ಟೀಮ್ ಇಂಡಿಯಾಗೆ ಕೊರೊನಾಘಾತ -ರಿಷಭ್ ಪಂತ್​ಗೆ ಸೋಂಕು ದೃಢ

ಟೀಮ್ ಇಂಡಿಯಾಗೆ ಕೊರೊನಾಘಾತ -ರಿಷಭ್ ಪಂತ್​ಗೆ ಸೋಂಕು ದೃಢ

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗೂ ಮುನ್ನ ಟೀಮ್ ಇಂಡಿಯಾಕ್ಕೆ ಕೊರೊನಾಘಾತ ಎದುರಾಗಿದೆ. ಟೀಮ್ ಇಂಡಿಯಾದ ಸ್ಟಾರ್​ ಆಟಗಾರ ರಿಷಭ್ ಪಂತ್​ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂಡೋ-ಇಂಗ್ಲೆಂಡ್ ಸರಣಿ ಮೇಲೆಯೂ ಕೊರೊನಾ ಕರಿಛಾಯೆ ಮೂಡಿದೆ.

ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಮೂಲಗಳ ಪ್ರಕಾರ, ಸೋಂಕು ತಂಡದ ಸದಸ್ಯರ ಪರೀಕ್ಷಾ ವರದಿ ಬಂದಿದ್ದು, ಪಂತ್​ರಲ್ಲಿ ಗಂಟಲು ನೋವು ಹಾಗೂ ಕೆಮ್ಮು ಹಾಗೂ ಶೀತವಿರುವುದಾಗಿ ತಿಳಿದುಬಂದಿದೆ.

ಪಂತ್​​ರನ್ನು ಇದೀಗ ಐಸೋಲೇಷನ್​​​ನಲ್ಲಿ ಇರಿಸಲಾಗಿದ್ದು, ಇನ್ನುಳಿದಂತೆ ಉಳಿದೆಲ್ಲಾ ಆಟಗಾರರು ದುರ್ಹಾಮ್​ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಕೌಂಟಿ ಚಾಂಪಿಯನ್ ಇಲೆವೆನ್​ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯಕ್ಕೂ ಪಂತ್​ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಆಗಸ್ಟ್​ 4ರಿಂದ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿ ಆರಂಭವಾಗಲಿದ್ದು, 3 ವಾರಗಳ ಮೊದಲು ಈ ಸುದ್ದಿ ಹೊರ ಬಿದ್ದಿರೋದು ಆತಂಕಕ್ಕೆ ಕಾರಣವಾಗಿದೆ.

The post ಟೀಮ್ ಇಂಡಿಯಾಗೆ ಕೊರೊನಾಘಾತ -ರಿಷಭ್ ಪಂತ್​ಗೆ ಸೋಂಕು ದೃಢ appeared first on News First Kannada.

Source: newsfirstlive.com

Source link