#Biggboss ಎರಡು ದೋಣಿ ಮೇಲೆ ಕಾಲಿಟ್ಟ ಶಮಂತ್- ಮತ್ತೆ ವರ್ಸೆ ಬದಲಿಸಿದ ಚಂದ್ರಚೂಡ್​!

#Biggboss ಎರಡು ದೋಣಿ ಮೇಲೆ ಕಾಲಿಟ್ಟ ಶಮಂತ್- ಮತ್ತೆ ವರ್ಸೆ ಬದಲಿಸಿದ ಚಂದ್ರಚೂಡ್​!

ನಿನ್ನೆಯ ಎಪಿಸೋಡ್​ನಲ್ಲಿ ಬಿಗ್​​ಬಾಸ್ ಚಾಲೆಂಜ್​ ಅಡ್ಡಾ​ ಸರಣಿ ಟಾಸ್ಕ್​ ನೀಡಿದ್ದು, ಎರಡು ತಂಡಕ್ಕೆ ಗೆಲ್ಲುವ ಅನಿವಾರ್ಯತೆ ಇದೆ. ಇನ್ನೂ ಸೋತ ತಂಡಕ್ಕೆ ಬಿಗ್​ಬಾಸ್ ನೀಡುತ್ತಿರುವ ಶಿಕ್ಷೆಗಳು ಸಖತ್​ ಫನ್ನಿ ಮತ್ತು ಇಂಟರೆಸ್ಟಿಂಗ್ ಆಗಿವೆ.

ಘಮನನ್ನು ಸೆಳೆಯುತ್ತ ಟಾಸ್ಕ್​ನಲ್ಲಿ ಸೋತಿರುವ ‘ನಿಂಗ್​ ಐತೇ’ ಇರು ತಂಡಕ್ಕೆ ಬಿಗ್​ಬಾಸ್ ಶಿಕ್ಷೆ ನೀಡಿದ್ದು, ಗೆದ್ದಿರುವ ತಂಡ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿ, ಅವರಿಗೆ ಶಿಕ್ಷೆ ವಿಧಿಸಬೇಕು. ಶಿಕ್ಷೆಗೆ ಆಯ್ಕೆ ಮಾಡಿದ್ದು ಶಮಂತ್​ ಮತ್ತು ದಿವ್ಯಾ ಸುರೇಶ್​ ಅವರನ್ನ. ಅಷ್ಟಕ್ಕೂ ಆ ಶಿಕ್ಷೆ ಯಾವುದು ಅಂದ್ರೆ ದಿನಕ್ಕೆ ಹತ್ತು ಬಟ್ಟೆ ಬದಲಿಸಬೇಕು. ಗೆದ್ದ ತಂಡ ಅವರ ಬಟ್ಟೆ ಹೇಗಿದೆ ಎಂದು ನೋಡಿ ಅಪ್ರೂವ್ ಮಾಡಬೇಕು.

blank

ಶಮಂತ್​ ಮತ್ತು ದಿವ್ಯಾ ಎಸ್​ ಎಂಜಾಯ್​ ಮಾಡ್ತಾ, ಇಬ್ಬರು ಒಂದೇ ತರಹದ ಬಟ್ಟೆ ಅಂದ್ರೇ ಟ್ವೀನಿಂಗ್​ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಮನೆಯವರೆಲ್ಲಾ ಮಜಾ ತುಗೊಂಡರೆ ಚಕ್ರವರ್ತಿ ಅವರು ಮಾತ್ರ ಇದ್ರಲ್ಲಿ ಬೇರೆ ಅರ್ಥ ಇದೆ ಎನ್ನುತ್ತಾರೆ. ಚಕ್ರವರ್ತಿ ಅವರು ಮಾತನ್ನಾಡಿ.. ಒಂದೇ ತರಹದ ಬಟ್ಟೆ ಹಾಕಿಕೊಂಡು ಏನೇನ್​ ಮಾಡ್ತಿದ್ದೀರಾ ಅನ್ನೋದು ಗೊತ್ತಾಗ್ತಿದೆ ಅಂತಾರೆ. ಇದಕ್ಕೆ ದಿವ್ಯಾ ಸುರೇಶ್​ ಟಾಸ್ಕ್​ ಮಾಡ್ತೀದ್ದಿವಿ ಇಬ್ಬರು ಎಂದು ಪ್ರತಿಕ್ರಿಯೆ ನೀಡುತ್ತಾರೆ.

ಮತ್ತೆ ಮಾತನಾಡಿದ ಚಕ್ರವರ್ತಿ, ನಾನು ಟಾಸ್ಕ್​ ಬಗ್ಗೆ ಮಾತ್ನಾಡಿತ್ತಿಲ್ಲ. ಶಮಂತ್​ ಬೇರೆ ಮಾಡ್ತಿದ್ದಾನೆ. ನೀನು ನೋಡ್ತಿಲ್ಲ. ದಿವ್ಯಾ ನೀನು ಒಂದೇ ದೃಷ್ಟಿಯಲ್ಲಿ ನೋಡ್ತೀಯ.. ಆದರೆ ನಾನು 365 ಡಿಗ್ರಿ ಆ್ಯಂಗಲ್​ನಲ್ಲಿ ನೋಡ್ತೀರ್ತಿನಿ. ಈ ಹುಡುಗ ಯಾವತ್ತಾದ್ರೂ ಒಂದು ದಾರಿಯಲ್ಲಿ ನಡೆದು ಬಿಟ್ಟರೆ ನಾನ್​ ಚಾಲೆಂಜ್​ ಮಾಡ್ತೀನಿ. ಇವನು ಎರಡು ದೋಣಿ ಮೇಲೆ ಕಾಲಿಡೋದು. ಇದಕ್ಕೆ ವೈಷ್ಣವಿ ಎರಡೆನಾ ಅಂತಾರೆ. ಚಕ್ರವರ್ತಿ, ಈ ಮನೆಯಲ್ಲಿ ಎರಡಕ್ಕೆ ಆಗುತ್ತಿರೋದು, ಮೂರನೇಯದಕ್ಕೆ ಸ್ಪೇರ್ಸ್​ ಇಲ್ಲ ಅಂತಾರೇ.

ಮತ್ತೆ ವೈಷ್ಣವಿ ಮುಂದುವರೆದು.. ಒಂದ್​ ದೋಣಿಯಲ್ಲಿ ಕಾಲು, ಇನ್ನೊಂದು ದೋಣಿಯಲ್ಲಿ ಕೈ ಇಡ್ತಾರಾ.. ಎಂದು ಪರಿಸ್ಥಿತಿಯನ್ನು ತಿಳಿ ಮಾಡಲು ನೋಡುತ್ತಾರೆ. ಅದು ನಡೆಯುತ್ತಿರಬಹುದು ಎಂದು ಚಕ್ರವರ್ತಿ ಹೇಳ್ತಾರೆ. ಇದಕ್ಕೆ ಶಮಂತ್​ ಇಲ್ಲ.. ಒಂದೇ ದೋಣಿ ಅಂತಾರೆ. ಏ ಎಲ್ರೀಗೂ ಗೊತ್ತು ಬೀಡೋ ಇಡೀ ಕರ್ನಾಟಕ ನೋಡುತ್ತಿದೆ ಎಂದು ಚಕ್ರವರ್ತಿ ಟ್ರಿಗರ್ ಮಾಡ್ತಾರೆ.

blank

ಇದಕ್ಕೆ ಶಮಂತ್​, ಮುಂಚೆ ಕೇರಿಯರ್​ ಮತ್ತೆ ಆಫೀಸ್​ ಎರಡು ದೋಣಿಯಲ್ಲಿಯೂ ಹೋಗ್ತಿದ್ದೆ. ಈಗ ಒಂದೇ ದೋಣಿಯಲ್ಲಿದ್ದಿನಿ ಅಂದ್ರೆ, ಅದಕ್ಕೆ ದಿವ್ಯಾ ಎಸ್​, ನೀನಗೆ ಏನೂ ಸರಿ ಅನ್ಸುತ್ತೋ ಅದನ್ನು ಮಾಡು. ಎಲ್ಲರಿಗೂ ವಿವರಿಸುವ ಅಗತ್ಯವಿಲ್ಲ ಎನ್ನುತ್ತಾರೆ. ಹೌದು ಮಗಾ, ನಿಂಗ್​ ಏನ್​ ಸರೀ ಅನ್ಸುತ್ತೋ ಅದುನ್ನೆ. ನಂಗೆ ನಿನ್ನ ನೋದರೆ ಖುಷಿಯಾಗುತ್ತೆ. ನಾನೂ ನಿನ್ನ ಏಜ್​ನಲ್ಲಿ ಹೀಗೆ ಇದ್ದೆ ಎಂದು ಚಕ್ರವರ್ತಿ ಅವರು ಹೇಳ್ತಾರೆ.

ಇಲ್ಲಿ ಅವರು ದೋಣಿ ಎಂದು ಪರೋಕ್ಷವಾಗಿ ಹೇಳಿದ್ದು, ಪ್ರಿಯಾಂಕ ಅವರ ಬಗ್ಗೆ. ಈ ಹಿಂದೆ ಕೂಡಾ ಶಮಂತ್​ ಮತ್ತು ಪ್ರಿಯಾಂಕ ಕ್ಲೂಸ್​ ಇರುವುದಕ್ಕೆ ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರಿಯಾಂಕ ಅವರು ಸರಿಯಾಗಿಯೇ ಉತ್ತರ ಕೊಟ್ಟು, ಸಾಕಷ್ಟು ಗಲಾಟೆಯಾಗಿತ್ತು. ಈಗ ಇದೇ ವಿಷಯಕ್ಕೆ ದಿವ್ಯಾ ಎಸ್​ ಅವರನ್ನು ಎಳೆದು ತಂದಿದ್ದಾರೆ. ಇಷ್ಟಕ್ಕೆ ನಿಲ್ಲದ ಈ ದೋಣಿ ಪುರಾಣ, ದಿವ್ಯಾ ಎಸ್​ ಶಮಂತ್​ಗೆ ಕ್ಲಾಸ್​ ತೆಗೆದುಕೊಳ್ಳುತ್ತಾರೆ.ದಿವ್ಯಾ, ನೀನು ನಿನ್ನ ಒಂದು ವಿಷಯಕ್ಕೆ ಬೇರೆಯವರು ಹೆಸರು ತೆಗೆದುಕೊಳ್ಳದೆ ಯಾರಿಗೋ ಹೋಲಿಸಿ ದೋಣಿ ಎಂದು ಮಾತನಾಡೋದು ನಂಗೆ ಸರಿ ಬರಲ್ಲ.

blank

ನೀವು ಇಬ್ಬರೂ ಪರ್ಸನಲ್​ ಆಗಿ ಏನಾದ್ರೂ ಮಾತಾಡಿ, ಅದು ನಂಗೆ ಬೇಕಿಲ್ಲ. ಆದರೆ ನಾವಿಬ್ರೂ ಡ್ರೇಸ​ನಾ ಟ್ವೀನಿಂಗ್​ ಮಾಡ್ತಿದ್ದೀವಿ ಅಂದ ಮಾತ್ರಕ್ಕೆ ಡೈರೆಕ್ಟ್​ ಆಗಿ ಹೇಳದೇ, ಎರಡು ದೋಣಿ, ಮೂರು ದೋಣಿ ಅಂದ್ರೆ ನಂಗೆ ಇಷ್ಟಾ ಆಗಲ್ಲಾ. ನೀನು ಅದಕ್ಕೆ ಉತ್ತರಾ ಕೋಡ್ಬೇಕು ಎನ್ನುತ್ತಾರೆ. ಇದಕ್ಕೆ ಶಮಂತ್​, ನಿಂಗೆ ಅದೂ ಬೇಜಾರ್​ ಆಯ್ತು ಅಂತಾನೂ ಗೊತ್ತು. ಅವರು ಯಾರ್​ ಹೆಸರು ತಗೊಂಡು ಆ ರೀತಿ ಮಾತ್ನಾಡಿದ್ರೂ ಅಂತಾನೂ ಗೊತ್ತು. ಅದಕ್ಕೆ ನಾನು ಎಲ್ಲಿ, ಹೇಗೆ ಉತ್ತರಾ ಕೊಡ್ಬೇಕೋ ಕೊಡ್ತೀನಿ ಅಂತಾರೆ.

The post #Biggboss ಎರಡು ದೋಣಿ ಮೇಲೆ ಕಾಲಿಟ್ಟ ಶಮಂತ್- ಮತ್ತೆ ವರ್ಸೆ ಬದಲಿಸಿದ ಚಂದ್ರಚೂಡ್​! appeared first on News First Kannada.

Source: newsfirstlive.com

Source link