‘ಯಾರಾದ್ರೂ ಮಾತಾಡಿದ್ರೆ ನಾನು ಹೊಡೀದೇ ಇರ್ತೀನಾ.?’ ಹೀಗಂತ ದರ್ಶನ್ ಅವರೇ ಹೇಳಿದ್ದಾರೆ- ಇಂದ್ರಜಿತ್

‘ಯಾರಾದ್ರೂ ಮಾತಾಡಿದ್ರೆ ನಾನು ಹೊಡೀದೇ ಇರ್ತೀನಾ.?’ ಹೀಗಂತ ದರ್ಶನ್ ಅವರೇ ಹೇಳಿದ್ದಾರೆ- ಇಂದ್ರಜಿತ್

ಬೆಂಗಳೂರು: ಇಂದು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್.. ನಾನು ಬೆಳಗ್ಗೆ ಕೊಟ್ಟ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದಾರೆ.

ಸಂದೇಶ್ ನಾಗರಾಜ್​ ಪುತ್ರ ಕೂಡ ಘಟನೆ ಬಗ್ಗೆ ಒಪ್ಪಿಕೊಂಡಿದ್ದಾರೆ. ನನಗೆ ಯಾರ ಮೇಲೂ ದ್ವೇಷ ಇಲ್ಲ ಸಾಮಾನ್ಯರಿಗೆ, ನೊಂದವರಿಗೆ ನ್ಯಾಯ ಸಿಗಲಿ ಅಂತ ನಾನು ಹೊರ ಬಂದಿದ್ದೇನೆ. ಈ ವಿಷಯದಲ್ಲಿ ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ.. ನನ್ನ ಬಳಿ ಈ ಘಟನೆ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ. ಯಾವುದೇ ಪಂಚತಾರ ಹೋಟೆಲ್​ನಲ್ಲಿ ಮಿನಿಮಮ್ 60 ದಿನದ ಸಿಸಿಟಿವಿ ಫೂಟೇಜ್ ಇರಬೇಕು. ಆದ್ರೆ ಈ ಪ್ರಕರಣದಲ್ಲಿ ಕೇವಲ 10 ದಿನಕ್ಕೆ ಹಾರ್ಡ್ ಡಿಸ್ಕ್ ಅಲ್ಲಿ ಡಿಲೀಟ್ ಅಗಿದೆ ಅಂತೀರ.. ಜೂನ್ 24, 25 ಲಾಕ್ ಡೌನ್ ವೇಳೆ ಅಲ್ಲಿ ಪಾರ್ಟಿ ಆಗಿದೆ. ಲಾಕ್ ಡೌನ್ ಅಲ್ಲಿ ಪಾರ್ಟಿ ಮಾಡಿದಕ್ಕೆ ಸಮಸ್ಯೆ ಅಗುತ್ತೆ ಅಂತ ಈತರ ಹೇಳ್ತೀರ..?

blank

ಸಂದೇಶ್ ನಾಗರಾಜ್-ದರ್ಶನ್ ಮಾತುಬಿಟ್ಟಿದ್ದಾರೆ..

ಜುಲೈ 3 ರಂದು ಗೋಪಾಲ್ ರಾಜ್ ಅರಸ್ ಎಂಬುವರಿಗೆ ಸೋಷಿಯಲ್ ಪಬ್ ಅಲ್ಲಿ ವದೆ ಬಿದ್ದಿದೆ. ಸೋಷಿಯಲ್ ಪಬ್ ವಾಚ್ ಮ್ಯಾನ್​ಗೂ ಹೊಡೆದಿದ್ದಾರೆ. ಗಂಗಾಧರ್ ಎಂಬ ಕನ್ನಡಿಗನಿಗೆ ಅಲ್ಲಿ ಹೊಡೆಯಲಾಗಿದೆ.. ಸಂದೇಶ್ ನಾಗರಾಜ್ ಹೋಟೆಲ್​ನಲ್ಲಿ ರಾತ್ರಿ ಪೂರ ಗಲಾಟೆ ಆಗಿದೆ. ಸಂದೇಶ್ ನಾಗರಾಜ್ ಬಂದು ಎಲ್ಲರಿಗೂ ಬೈದಿದ್ದಾರೆ. ಈಗ ಸಂದೇಶ್ ನಾಗರಾಜ್ ಮತ್ತು ದರ್ಶನ್ ಮಾತು ಬಿಟ್ಟಿದ್ದಾರೆ. ಏಟು ತಿಂದ ಗಂಗಾಧರ್ ಈಗ ಕೆಲಸ ಕಳೆದುಕೊಂಡಿದ್ದಾನೆ.

ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ..

ಒಂದು ಸೆಲಿಬ್ರಿಟಿ ಸ್ಟೇಟಸ್ ಇಟ್ಕೊಂಡು ಎಷ್ಟು ತಪ್ಪುಗಳನ್ನ ಮಾಡ್ತೀರ್ ರೀ..? ಡೈರೆಕ್ಟರ್​​ಗೆ ಹೊಡೆಯೋದು.. ಪ್ರೊಡ್ಯೂಸರ್​ಗೆ ಹೊಡೆಯೋದು.. ವಾಚ್​ಮನ್​ಗೆ ಹೊಡೆಯೋದು.. ಸೋಷಿಯಲ್​ ಅಲ್ಲಿ ಗೋಪಾಲ್ ರಾಜ್ ಅರಸ್ ಅಲಿಯಾಸ್ ಪಪ್ಪು ಅನ್ನುವವರಿಗೆ ಹೊಡೆದಿದ್ದಾರೆ..ಅವರು ಕೋಮಾದಲ್ಲಿ ಇದ್ದಾರೆ. ಅವರಿಗೂ ದರ್ಶನ್ ಗ್ಯಾಂಗ್ ಹೊಡೆದಿದೆ. ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ..

ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೆಸ್ಟಿಗೇಟರ್ -ಹಲ್ಲೆ ಆರೋಪಕ್ಕೆ ದರ್ಶನ್ ಖಡಕ್​ ಉತ್ತರ

ನಾನು ಒಂತರ  ಒಂಟಿ ಸಲಗ.. ನನ್ನನ್ನ ಯಾರೂ ಚೂ ಬಿಟ್ಟಿಲ್ಲ..

ಈ ಘಟನೆ ಬಗ್ಗೆ ನಾನು ಸಂದರ್ಶನ ಮಾಡಲು ದರ್ಶನ್ ಅವರ ಸಂಪರ್ಕ ಮಾಡಿದ್ದೇನೆ. ಆ ವೇಳೆ ಅವರೇ ಹೇಳಿದ್ದಾರೆ ಗಲಾಟೆ ಮಾಡಿದ್ರೆ ಬಿಡ್ತಿನಾ..? ಹೊಡ್ದಿದ್ದೀನಿ ಅಂತ. ಇದನ್ನು ಬಿಟ್ಟು ಬೇರೆ ವಿಚಾರದಲ್ಲಿ ನಾನು ದರ್ಶನ್ ಅವರ ಭೇಟಿ ಮಾಡಿಲ್ಲ.. ನಾನು ಒಂತರ ಒಂಟಿ ಸಲಗ.. ನನ್ನನ್ನು ಯಾರೂ ಯಾರ ಮೇಲೂ ಚೂ ಬಿಟ್ಟಿಲ್ಲ. ಈ ರೀತಿಯ ಮಾತನ್ನೆಲ್ಲ ನಾವು ಸಿನಿಮಾದಲ್ಲಿ ನೋಡಿದ್ದೀವಿ. ಈ ಪ್ರಕರಣದಲ್ಲಿ ನಾನು ವಾಯ್ಸ್ ರೈಸ್ ಮಾಡಿದಕ್ಕೆ ನನಗೆ ಪ್ರಶಂಸೆ ಮಾತುಗಳು ಬರ್ತಿವೆ.

ಇದನ್ನೂ ಓದಿ: ದರ್ಶನ್ ವೇಟರ್​ಗೆ ಹಲ್ಲೆ ಮಾಡಿಲ್ಲ, ಬೈದಿದ್ದಾರೆ ಅಷ್ಟೇ -ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ಅರುಣಾಕುಮಾರಿ ವಿಚಾರದಲ್ಲಿ ಒಂದೊಂದು ದಿನ ಒಂದೊಂದು ಹೇಳಿಕೆ ಕೊಡ್ತೀರ..

ಇವರಿಗೆ ಹಲ್ಲೆ ಮಾಡೋದಕ್ಕೆ ಯಾವ ವಿಚಾರಗಳೇ ಬೇಕಿಲ್ಲ.. ಮಾರ್ಚ್ 6 ರಂದು ಅರುಣಾಕುಮಾರಿ ವಿಚಾರ ಶುರುವಾಯ್ತು ಅಂತ ಹೇಳ್ತೀರ.. ಅಮೇಲೆ ಒಂದೊಂದು ದಿನ ಒಂದೊಂದು ಹೇಳಿಕೆ ಕೊಡ್ತೀರ.. ಒಂದು ಸಂದರ್ಶನ ಮಾಡಬೇಕು ಅಂತಲೂ ಅವರಿಗೆ ಹೇಳಿದ್ದೆ.. ಆ ಘಟನೆಯ ಬಗ್ಗೆಯೂ ಅವರ ಬಳಿ ಕೇಳಿದ್ದೆ.. ಆಗ ಯಾರಾದ್ರೂ ಮಾತಾಡಿದ್ರೆ ನಾನು ಹೊಡೀದೇ ಇರ್ತೀನಾ ಅಂತ ದರ್ಶನ್ ಅವರೇ ಹೇಳಿದ್ದಾರೆ.

ಜನರು ಲಾಕ್​ಡೌನ್​ನಲ್ಲಿ ಮನೆಯಲ್ಲಿ ಕೂತಿದ್ರೆ.. ಇವರು ಮಜಾ ಉಡಾಯಿಸ್ತಾ ಇದ್ದಾರೆ..

ನನ್ನ ಬಳಿ ತನಿಖಾ ತಂಡ ಇದೆ.. ಈ ಮೂಲಕ ಮಾಹಿತಿ ಕಲೆ ಹಾಕಿದ್ದೀನಿ.. ಹರ್ಷ ಮೆಲಾಂಟ, ಪಾಪಣ್ಣ, ದರ್ಶನ್, ಇಬ್ಬರು ಹುಡುಗಿಯರೂ ಇದ್ದರು.. ಪವಿತ್ರ ಗೌಡ ಇದ್ದರು.. ಸ್ವಿಮ್ಮಿಂಗ್ ಪೂಲ್ ಬಳಿಯೂ ಕೂತಿದ್ದರು.. ಲಾಕ್​​ಡೌನ್ ಸಮಯದಲ್ಲಿ ಜನರು ಮನೆಯಲ್ಲಿ ಕೂತಿದ್ರೆ ಇವರು ಮಜಾ ಉಡಾಯಿಸ್ತಾ ಇದ್ದಾರೆ. ಆಗಲೇ ಇಂಥ ಘಟನೆ ಆಗಿರುವುದು ದುರಂತ.

The post ‘ಯಾರಾದ್ರೂ ಮಾತಾಡಿದ್ರೆ ನಾನು ಹೊಡೀದೇ ಇರ್ತೀನಾ.?’ ಹೀಗಂತ ದರ್ಶನ್ ಅವರೇ ಹೇಳಿದ್ದಾರೆ- ಇಂದ್ರಜಿತ್ appeared first on News First Kannada.

Source: newsfirstlive.com

Source link