ಚಹಲ್​-ಚಹರ್​​ ನಡುವೆ ಸ್ಥಾನಕ್ಕಾಗಿ ಫೈಟ್ ​​-ಲೆಗ್​ ಸ್ಪಿನ್​ ಕೋಟಾದಲ್ಲಿ ಯಾರಿಗೆ ಚಾನ್ಸ್​​?

ಚಹಲ್​-ಚಹರ್​​ ನಡುವೆ ಸ್ಥಾನಕ್ಕಾಗಿ ಫೈಟ್ ​​-ಲೆಗ್​ ಸ್ಪಿನ್​ ಕೋಟಾದಲ್ಲಿ ಯಾರಿಗೆ ಚಾನ್ಸ್​​?

ಶ್ರೀಲಂಕಾ ಪ್ರವಾಸದಲ್ಲಿ ಕುಲ್ಚಾ ಜೋಡಿ ಮತ್ತೆ ಒಂದಾಗುತ್ತಾ? ಕುಲ್​ದೀಪ್​ಗೆ ಸ್ಥಾನ ಸಿಗುತ್ತಾ? ಅನ್ನೋದು ಇಷ್ಟು ದಿನ ಚರ್ಚೆ ಆಗಿತ್ತು. ಆದ್ರೆ, ಯಜುವೇಂದ್ರ ಚಹಲ್ ಸ್ಥಾನಕ್ಕಾಗಿ ಹೋರಾಟ ನಡೆಸ್ತಾ ಇರೋ ಬಗ್ಗೆ ಸದ್ದೇ ಆಗಿಲ್ಲ. ಚಹಲ್​ ಸ್ಥಾನಕ್ಕೆ ಸಂಕಷ್ಟ ಎದುರಾಗಿರೋದ್ಯಾಕೆ? ಇಲ್ಲಿದೆ ನೋಡಿ ಡಿಟೇಲ್ಸ್..

ಲಂಕಾ ಪ್ರವಾಸದಲ್ಲಿ ಪ್ಲೇಯಿಂಗ್​ ಇಲೆವೆನ್​ನ ಪ್ರತಿಯೊಂದು ಸ್ಲಾಟ್​​ಗೂ ಪೈಪೂಟಿ ಇರೋದು ಹೆಚ್ಚು ಚರ್ಚೆಯಲ್ಲಿರೋ ವಿಚಾರ. ಇದೇ ಇದೀಗ ಮ್ಯಾನೇಜ್​ಮೆಂಟ್​​ಗೂ ತಲೆನೋವಾಗಿರೋದು ಕೂಡ. ಇಷ್ಟು ದಿನ ಸ್ಪಿನ್​ ಕೋಟಾದಲ್ಲಿ ಯಜುವೇಂದ್ರ ಚಹಲ್​ಗೆ ಸ್ಥಾನ ಫಿಕ್ಸ್​ ಎಂದೇ ಹೇಳಲಾಗ್ತಿತ್ತು. ಆದ್ರೆ, ರಾಹುಲ್​ ಚಹರ್​ ಇದೀಗ ಚಹಲ್​ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಚಹಲ್​, ಚಹರ್​​ ಇಬ್ಬರ ನಡುವೆ ಯಾರು ಬೆಸ್ಟ್​​ ಲೆಗ್​ ಸ್ಪಿನ್ನರ್​ ಅನ್ನೋದನ್ನ ಮ್ಯಾನೇಜ್​ಮೆಂಟ್​ ಅಳೆದು ತೂಗಿ ನಿರ್ಧರಿಸಬೇಕಿದೆ.

blank

ಅನುಭವವೇ ಚಹಲ್​ಗೆ ಪ್ಲಸ್​ ಪಾಯಿಂಟ್​​!
ಯಜುವೇಂದ್ರ ಚಹಲ್​, ಶಾರ್ಟರ್​​​ ಫಾರ್ಮೆಟ್​​ನಲ್ಲಿ ಟೀಮ್​ ಇಂಡಿಯಾದ ಸಕ್ಸಸ್​​ಫುಲ್​ ಬೌಲರ್​​. ಆಡಿದ 54 ಏಕದಿನ ಹಾಗೂ 48 ಟಿ 20 ಪಂದ್ಯಗಳಿಂದ 154 ವಿಕೆಟ್​​ ಕಬಳಿಸಿರೋದೇ ಇದಕ್ಕೆ ಸಾಕ್ಷಿ. ಆದ್ರೆ, 2019ರ ನಂತರದಲ್ಲಿ ಚಹಲ್​ ನೀಡಿರೋ ಸಾಧಾರಣ ಪ್ರದರ್ಶನ ಈಗ ಆಯ್ಕೆಗೆ ಮುಳ್ಳಾಗಿದೆ. ಅದರಲ್ಲೂ ಕಳೆದ ಇಂಗ್ಲೆಂಡ್​ ವಿರುದ್ಧದ ಸರಣಿ ಹಾಗೂ ಐಪಿಎಲ್​ನಲ್ಲಿ ವಿಕೆಟ್​​ಗಾಗಿ ಪರದಾಟ ನಡೆಸಿದ್ದು ಹಿನ್ನಡೆಯಾಗಿದೆ.

T-20ಯಲ್ಲಿ ಯುಜುವೇಂದ್ರ ಚಹಲ್​
ಪಂದ್ಯ              204
ವಿಕೆಟ್             226
S/R                 19.4
ಎಕಾನಮಿ         7.63

blank

ಐಪಿಎಲ್​ನಲ್ಲಿ ಚಹರ್​​ ಡಿಸೇಂಟ್​ ಪರ್ಫಾಮೆನ್ಸ್​!
ಚಹಲ್​​ಗೆ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಪ್ಲಸ್​ ಪಾಯಿಂಟ್​ ಆದ್ರೆ, ಚಹರ್​ ಪಾಲಿಗೆ ಇದು ಮೈನಸ್​ ಪಾಯಿಂಟ್​. ಆದ್ರೆ, ಐಪಿಎಲ್ ಹಾಗೂ ಡೊಮೆಸ್ಟಿಕ್​ ಕ್ರಿಕೆಟ್​​ನಲ್ಲಿ ಮಾಡಿರುವ ಸಾಧನೆ ರಾಹುಲ್​ ಚಹರ್​​ ಬೆನ್ನಿಗಿದೆ. ಅದಲ್ಲದೇ 2019, 2020ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ನ ಮ್ಯಾಚ್​ ವಿನ್ನರ್​​ ಎಂದು ಗುರುತಿಸಿಕೊಂಡಿರೋದು ಕೂಡ ಆಯ್ಕೆಗೆ ಪರಿಗಣಿಸುವಂತೆ ಮಾಡಿದೆ. ಅದಲ್ಲದೇ ಡೆಬ್ಯೂ ಸಿರೀಸ್​​ನಲ್ಲೂ ಡಿಸೆಂಟ್​ ಸ್ಪೆಲ್​ ಮಾಡಿದ್ದಾರೆ.

T-20ಯಲ್ಲಿ ರಾಹುಲ್​ ಚಹರ್​​
ಪಂದ್ಯ               63
ವಿಕೆಟ್            ​  78
S/R                  17.7
ಎಕಾನಮಿ         7.39

ಅನುಭವದ ವಿಚಾರದಲ್ಲಿ ಇಬ್ಬರ ನಡುವೆ ಅಜಗಜಾಂತರ ವ್ಯತ್ಯಾಸವಿದೆ ನಿಜ. ಆದ್ರೆ, ಸಾಮರ್ಥ್ಯದ ವಿಚಾರದಲ್ಲಿ ಇಬ್ಬರೂ ಸಮಬಲ ಹೊಂದಿದ್ದಾರೆ. ಆದ್ರೆ, ರಿಸೆಂಟ್​​​ ಫಾರ್ಮ್​ ವಿಚಾರದಲ್ಲಿ ಚಹಲ್​ಗಿಂತ ಚಹರ್​​ ಒಂದು ಹೆಜ್ಜೆ ಮುಂದಿದ್ದಾರೆ. ಹೀಗಾಗಿ ಮ್ಯಾನೇಜ್​ಮೆಂಟ್​​​ ಯಾರಿಗೆ ಮಣೆ ಹಾಕುತ್ತೆ ಅನ್ನೋದು ಈಗ ಕುತೂಹಲ ಮೂಡಿಸಿರೋ ವಿಚಾರ. ಅನುಭವವೇ ಚಹಲ್​ಗೆ ಪ್ಲಸ್​ ಪಾಯಿಂಟ್​​.

The post ಚಹಲ್​-ಚಹರ್​​ ನಡುವೆ ಸ್ಥಾನಕ್ಕಾಗಿ ಫೈಟ್ ​​-ಲೆಗ್​ ಸ್ಪಿನ್​ ಕೋಟಾದಲ್ಲಿ ಯಾರಿಗೆ ಚಾನ್ಸ್​​? appeared first on News First Kannada.

Source: newsfirstlive.com

Source link