ರಿಷಭ್ ಪಂತ್‍ಗೆ ಕೊರೊನಾ ಪಾಸಿಟಿವ್

ಲಂಡನ್: ಟೀಂ ಇಂಡಿಯಾ ಕೀಪರ್ ರಿಷಭ್ ಪಂತ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಂಗ್ಲೆಂಡ್ ಪ್ರವಾಸದಲ್ಲಿರುವ ಪಂತ್ ಅವರಿಗೆ ಕೊರೊನಾ ಬಂದಿರುವುದನ್ನು ಬಿಸಿಸಿಐ ದೃಢಪಡಿಸಿದೆ.

ಪಂತ್ ಅವರಿಗೆ ಯಾವುದೇ ರೋಗ ಲಕ್ಷಣವಿಲ್ಲ. ಅವರು ಕ್ವಾರಂಟೈನ್ ಆಗಿದ್ದು ಗುರುವಾರ ಡರ್ಹಾಮ್‍ಗೆ ತೆರಳುತ್ತಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿ, ಟೀಂ ಇಂಡಿಯಾದ ಓರ್ವ ಆಟಗಾರನಿಗೆ ಕೊರೊನಾ ಬಂದಿದ್ದು, ಕಳೆದ 8 ದಿನಗಳಿಂದ ಕ್ವಾರಂಟೈನ ಆಗಿದ್ದಾನೆ. ಆತ ಹೋಟೆಲಿನಲ್ಲಿ ತಂಡದ ಜೊತೆ ತಂಗಿಲ್ಲ. ಯಾವೊಬ್ಬ ಆಟಗಾರನಿಗೆ ಕೊರೊನಾ ಬಂದಿಲ್ಲ. ಆಟಗಾರನ ಹೆಸರನ್ನು ನಾನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ : ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

ಕೆಲ ದಿನಗಳ ಹಿಂದೆ ಯುರೋ ಕಪ್ ಫುಟ್‍ಬಾಲ್ ಟೂರ್ನಿಯ ಇಂಗ್ಲೆಂಡ್ ಮತ್ತು ಜರ್ಮನಿ ತಂಡಗಳ ನಡುವಿನ ಪಂದ್ಯವನ್ನು ಸ್ನೇಹಿತನ ಜೊತೆ ಪಂತ್ ವೀಕ್ಷಣೆ ಮಾಡಿದ್ದರು.

ಇಂಗ್ಲೆಂಡ್ ಪ್ರವಾಸದಲ್ಲಿರುವ 23 ಕ್ರಿಕೆಟಿಗರ ಪೈಕಿ ಇಬ್ಬರಿಗೆ ಕೊರೊನಾ ಬಂದಿದೆ ಎಂದು ವರದಿಯಾಗಿತ್ತು.

The post ರಿಷಭ್ ಪಂತ್‍ಗೆ ಕೊರೊನಾ ಪಾಸಿಟಿವ್ appeared first on Public TV.

Source: publictv.in

Source link