ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಸುಮೋ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಮೃತಪಟ್ಟು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ವರನಹೊಂಡ ಎಂಬಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ನೀಲಮ್ಮ (60) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಮೂವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತೀರ್ಥಹಳ್ಳಿ ರಸ್ತೆಯ ಜಂಬಳ್ಳಿ ಕಡೆಯಿಂದ ರಿಪ್ಪನ್ ಪೇಟೆಗೆ ಆಗಮಿಸುತ್ತಿದ್ದ ಟಾಟಾ ಸುಮೋದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಘಟನೆ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮನೆಗುರುಳಿದ ಮರ- ಪಾರಾದ ಉಡುಪಿ ವೆಂಕಟರಮಣ ಐತಾಳ್ ಅನುಭವ ಭಯಾನಕ

The post ವಿದ್ಯುತ್ ಕಂಬಕ್ಕೆ ಟಾಟಾ ಸುಮೋ ಡಿಕ್ಕಿ – ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ appeared first on Public TV.

Source: publictv.in

Source link