ಖಾಯಂ ಸ್ಥಾನಕ್ಕೆ ಮುಂಬೈಕರ್ಸ್ ಫೈಟ್ – ಶ್ರೇಯಸ್​ ಕಮ್​​ಬ್ಯಾಕ್​ಗೆ ಸೂರ್ಯನೇ ವಿಲನ್?​

ಖಾಯಂ ಸ್ಥಾನಕ್ಕೆ ಮುಂಬೈಕರ್ಸ್ ಫೈಟ್ – ಶ್ರೇಯಸ್​ ಕಮ್​​ಬ್ಯಾಕ್​ಗೆ ಸೂರ್ಯನೇ ವಿಲನ್?​

ಸದ್ಯ ಟೀಮ್ ಇಂಡಿಯಾದ ಪರಿಸ್ಥಿತಿ ನೋಡಿದ್ರೆ, ತಂಡದಲ್ಲಿನ ಯಾವೊಬ್ಬ ಆಟಗಾರನ ಸ್ಥಾನವೂ ಖಾಯಂ ಅಲ್ಲ. ಯಾಕಂದ್ರೆ ತಂಡದಲ್ಲಿ ಪ್ರತಿಯೊಂದು ಸ್ಲಾಟ್​ಗೂ ಪೈಪೋಟಿ ನಡೀತಿದೆ. ಆದರೆ ಈಗ ಇದೇ ಪೈಪೋಟಿ, ಮುಂಬೈಕರ್ ಆಟಗಾರರ ನಡುವೆ ನಡೀತಿದೆ. ಈ ಕುರಿತಾದ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ..

ದಿನೇ ದಿನೇ ಟೀಮ್ ಇಂಡಿಯಾದಲ್ಲಿ ಕಾಂಪಿಟೇಷನ್ ಹೆಚ್ಚಾಗ್ತಿದೆ. ಇದು ತಂಡದಲ್ಲಿರೋ ಆಟಗಾರರ ಸ್ಥಾನವನ್ನ ಅತಂತ್ರಕ್ಕೆ ಸಿಲುಕಿಸ್ತಿದೆ. ಇದು ಇಂಜುರಿಯಿಂದ ತಂಡದಿಂದ ಹೊರಗುಳಿದ ಶ್ರೇಯಸ್ ಅಯ್ಯರ್​​ಗೂ ಅನ್ವಯವಾಗ್ತಿದೆ. ಅದು ಕೂಡ ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್​​​ವೇ ಮುಳುವಾಗ್ತಿದ್ದಾರೆ.

blank

ಹೌದು, ಒಂದೆಡೆ ಶ್ರೇಯಸ್​ ಅಯ್ಯರ್​ ರಾಷ್ಟ್ರೀಯ ತಂಡಕ್ಕೆ ಕಮ್​​ಬ್ಯಾಕ್​​ ಲೆಕ್ಕಚಾರದಲ್ಲಿದ್ರೆ, ಇತ್ತ ತಂಡದಲ್ಲಿ ನೆಲೆಯೂರಲು ಮುಂದಾಗಿರುವ ಸೂರ್ಯಕುಮಾರ್ ಯಾದವ್​, ಶ್ರೇಯಸ್​​ ಅಯ್ಯರ್​ ವೃತ್ತಿ ಜೀವನಕ್ಕೆ ವಿಲನ್ ಆಗಲು ಹೊರಟ್ಟಿದ್ದಾರೆ..

ಶ್ರೇಯಸ್​ ಅಯ್ಯರ್​ ಬದುಕಲ್ಲಿ ಕತ್ತಲಾಗ್ತಾರಾ ಸೂರ್ಯ?
ಈಗಾಗಲೇ ಇಂಜುರಿ ಕಾರಣ ಮೂರು ತಿಂಗಳ ವಿಶ್ರಾಂತಿಯಲ್ಲಿದ್ದ ಶ್ರೇಯಸ್, ಸಂಪೂರ್ಣ ಫಿಟ್ ಆಗಲು ಒಂದು ತಿಂಗಳ ಕಾಲವಕಾಶ ಬೇಕಾಗಿದೆ. ಆದ್ರೆ ಶ್ರೇಯಸ್​ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸೂರ್ಯಕುಮಾರ್, ಇತ್ತ ಅದ್ಬುತ ಪ್ರದರ್ಶನದಿಂದ ಗಮನ ಸೆಳೆದಿದ್ದಾನೆ.

ಲಂಕಾ ಸರಣಿಗೂ ಸಜ್ಜಾಗ್ತಿರೋ ಸೂರ್ಯಕುಮಾರ್, ಅಕಸ್ಮಾತ್ ದ್ವೀಪರಾಷ್ಟ್ರದಲ್ಲಿ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆಗಿ ಸೂರ್ಯ ಫಸ್ಟ್ ಚಾಯ್ಸ್ ಆಗೋದು ಗ್ಯಾರಂಟಿ. ಹೀಗಾಗಿ ಶ್ರೇಯಸ್​ ಅಯ್ಯರ್​ ವೃತ್ತಿ ಜೀವನಕ್ಕೆ ಸೂರ್ಯಕುಮಾರ್ ಕತ್ತಲಾಗ್ತಾನೆ ಅಂತಾನೇ ಹೇಳಲಾಗ್ತಿದೆ.

ಮಧ್ಯಮ ಕ್ರಮಾಂಕದ ಶ್ರೇಯಸ್​ಗೆ ಇಲ್ವಾ ಬೇರೆ ದಾರಿ..?
ಸದ್ಯ ಇಂಜುರಿ ಕಾರಣ ತಂಡದಿಂದ ಹೊರಗಿರುವ ಶ್ರೇಯಸ್, ಟಿ20 ವಿಶ್ವಕಪ್ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಇದಕ್ಕಾಗಿ ಐಪಿಎಲ್ ದ್ವಿತೀಯಾರ್ಧವನ್ನ ಬಳಸಿಕೊಳ್ಳಲೇ ಬೇಕಿದೆ. ಐಪಿಎಲ್​ನಲ್ಲಿ ಮಿಂಚಬೇಕಾದರೆ, ಶ್ರೇಯಸ್ ಮೊದಲು ಫಿಟ್​ನೆಸ್​ ಕಾಯ್ದುಕೊಳ್ಳುವ ಅಗತ್ಯತೆ ಇದೆ. ಜೊತೆಗೆ ಸಿಕ್ಕ ಅಲ್ಪ ಪಂದ್ಯಗಳಲ್ಲೇ ಜಬರ್​​ದಸ್ತ್​ ಪರ್ಫಾಮೆನ್ಸ್ ನೀಡಬೇಕಾಗಿದೆ.

ಆ ಮೂಲಕ ತಂಡಕ್ಕೆ ಮರು ಎಂಟ್ರಿ ನೀಡಬೇಕಾಗಿದೆ. ಆದ್ರೆ ಅತ್ತ ಅದ್ಬುತ ಫಾರ್ಮ್​ನಲ್ಲಿರುವ ಸೂರ್ಯಕುಮಾರ್, ಶ್ರೇಯಸ್​​ ಎಂಟ್ರಿಗೆ ದಾರಿ ಮಾಡಿಕೊಡ್ತಾರಾ ಅನ್ನೋದು ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಅವಕಾಶಕ್ಕಾಗಿ ಮುಂಬೈಕರ್ಸ್ ನಡುವೆ ನಡೆಯುತ್ತಿರುವ ಫೈಟ್​ನಲ್ಲಿ, ಯಾರು ಕ್ಯಾಪ್ಟನ್ಸ್ ಚಾಯ್ಸ್ ಆಗ್ತಾರೆ ಅನ್ನೋದನ್ನ, ಕಾದುನೋಡಬೇಕಿದೆ.​​

The post ಖಾಯಂ ಸ್ಥಾನಕ್ಕೆ ಮುಂಬೈಕರ್ಸ್ ಫೈಟ್ – ಶ್ರೇಯಸ್​ ಕಮ್​​ಬ್ಯಾಕ್​ಗೆ ಸೂರ್ಯನೇ ವಿಲನ್?​ appeared first on News First Kannada.

Source: newsfirstlive.com

Source link