ಸ್ಥಾನಕ್ಕೆ, ಟ್ರಯಂಗಲ್ ಫೈಟ್​ ನಡೀತಿದೆ. ರಿಷಭ್ ಪಂತ್ ಪಟ್ಟದ ಮೇಲೆ ಇಬ್ಬರು ಕಣ್ಣಿಟ್ಟಿದ್ದಾರೆ. ಆದ್ರೆ ರಿಷಭ್ ಪಂತ್​​​ ಸ್ಥಾನವನ್ನ ರಿಪ್ಲೇಸ್​ ಮಾಡ್ತಾರಾ ಕೆ,ಎಲ್.ರಾಹುಲ್ ಌಂಡ್ ಸಹಾ..? ಈ ತ್ರಿಕೋನ ಫೈಟ್​ನಲ್ಲಿ ಗೆಲ್ಲೋ ಫೇವರಿಟ್ ಯಾರು?

ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಟೆಸ್ಟ್​ ಸರಣಿಗೆ ಕೌಂಟ್​ಡೌನ್ ಶುರುವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಸೋಲಿನ ಬಳಿಕ ನಡೆಯುತೀರೋ ಈ ಸರಣಿಯಲ್ಲಿ ಟೀಮ್ ಇಂಡಿಯಾ ಬದಲಾವಣೆಗಳೊಂದಿಗೆ ಕಣಕ್ಕಿಳಿಲಿದೆ.

blank

ಹೌದು, ವರ್ಲ್ಡ್​ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಕಿವೀಸ್ ವಿರುದ್ಧ ಉತ್ತಮ ಪ್ರದರ್ಶನ ನೀಡದ ರಿಷಭ್ ಪಂತ್​, ಎರಡೂ ಇನ್ನಿಂಗ್ಸ್​ಗಳಲ್ಲೂ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇದು ಟೀಮ್ ಇಂಡಿಯಾ ಸೋಲಿಗೂ ಕಾರಣವಾಗಿತ್ತು. ಹೀಗಾಗಿ ಇಂಗ್ಲೆಂಡ್ ಟೆಸ್ಟ್​ ಸರಣಿಯಲ್ಲಿ ಪಂತ್​ ಬದಲಿಗೆ, ಮತ್ತೊರ್ವ ವಿಕೆಟ್​ ಕೀಪರ್ ಗ್ಲೌಸ್​ ತೊಡುತ್ತಾರೆ ಎನ್ನಲಾಗ್ತಿದೆ.

ಪಂತ್ ಸ್ಥಾನ ರಿಪ್ಲೇಸ್ ಮಾಡ್ತಾರಾ ಕೆ.ಎಲ್.ರಾಹುಲ್?
ಖಂಡಿತ ಕೆ.ಎಲ್.ರಾಹುಲ್, ರಿಷಭ್ ಪಂತ್​ಗೆ ಪ್ರತಿಸ್ಪರ್ಧಿಯಲ್ಲ. ಸದ್ಯ ಟೆಸ್ಟ್ ತಂಡದಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್​ಮನ್ ಆಗಿ ರಾಹುಲ್ ಗುರುತಿಸಿಕೊಂಡರೂ ಪಂತ್ ರಿಪ್ಲೇಸ್​ಮೆಂಟ್​​ನ ಮೊದಲ ಆಯ್ಕೆ ಆಗಿಲ್ಲ. ಇದಕ್ಕಿಂತ ಮಿಗಿಲಾಗಿ ಕೆ.ಎಲ್.ರಾಹುಲ್ ಪರಿಪಕ್ವ ವಿಕೆಟ್ ಕೀಪರ್ ಅಲ್ಲ.!

blank

ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ, ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಮಾತ್ರವೇ ಇದೆ. ಅಲ್ಲದೇ ಮಧ್ಯಮ ಕ್ರಮಾಂಕದಲ್ಲೂ ರಾಹುಲ್​​​ರನ್ನ ಕಣಕ್ಕಿಳಿಸಲು ಟೀಮ್ ಇಂಡಿಯಾ ಥಿಂಕ್​ಟ್ಯಾಕ್ ಚಿಂತಿಸುತ್ತಿದೆ. ಇದಲ್ಲದೇ ಒಂದು ವೇಳೆ ಟೀಮ್ ಮ್ಯಾನೇಜ್​ಮೆಂಟ್ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್​ ಮೊರೆ ಹೋದ್ರೆ, ರಾಹುಲ್​​ ಮತ್ತೆ ಬೆಂಚ್ ಬಿಸಿ ಮಾಡಿದ್ರು ಅಚ್ಚರಿ ಇಲ್ಲ.

ಮತ್ತೆ ಸಹಾಗೆ ಸಿಗುತ್ತಾ ಗ್ಲೌಸ್ ತೊಡುವ ಅವಕಾಶ?
ರಿಷಭ್ ಪಂತ್ ಫಾರ್ಮ್ ಪ್ರಕಾರ ಬೆಂಚ್​​ ಕಾಯೋ ಚಾನ್ಸ್ ಇಲ್ಲದಿದ್ದರೂ, ವಿಕೆಟ್ ಹಿಂದೆ ಸೇಫ್ ಹ್ಯಾಂಡ್ ಕೀಪರ್ ವೃದ್ಧಿಮಾನ್ ಸಾಹ ಅನ್ನೋದರಲ್ಲಿ ಎರಡು ಮಾತಿಲ್ಲ. ಅದ್ರಲ್ಲೂ ಇಂಗ್ಲೆಂಡ್​ನ ಸ್ವಿಂಗ್ ಕಂಡೀಷನ್ಸ್​ನಲ್ಲಿ ಸಾಹ ಬೆಸ್ಟ್​ ಚಾಯ್ಸ್​. ಹೀಗಾಗಿ ಅನುಭವಿ ಸಹಾ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ರು, ಅಚ್ಚರಿ ಇಲ್ಲ.

ಟೀಮ್ ಇಂಡಿಯಾ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ, ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯುವ ಪ್ಲಾನ್​ನಲ್ಲಿದೆ. ಹೀಗಾಗಿ ತಂಡಕ್ಕೆ ಬೆಸ್ಟ್ ವಿಕೆಟ್ ಕೀಪರ್ ಸೆಲೆಕ್ಷನ್ ಮಾಡಲು ಹೊರಟಿದೆ.

blank

The post ವಿಕೆಟ್ ಕೀಪರ್ ಸ್ಥಾನಕ್ಕೆ ತ್ರಿಕೋನ ಸ್ಪರ್ಧೆ -ಪಂತ್ ರಿಪ್ಲೇಸ್​ ಮಾಡ್ತಾರಾ ಕೆ.ಎಲ್​​.ರಾಹುಲ್ appeared first on News First Kannada.

Source: newsfirstlive.com

Source link