ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್ -ಹಲ್ಲೆ ಆರೋಪಕ್ಕೆ ದರ್ಶನ್ ಖಡಕ್​ ಉತ್ತರ

ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್ -ಹಲ್ಲೆ ಆರೋಪಕ್ಕೆ ದರ್ಶನ್ ಖಡಕ್​ ಉತ್ತರ

ಬೆಂಗಳೂರು: ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್​, ಅವರು ತುಂಬಾ ದೊಡ್ಡವರು ಅಂತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

ಇಂದು ಬೆಳಗ್ಗೆ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿಂತೆ ಮಾಧ್ಯಮಗಳ ಜೊತೆ ಮಾತನಾಡಿದ ದರ್ಶನ್.. ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದಾರೆ ಅಷ್ಟೇ ತಾನೆ. ಅದು ಆರೋಪ. ಅವರು ಏನಾದರೂ ಮಾಡಿಕೊಳ್ಳಲಿ.

ಇದನ್ನೂ ಓದಿ: ದರ್ಶನ್ ವೇಟರ್​ಗೆ ಹಲ್ಲೆ ಮಾಡಿಲ್ಲ, ಬೈದಿದ್ದಾರೆ ಅಷ್ಟೇ -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ಅರುಣಾಕುಮಾರಿ ಜೂನ್ 16 ರಂದು ನಮ್ಮ ಮನೆಗೆ ಬಂದಾಗ, ನಿಮಗೆ ಸಮಸ್ಯೆ ಆದರೆ ನಿಮ್ಮ ಪರ ನಾನು ನಿಲ್ತೀನಿ ಅಂತಾ ಹೇಳಿದ್ದೆ. ಇದೀಗ ಯಾವತ್ತಿನೋ ಪ್ರಕರಣವನ್ನ ಇಂದು ತೆಗೆದಿದ್ದಾರೆ. ನಾನು ತೆಗೀತಾ ಎರಡು ವರ್ಷಗಳ ಹಿಂದಿನ ಪ್ರಕರಣವನ್ನ? ಯಾವುದೇ ಕಾರಣಕ್ಕೂ ಅರುಣಾ ಕುಮಾರಿ ಕೇಸ್​ ಅನ್ನ ವೈಂಡಪ್​ ಮಾಡುವಂತೆ ನಾನು ಹೇಳಿಲ್ಲ. ಸ್ನೇಹಿತ ಮಧ್ಯೆ ವೈಮನಸ್ಸು ಆಗೋದು ಬೇಡ ಅಂತಾ ನಾನು ಹೇಳಿದ್ದೆ. ನಾನಾಗ ಹೇಳಿಲ್ವಾ? ಈ ಪ್ರಕರಣದಲ್ಲಿ ಕಾಣದ ಕೈ ಕೆಲಸ ಮಾಡುತ್ತಿದೆ ಅಂತಾ. ಇವತ್ತಿನಿಂದಲೇ ಪ್ರಕರಣದ ತನಿಖೆಯನ್ನ ಆರಂಭಿಸೋಣ ಎಂದರು.

ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ & ಸ್ನೇಹಿತರ ಮೇಲೆ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ

ನನ್ನದು ಮತ್ತು ಸಂದೇಶ್ ಅವರದ್ದು ಸಾವಿರ ಗಲಾಟೆ ಇದೆ..
ನನ್ನದು ಮತ್ತು ಸಂದೇಶ್ ಅವರದ್ದು ಸಾವಿರ ಗಲಾಟೆ ಇದೆ. ಆದರೆ ಇಲ್ಲಿ ಪ್ರಕರಣವನ್ನ ಹೇಗೆಲ್ಲಾ ತಿರುಗಿಸುತ್ತಿದ್ದಾರೆ ಅನ್ನೋದಕ್ಕೆ ಇದೇ ಕಾರಣ. ಅದು ಅವರ ಆರೋಪ ತಾನೇ? ಅವರನ್ನೇ ಕೇಳಿಕೊಳ್ಳಿ. ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಷನ್, ಅವರು ತುಂಬಾ ದೊಡ್ಡವರು. ಇಂದ್ರಜಿತ್ ಮೊದಲು ಪ್ರೂವ್ ಮಾಡಿಕೊಳ್ಳಲಿ. ಇನ್ನೂ ಈ ಪ್ರಕರಣದಲ್ಲಿ ಎಕ್ಸ್​, ವೈ, ಝೆಡ್​ ಕೂಡ ಸೇರಬಹುದು.

ನಾನೊಬ್ಬ ಹ್ಯೂಮನ್ ಬಿಯಿಂಗ್ಸ್​, ನಾನು ಮಾತಾಡಿದ್ದ ಮಾತ್ರಕ್ಕೆ ರಫ್. ಸೆಲೆಬ್ರಿಟಿ ಅಂತಾ ಬಣ್ಣಹಚ್ಚಿ ಮಾತಾಡಬೇಕಾ? ಪೊಲೀಸ್ ತನಿಖೆಯಲ್ಲಿ ಏನಿದೆ? ಅಂತಾ ಪ್ರಶ್ನೆ ಮಾಡಿದರು.

ಇದನ್ನೂ ಓದಿ: ದರ್ಶನ್ ವಿರುದ್ಧ ಆರೋಪಗಳ ಸುರಿಮಳೆ; ಇಂದ್ರಜಿತ್ ಲಂಕೇಶ್ ಏನೆಲ್ಲ ಹೇಳಿದ್ರು?

ಇದನ್ನೂ ಓದಿ: ದರ್ಶನ್ ಮೇಲೆ ಇಂದ್ರಜಿತ್ ಆರೋಪ -ಬೊಮ್ಮಾಯಿಗೆ ಕೊಟ್ಟ ದೂರಿನಲ್ಲಿ ಏನಿದೆ?

ಇದನ್ನೂ ಓದಿ: ಮಾದಕ ವಸ್ತು, ಸೆಲೆಬ್ರಿಟಿಗಳ ದೌರ್ಜನ್ಯ ವಿರುದ್ಧ ಮತ್ತೆ ಧ್ವನಿ -ಗೃಹ ಸಚಿವರ ಭೇಟಿಯಾದ ಇಂದ್ರಜಿತ್

The post ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್ -ಹಲ್ಲೆ ಆರೋಪಕ್ಕೆ ದರ್ಶನ್ ಖಡಕ್​ ಉತ್ತರ appeared first on News First Kannada.

Source: newsfirstlive.com

Source link