ವಿಚ್ಛೇದನದ ನಂತರ ಮಾಜಿ ಪತ್ನಿ ಜೊತೆ ಅಮೀರ್ ಖಾನ್ ಡ್ಯಾನ್ಸ್

ಮುಂಬೈ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ವಿಚ್ಛೇದನದ ನಂತರ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಡ್ಯಾನ್ಸ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟ ಅಮೀರ್ ಖಾನ್ ಅಭಿನಯದ ಬಹು ನೀರಿಕ್ಷಿ ಲಾಲ್ ಚಡ್ಡ ಸಿನಿಮಾವನ್ನು ಅಮೀರ್ ಖಾನ್, ಕಿರಣ್ ರಾವ್ ಹಾಗೂ ರಾಧಿಕ ಚೌಧರಿ ನಿರ್ಮಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣ ಲಡಾಕ್‍ನಲ್ಲಿ ನಡೆಯುತ್ತಿರುವ ವೇಳೆ ಅಮೀರ್ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಅಲ್ಲಿನ ಸಾಂಪ್ರದಾಯಿಕ ಉಡುಪನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ.

ವೀಡಿಯೋದಲ್ಲಿ ಅಮೀರ್ ಖಾನ್ ಕೆಂಪು ಬಣ್ಣದ ಧಿರುಸು ಹಾಗೂ ನೇರಳೆ ಬಣ್ಣದ ಟೋಪಿಯನ್ನು ಧರಿಸಿದರೆ, ಕಿರಣ್ ರಾವ್ ಪಿಂಕ್ ಕಲರ್ ಉಡುಪು ತೊಟ್ಟು, ಹಸಿರು ಬಣ್ಣದ ಟೋಪಿ ಧರಿಸಿದ್ದಾರೆ. ಜೊತೆಗೆ ಶಿಕ್ಷಕರೊಬ್ಬರು ಡ್ಯಾನ್ಸ್ ಮಾಡುತ್ತಿದ್ದು, ಇವರಿಬ್ಬರಿಗೂ ನೃತ್ಯ ಹೇಳಿಕೊಟ್ಟಿದ್ದಾರೆ.

blank

 

ಇತ್ತೀಚೆಗಷ್ಟೇ ಟಾಲಿವುಡ್ ನಟ ನಾಗಚೈತನ್ಯ ಹಾಗೂ ಲಾಲ್ ಚಡ್ಡಾ ಚಿತ್ರತಂಡಕ್ಕೆ ಸೆರ್ಪಡೆಯಾಗಿದ್ದು, ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಲಾಲ್ ಚಡ್ಡಾ ಸಿನಿಮಾವು ಹಾಲಿವುಡ್‍ನ ಫಾರೆಸ್ಟ್ ಗಂಪ್ ಚಿತ್ರದ ರಿಮೇಕ್ ಆಗಿದ್ದು, ದೇಶದ ಸುಮಾರು ನೂರ್ಕೂ ಅಧಿಕ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಅತೀ ದೊಡ್ಡ ತಾರಾಬಳಗವೇ ಇರಲಿದೆ.

The post ವಿಚ್ಛೇದನದ ನಂತರ ಮಾಜಿ ಪತ್ನಿ ಜೊತೆ ಅಮೀರ್ ಖಾನ್ ಡ್ಯಾನ್ಸ್ appeared first on Public TV.

Source: publictv.in

Source link