ಶುಭಾ ಪೂಂಜಾ ಕಡೆ ವಾಲಿದ ಮಂಜು.. ದಿವ್ಯಾ ಸುರೇಶ್​ ಕಣ್ಣೀರು..

ಶುಭಾ ಪೂಂಜಾ ಕಡೆ ವಾಲಿದ ಮಂಜು.. ದಿವ್ಯಾ ಸುರೇಶ್​ ಕಣ್ಣೀರು..

ಮೊದಲ ಇನ್ನಿಂಗ್ಸ್​ನಲ್ಲಿ ಕುಂತರೂ ನಿಂತರೂ ಒಬ್ಬರ ಜಪ ಒಬ್ಬರು ಮಾಡುತ್ತಿದ್ದ ದಿವ್ಯಾ ಸುರೇಶ್​ ಮತ್ತು ಲ್ಯಾಗ್​ ಮಂಜು, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಚಕ್ರವರ್ತಿ ಅವರು ಮಾಡಿದ ಆರೋಪಗಳಿಂದ ಹತ್ತಿರ ಇದ್ದರೂ ದೂರಾ ಆಗಿದ್ದಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಅಷ್ಟೇಯಲ್ಲ ಇದು ದಿವ್ಯಾ ಸುರೇಶ್​ ಅವರ ಮನದಾಳದ ಮಾತು ಕೂಡ.

ನಿನ್ನೇಯ ಎಪಿಸೋಡ್​ನಲ್ಲಿ ಬಿಗ್​ ಬಾಸ್ ಚಾಲೆಂಜ್​ ಅಡ್ಡಾ​ ಸರಣಿಯಲ್ಲಿ ನಾ ಹಾಡಲು ನೀವು ಹಾಡಬೇಕು ಎಂಬ ಟಾಸ್ಕ್​ ನೀಡಿದ್ದರು. ಈ ಕುರಿತು ಮಂಜು ಅವರು ಟೀಮ್​ ಜೊತೆ ಚರ್ಚೆ ಮಾಡಲು ದಿವ್ಯಾ ಸುರೇಶ್​ ಅವರನ್ನು ಕರೆಯುತ್ತಾರೆ.

blank

ಇದಕ್ಕೆ ದಿವ್ಯಾ ಎಸ್​ ಸರಿಯಾಗಿ ಸ್ಪಂದಿಸದಿದ್ದಕ್ಕೆ ಅಸಮಾಧನಗೊಂಡ ಮಂಜು ದಿವ್ಯಾ ಅವರ ಮೇಲೆ ರೇಗುತ್ತಾರೆ. ಇದ್ರಿಂದ ಕೋಪಗೊಂಡ ದಿವ್ಯಾ ಎಸ್​, ಪ್ರಿಯಾಂಕಾ ಅವರ ಮುಂದೆ ಬೇಸರ ವ್ಯಕ್ತಪಡಿಸುತ್ತಾರೆ.
ನಾವು ಮೊದಲ ಇನ್ನಿಂಗ್ಸ್​ನಲ್ಲಿ ಹೇಗಿದ್ದೇವು ಹಾಗೇ ಇರುವುದಕ್ಕೆ ಆಗಲ್ಲ ಅಂತಾ ಹೇಳಿದ್ದೇ ಅವನು. ನಾನು ಎಲ್ಲರ ಜೊತೆ ಮಾತ್ನಾಡಬೇಕಾಗುತ್ತೆ, ಟಾಸ್ಕ್​ ಮಾಡ್ಬೇಕು. ಸುದೀಪ್​ ಸರ್​ ಕೂಡಾ ನಾನು ಚೆನ್ನಾಗಿ ಆಡ್ತೀದ್ದಿನಿ ಅಂತಾ ಹೇಳಿದ್ದಾರೆ. ಅದನ್ನು ನಾನು ಉಳಿಸಿಕೊಳ್ಳಬೇಕು. ಕೋಪದಿಂದ ನನ್ನ ಮೇಲೆ ಮಂಜು ರೇಗಾಡಿದ. ಆ ತರಹ ಮಾಡು ಅವಶ್ಯಕತೆ ಇಲ್ಲ. ಅವನು ಶುಭಾ ಜೊತೆ ಎಷ್ಟೊಂದು ಕ್ಲೂಸ್​ ಆಗಿದ್ದಾನೆ.

ನಾನು ಅವನ ಪಕ್ಕಾ ಕೂತ್ಕೋಳ್ಳೊಕ್ಕೂ ಯೋಚನೆ ಮಾಡ್ತೀನಿ, ನಾನು ಅವನಿಗೆ ಅವರ ಜೊತೆ ಸೇರಬೇಡ, ಇವರ ಜೊತೆ ಸೇರಬೇಡ ಅಂತಾ ಹೇಳಿದ್ದಿನಾ, ಸುಮ್ನೇ ನನ್ನ ಮೇಲೆ ರೇಗಾಡಿದ್ರೇ ನಂಗೆ ಸಹಿಸೋಕೆ ಆಗಲ್ಲ ಎಂದು ದಿವ್ಯಾ ಸುರೇಶ್​ ಕಣ್ಣೀರು ಹಾಕುತ್ತಾರೆ.

blank

ಟಾಸ್ಕ್​ ಮುಗಿದ ನಂತರ ಮಂಜು ಅವರು ದಿವ್ಯಾರನ್ನು ಕರೆದು ಕ್ಲಾರೀಫಿಕೇಶನ್​ ನೀಡುತ್ತಾರೆ. ನಾನು ಬೇಕು ಅಂತಾ ಮಾಡ್ಲಿಲ್ಲ. ಅಲ್ಲಿ ಟೈಮ್​ ಇರಲಿಲ್ಲ ಅದಕ್ಕೆ ಆ ತರಹ ಹೇಳಿದೆ. ಬೇಜಾರ್​ ಆಗಿದ್ದರೆ ಸಾರಿ ಎನ್ನುತ್ತಾರೆ.
ಒಟ್ನಲ್ಲಿ ಎರಡು ತಂಡಕ್ಕೆ ಗೆಲ್ಲುವ ಅನಿವಾರ್ಯತೆ ಇದ್ದು, ಹಳೆಯ ಬೇಸರಗಳು ಒಂದಕ್ಕೊಂದು ಲಿಂಕ್​ ಪಡೆದು, ಇನ್ನೂ ಯಾರ್​ಯಾರು ಕಣ್ಣೀರು ಹಾಕ್ತಾರೋ ಗೊತ್ತಿಲ್ಲ.

blank

The post ಶುಭಾ ಪೂಂಜಾ ಕಡೆ ವಾಲಿದ ಮಂಜು.. ದಿವ್ಯಾ ಸುರೇಶ್​ ಕಣ್ಣೀರು.. appeared first on News First Kannada.

Source: newsfirstlive.com

Source link