ಜೊತೆ ಜೊತೆಯಲಿ ಫ್ಯಾನ್ಸ್​ಗೆ ಭರ್ಜರಿ ಗುಡ್​ ನ್ಯೂಸ್; ಮೇಘ ಶೆಟ್ಟಿ ಮತ್ತೆ ಇನ್‌

ಜೊತೆ ಜೊತೆಯಲಿ ಫ್ಯಾನ್ಸ್​ಗೆ ಭರ್ಜರಿ ಗುಡ್​ ನ್ಯೂಸ್; ಮೇಘ ಶೆಟ್ಟಿ ಮತ್ತೆ ಇನ್‌

ಜೊತೆ ಜೊತೆಯಲಿ ಸೀರಿಯಲ್‌ನ ವೀಕ್ಷಕರಿಗೊಂದು ಸಿಹಿ ಸುದ್ದಿ. ನಟಿ ಮೇಘ ಶೆಟ್ಟಿ ಮತ್ತೆ ಜೊತೆ ಜೊತೆಯಲಿ ಟೀಮ್ ಸೇರಿದ್ದಾರೆ. ಹೌದು, ಅನು ಸಿರಿ ಮನೆ ಪಾತ್ರ ಮಾಡ್ತಿದ್ದ ನಟಿ ಮೇಘ ಶೆಟ್ಟಿ ಸೀರಿಯಲ್‌ನಿಂದ ಹೊರಬಂದಿದ್ದರು. ಸೀರಿಯಲ್‌ ಟೀಮ್ ಹಾಗೂ ಅವರ ನಡುವೆ ಗೊಂದಲಗಳು ಉಂಟಾಗಿದ್ದವು. ಜೊತೆಗೆ ಸೀರಿಯಲ್ ಟೀಮ್ ಹೊಸ ಹೀರೋಯಿನ್‌ನ ಸೆಲೆಕ್ಟ್ ಮಾಡಿತ್ತು. ಆದ್ರೆ ಈಗ ಮತ್ತೆ ಮೇಘ ಶೆಟ್ಟಿ, ಜೊತೆ ಜೊತೆಯಲಿ ಟೀಮ್‌ನ ಸೇರ್ಪಡೆಯಾಗಿದ್ದಾರೆ.

ಚಾನಲ್‌, ಮೇಘಶೆಟ್ಟಿ ಹಾಗೂ ಸೀರಿಯಲ್‌ ಟೀಮ್ ನಡುವೆ ನಡೆದ ಸಂಧಾನದ ಮಾತುಕತೆ ಯಶಸ್ವಿಯಾಗಿದೆ. ಸೀರಿಯಲ್ ಟೀಮ್ ಹಾಗೂ ಮೇಘ ಶೆಟ್ಟಿ ಜೊತೆ ಚಾನಲ್‌ನ ಮುಖ್ಯಸ್ಥರುಗಳು ಮಾತು ಕತೆ ನಡೆಸಿ ಗೊಂದಲಗಳನ್ನ ನಿವಾರಿಸಿದ್ದಾರೆ. ಹೀಗಾಗಿ ಮತ್ತೆ ಮೇಘ ಶೆಟ್ಟಿ ನಾಳೆಯಿಂದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ನನಗೆ ಸಿನಿಮಾಗಳಿಂದ ಹೆಚ್ಚು ಆಫರ್ಸ್‌ ಬರುತ್ತಿದ್ದ ಕಾರಣ ಡೇಟ್‌ ಕ್ಲಾಶ್ ಆಗ್ತಿತ್ತು. ಇನ್ಮುಂದೆ ಯಾವುದೇ ಡೇಟ್‌ ಕ್ಲಾಶ್ ಆಗದಿರೋ ರೀತಿ ನಾನು ಮ್ಯಾನೇಜ್ ಮಾಡ್ತೀನಿ. ಜೊತೆ ಜೊತೆಯಲಿ ಮುಗಿಯೋವರೆಗೂ ನಾನೇ ಆ ಪಾತ್ರದಲ್ಲಿ ಅಭಿನಯಿಸುತ್ತೇನೆ. ನಾಳೆಯಿಂದಲೇ ನಾನು ಶೂಟಿಂಗ್‌ನಲ್ಲಿ ಭಾಗಿಯಾಗ್ತೀನಿ -ಮೇಘ ಶೆಟ್ಟಿ, ನಟಿ

ನ್ಯೂಸ್‌ಫಸ್ಟ್ ಜೊತೆ ಮಾತನಾಡಿದ ನಟಿ ಮೇಘಶೆಟ್ಟಿ, ಒಂದು ಕುಟುಂಬ ಎಂದ ಮೇಲೆ ಗೊಂದಲಗಳು ಸಹಜ. ನನ್ನ ಹಾಗೂ ಸೀರಿಯಲ್‌ ಟೀಮ್‌ ನಡುವೆ ಕೆಲವೊಂದು ಗೊಂದಲಗಳಿದ್ದವು. ಆ ಎಲ್ಲಾ ಗೊಂದಲಗಳು ನಿವಾರಣೆಯಾಗಿದೆ. ಈಗ ಎಲ್ಲವೂ ಸರಿಯಾಗಿದೆ. ಡೇಟ್‌ ಕ್ಲಾಶ್ ವಿಚಾರವಾಗಿ ಕೆಲವೊಂದು ಸಮಸ್ಯೆಗಳಾಗಿತ್ತು. ನನಗೆ ಸಿನಿಮಾಗಳಿಂದ ಹೆಚ್ಚು ಆಫರ್ಸ್‌ ಬರುತ್ತಿದ್ದ ಕಾರಣ ಡೇಟ್‌ ಕ್ಲಾಶ್ ಆಗ್ತಿತ್ತು. ಇನ್ಮುಂದೆ ಯಾವುದೇ ಡೇಟ್‌ ಕ್ಲಾಶ್ ಆಗದಿರೋ ರೀತಿ ನಾನು ಮ್ಯಾನೇಜ್ ಮಾಡ್ತೀನಿ. ಜೊತೆ ಜೊತೆಯಲಿ ಮುಗಿಯೋವರೆಗೂ ನಾನೇ ಆ ಪಾತ್ರದಲ್ಲಿ ಅಭಿನಯಿಸುತ್ತೇನೆ. ನಾಳೆಯಿಂದಲೇ ನಾನು ಶೂಟಿಂಗ್‌ನಲ್ಲಿ ಭಾಗಿಯಾಗ್ತೀನಿ ಎಂದು ಹೇಳಿದ್ದಾರೆ.

The post ಜೊತೆ ಜೊತೆಯಲಿ ಫ್ಯಾನ್ಸ್​ಗೆ ಭರ್ಜರಿ ಗುಡ್​ ನ್ಯೂಸ್; ಮೇಘ ಶೆಟ್ಟಿ ಮತ್ತೆ ಇನ್‌ appeared first on News First Kannada.

Source: newsfirstlive.com

Source link