ಭಾರತದ ಅತಿ ದೊಡ್ಡ ಆ್ಯಕ್ಷನ್​ ಸಿನಿಮಾ ಮೇಕಿಂಗ್​​​​ ನೋಡಿದ್ರೆ ಅಬ್ಬಬ್ಬಾ ಅನ್ನದೇ ಇರಲ್ಲ..!

ಭಾರತದ ಅತಿ ದೊಡ್ಡ ಆ್ಯಕ್ಷನ್​ ಸಿನಿಮಾ ಮೇಕಿಂಗ್​​​​ ನೋಡಿದ್ರೆ ಅಬ್ಬಬ್ಬಾ ಅನ್ನದೇ ಇರಲ್ಲ..!

ಶುರುವಾಗಿದೆ ರಾಜಮೌಳಿಯ ಸಿನಿಮಾದ ಕ್ರೇಜ್​​​​​.. ಅಕ್ಟೋಬರ್ 13ನೇ ತಾರೀಖ್ ಪ್ರೇಕ್ಷಕರ ಮುಂದೆ ಬರೋ ಯೋಜನೆಯಲ್ಲಿರೋ ಥ್ರಿಬಲ್ ಆರ್ ತಂಡ ಅದ್ಧೂರಿ ಮೇಕಿಂಗ್ ಒಂದನ್ನ ಹೊರ ಬಿಟ್ಟು ಪ್ರಚಾರದ ರಣಕಹಳೆಯನ್ನ ಊದಿದ್ದಾರೆ..

ಎಸ್​.ಎಸ್.ರಾಜಮೌಳಿಯವರ ಸಿನಿಮಾಗಳೆಂದ್ರೆ ಯೂನಿಯವರ್ಸೆಲ್ ಸಿನಿ ಪ್ರೇಕ್ಷಕರ ತುದಿಗಾಲಿನಲ್ಲಿ ಕುಳಿತು ನೋಡುತ್ತಾರೆ.. ಅದಂತೆ ರೌದ್ರ ರಣ ರುಧಿರ ಸಿನಿಮಾದ ಚಿಕ್ಕ ಚಿಕ್ಕ ತುಣುಕುಗಳು ಪೋಸ್ಟರ್​​ಗಳು ಹೊರ ಬರುತ್ತಿದಂಗೆ ಸಖತ್ ಸೌಂಡ್ ಆಗುತ್ತಾ ಬಂದಿವೆ.. ಈಗ ಸಿನಿಮಾ ಹೇಗೆ ನಿರ್ಮಾಣ ವಾಯ್ತು ಅನ್ನೋದನ್ನ ರೋಚಕವಾಗಿ ಚಿತ್ರಪ್ರೇಮಿಗಳ ಮುಂದೆ ಬಿಚ್ಚಿಟ್ಟಿದ್ದಾರೆ ರಾಜಮೌಳಿ..

blankಟಾಲಿವುಡ್ ಸ್ಟಾರ್ ನಟರಾದ ಜೂನಿಯರ್ ಎನ್​​.ಟಿ.ಆರ್ , ರಾಮ್ ಚರಣ್, ಬಾಲಿವುಡ್​​ನ ಅಜೇಯ್ ದೇವ್​ಗಾನ್ ಹಾಗೂ ಆಲಿಯಾ ಭಟ್ ಮುಖ್ಯಭೂಮಿಕೆಯ ಚಿತ್ರ ಇದಾಗಿದೆ.. ಬಾಹುಬಲಿ ಸಿನಿಮಾ ಮಾಡಿ ವಿಶ್ವಾದ್ಯಂತ ಸದ್ದು ಮಾಡಿದ್ದ ರಾಜಮೌಳಿ ಭಾರಿ ಇತಿಹಾಸದ ಕಥೆಯೊಂದರ ಮೂಲಕ ಪ್ರೇಕ್ಷಕರ ರಂಜಿಸಲು ಸಜ್ಜಾಗಿದ್ದಾರೆ.. ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ಥ್ರಿಬಲ್ ಆರ್ ಸಿನಿಮಾ ಸಿದ್ಧವಾಗಿ ನಿಂತಿದೆ..

 

The post ಭಾರತದ ಅತಿ ದೊಡ್ಡ ಆ್ಯಕ್ಷನ್​ ಸಿನಿಮಾ ಮೇಕಿಂಗ್​​​​ ನೋಡಿದ್ರೆ ಅಬ್ಬಬ್ಬಾ ಅನ್ನದೇ ಇರಲ್ಲ..! appeared first on News First Kannada.

Source: newsfirstlive.com

Source link