ಏಟು ತಿಂದವನ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ದಳು -ಇಂದ್ರಜಿತ್ ಲಂಕೇಶ್

ಏಟು ತಿಂದವನ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ದಳು -ಇಂದ್ರಜಿತ್ ಲಂಕೇಶ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು  ಅವರ ಸ್ನೇಹಿತರ ವಿರುದ್ಧ ಸರಣಿ ಆರೋಪ ಮಾಡಿದ ಇಂದ್ರಜಿತ್ ಲಂಕೇಸ್, ಸಂದೇಶ್ ಹೋಟೆಲ್​​ನಲ್ಲಿ ಏಟು ತಿಂದವನ ಕಣ್ಣು ಬ್ಲರ್ ಆಗಿದೆ, ನಂತರ ಸೆಟ್ಲ್​ಮೆಂಟ್ ಮಾಡ್ತಾರೆ. ಈ ವೇಳೆ ಸಪ್ಲೈಯರ್ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ದಳು. ಈ ವೇಳೆ ಇದೇ ದರ್ಶನ್, ರಾಕೇಶ್ ಪಾಪಣ್ಣ, ಮೆಲಂಟಾ, ಪವಿತ್ರ ಗೌಡ ಇರುತ್ತಾರೆ. ಇವರು ರಾಜಿ ಮಾಡಿ ಕಳುಹಿಸುತ್ತಾರೆ. ಈ ಬಗ್ಗೆ ತನಿಖೆ ಮಾಡಲಿಲ್ಲ ಅಂದ್ರೆ ನನ್ನ ಬಳಿಯಿರುವ ಸಾಕ್ಷಿಯನ್ನ ನೀಡುತ್ತೇನೆ ಎಂದು ಮತ್ತೊಂದು ಗಂಭೀರ ಆರೋಪವನ್ನ ಮಾಡಿದ್ದಾರೆ.

ಬುದ್ಧಿ ಕಲಿಯಲ್ಲ

ಇವರಿಗೆ ಶಿಕ್ಷೆ ನೀಡಬೇಕು, ಇಲ್ಲದಿದ್ರೆ ಇವರು ಬದ್ಧಿ ಕಲಿಯಲ್ಲ. ಈ ಹೊಡೆದಾಟದ ನಂತರ ಮಾಧ್ಯಮಗಳ ಮುಂದೆ ತಲೆ ಸೀಳುತ್ತೀನಿ ಅನ್ನೋದೆಲ್ಲ ಸರಿಯಲ್ಲ. ಪೊಲೀಸರಿಗೆ ನನ್ನ ಮನವಿ ಅಂದ್ರೆ ಇಂಥವ್ರ ವಿರುದ್ಧ ಕ್ರಮ ತೆಗೆದುಕೊಳ್ಳಿ. ಬಡವರಿಗೆ ನ್ಯಾಯ ಕೊಡಿಸಿ. ನನಗೆ ಇದನೆಲ್ಲಾ ನೋಡಿಕೊಂಡು ಸುಮ್ಮನೆ ಕೂರಲು ಆಗಲ್ಲ ಎಂದು ಇಂದ್ರಜಿತ್ ಲಂಕೇಸ್​ ದರ್ಶನ್​ಗೆ ತಿರುಗೇಟು ನೀಡಿದ್ದಾರೆ.

The post ಏಟು ತಿಂದವನ ಹೆಂಡತಿ ಪೊರಕೆ ಹಿಡಿದುಕೊಂಡು ಬಂದಿದ್ದಳು -ಇಂದ್ರಜಿತ್ ಲಂಕೇಶ್ appeared first on News First Kannada.

Source: newsfirstlive.com

Source link