ರಾಕೇಶ್​​ ಪಾಪಣ್ಣ ಆಪ್ತ ಎಂಬ ಆರೋಪ- ಅಚ್ಚರಿಯ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ

ರಾಕೇಶ್​​ ಪಾಪಣ್ಣ ಆಪ್ತ ಎಂಬ ಆರೋಪ- ಅಚ್ಚರಿಯ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು: ನಟ ದರ್ಶನ್​ ಅವರಿಗೆ 25 ಕೋಟಿ ರೂಪಾಯಿ ವಂಚನೆ ಮಾಡಲು ಯತ್ನಿಸಿದ ಪ್ರಕರಣ ದಿನಕ್ಕೊಂದು ಟ್ವಿಸ್​​ ಪಡೆದುಕೊಳ್ಳುತ್ತಿದೆ. ಈ ನಡುವೆ ದರ್ಶನ್​ ಆಪ್ತ ರಾಕೇಶ್ ಪಾಪಣ್ಣ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತ, ಪ್ರಕರಣದಲ್ಲಿ ಪ್ರಭಾವ ಬೀರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್​​ ಅವರು ರಾಕೇಶ್​​ ಪಾಪಣ್ಣ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದು, ರಾಕೇಶ್ ಪಾಪಣ್ಣ ಎಲ್ಲಾ ಪೊಲೀಸರು ನನ್ನ ಕೈಯಲ್ಲಿ ಇದ್ದಾರೆ ಅಂತಾರೆ ಎಂದು ಆರೋಪಿಸಿದ್ದರು. ಈ ನಡುವೆ ರಾಕೇಶ್​​ ಪಾಪಣ್ಣ ಸಿದ್ದರಾಮಯ್ಯ ಅವರ ಆಪ್ತ ಎಂಬ ಆರೋಪ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಯಾರು ಏನು ಬೇಕಾದರು ಹೇಳಿ ಕೊಳ್ಳಬಹುದು. ನೀನು ಸಿದ್ದರಾಮಯ್ಯ ನನಗೆ ಆಪ್ತ ಅಂತ ಹೇಳಿಕೊಳ್ಳಬಹುದು.. ಅದಕ್ಕೆ ನಾನೇನು ಮಾಡೋಕಾಗುತ್ತೆ? ಅದೆಲ್ಲ ನಡೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್ -ಹಲ್ಲೆ ಆರೋಪಕ್ಕೆ ದರ್ಶನ್ ಖಡಕ್​ ಉತ್ತರ

ಉಳಿದಂತೆ ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಜುಲೈ ತಿಂಗಳಲ್ಲೇ ಈ ಅಧಿವೇಶನ ನಡೆಯಬೇಕಿತ್ತು. ಆದರೆ ರಾಜ್ಯ ಸರ್ಕಾರ ಅಧಿವೇಶನ ನಡೆಸಿಲ್ಲ, ಹೀಗಾಗಿ ಅಧಿವೇಶನ ನಡೆಸಿ ಎಂದು ಪತ್ರ ಬರೆದಿರುವೇ.. ಕನಿಷ್ಠ 60 ದಿನ ಅಧಿವೇಶನ ನಡೆಸಲೇಬೇಕು, ಆದರೆ ಈ ಸರ್ಕಾರ ನಡೆಸುತ್ತಿಲ್ಲ. ಭ್ರಷ್ಟಾಚಾರ, ಕೊರೊನಾ ವೈಫಲ್ಯ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.

ಇನ್ನು ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಹೋಗುತ್ತಿರುವುದನ್ನು ಖಚಿತಪಡಿಸಿದ ಸಿದ್ದರಾಮಯ್ಯ ಅವರು, ಶಿವಕುಮಾರ್ ತಮ್ಮ ಮನೆಯಲ್ಲಿ ಬೆಂಗಳೂರು ಶಾಸಕರ ಸಭೆ ಕರೆದಿದ್ದಾರೆ ಎಂದು ಖಚಿತ ಪಡಿಸಿದರು. ಅಂದಹಾಗೇ.. ತಮ್ಮ ಮನೆಗೆ ಬರುವಂತೆ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದ್ದ ಬಗ್ಗೆ ನ್ಯೂಸ್ ಫಸ್ಟ್ ವರದಿ ಮಾಡಿತ್ತು.

ಇದನ್ನೂ ಓದಿ: ದರ್ಶನ್ ವಿರುದ್ಧ ಆರೋಪಗಳ ಸುರಿಮಳೆ; ಇಂದ್ರಜಿತ್ ಲಂಕೇಶ್ ಏನೆಲ್ಲ ಹೇಳಿದ್ರು?

The post ರಾಕೇಶ್​​ ಪಾಪಣ್ಣ ಆಪ್ತ ಎಂಬ ಆರೋಪ- ಅಚ್ಚರಿಯ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link