ವಾರಣಸಿಯಲ್ಲಿ ತಲೆ ಎತ್ತಿ ನಿಂತ ಶಿವಲಿಂಗ ಆಕಾರದ ‘ರುದ್ರಾಕ್ಷ’.. ಇದರ ವಿಶೇಷತೆಗಳೇನು ಗೊತ್ತಾ?

ವಾರಣಸಿಯಲ್ಲಿ ತಲೆ ಎತ್ತಿ ನಿಂತ ಶಿವಲಿಂಗ ಆಕಾರದ ‘ರುದ್ರಾಕ್ಷ’.. ಇದರ ವಿಶೇಷತೆಗಳೇನು ಗೊತ್ತಾ?

ತಮ್ಮ ಕ್ಷೇತ್ರದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾರಾಣಸಿಗೆ ಭರ್ಜರಿ ಗಿಫ್ಟ್​ ಕೊಟ್ಟಿದ್ದಾರೆ. 1,500 ಕೋಟಿಯ ವಿವಿಧ ಕಾಮಗಾರಿಗಳಿಗೆ ಗ್ರೀನ್​ಸಿಗ್ನಲ್ ನೀಡುವುದರ ಜೊತೆಗೆ ಜಪಾನ್ ಸರ್ಕಾರದ ನೆರವಿನಿಂದ ನಿರ್ಮಾಣಗೊಂಡಿರುವ ಸಹಕಾರಿ ಮತ್ತು ಸಮಾವೇಶ ಕೇಂದ್ರ ‘ರುದ್ರಾಕ್ಷ್’ ಉದ್ಘಾಟನೆ ಮಾಡಿದರು.

ಏನಿದು ರುದ್ರಾಕ್ಷ್​ ಕೇಂದ್ರ..?
ವಿಶ್ವದ ಅತ್ಯಂತ ಪುರಾತನ ನಗರ ವಾರಾಣಸಿಯ ಸಿಗ್ರಾದಲ್ಲಿ ‘ರುದ್ರಾಕ್ಷ್ ಕೇಂದ್ರ’ವನ್ನ ಬರೋಬ್ಬರಿ 186 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕೇಂದ್ರದಲ್ಲಿ ಭಾರತೀಯ ಮತ್ತು ಜಪಾನ್ ಸಂಸ್ಕೃತಿಯನ್ನ ಅನಾವರಣ ಮಾಡಲಾಗಿದೆ. ಕಾಶಿ-ಕ್ಯೋಟೋ ಕಾರ್ಯಕ್ರಮದಡಿ ಜಪಾನ್ ಮತ್ತು ಭಾರತದ ನಡುವಿನ ಸ್ನೇಹದ ಸಂಕೇತವಾಗಿ ಈ ಭವ್ಯ ರುದ್ರಾಕ್ಷ ಕನ್ವೆನ್ಷನ್ ಸೆಂಟರ್ ತಲೆ ಎತ್ತಿದೆ.

blank

ಶಿವಲಿಂಗ ಆಕಾರದಲ್ಲಿ ‘ಭವ್ಯ ಕೇಂದ್ರ’
ವಾರಾಣಸಿ ಪ್ರಸಿದ್ಧಿಗೆ ತಕ್ಕಂತೆ ಈ ಕೇಂದ್ರವನ್ನ ಶಿವಲಿಂಗ ಆಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಇಲ್ಲಿ 108 ರುದ್ರಾಕ್ಷ ಆಕೃತಿಗಳಿಂದ ಇದನ್ನು ಸಿಂಗರಿಸಲಾಗಿದೆ. ಸನಾತನ ಸಂಪ್ರದಾಯದ ಪ್ರಕಾರ ಜಪ ಮಾಲೆಯಲ್ಲಿ 108 ರುದ್ರಾಕ್ಷಿಗಳಿರುತ್ತವೆ. ಅಲ್ಲದೇ ಆಧ್ಯಾತ್ಮಿಕವಾಗಿಯೂ 108 ಅನ್ನೋ ನಂಬರ್ ಮತ್ತು ರುದ್ರಾಕ್ಷಿ ಅತ್ಯಂತ ಪವಿತ್ರವಾದವು. ಅದನ್ನು ಬಿಂಬಿಸುವಂತೆ ಇಲ್ಲಿ ರುದ್ರಾಕ್ಷಿ ಆಕೃತಿಗಳನ್ನು ಬಳಸಲಾಗಿದೆ.

ಮೆರಗು ಕೊಟ್ಟ ವಿಯೆಟ್ನಾಂ ಖುರ್ಚಿಗಳು
ಈ ಕೇಂದ್ರದಲ್ಲಿ ಹೈಟೆಕ್ ಪಾರ್ಕಿಂಗ್​ಗೆ ವ್ಯವಸ್ಥೆ ಕೂಡ ಮಾಡಲಾಗಿದ್ದು, ಬರೋಬ್ಬರಿ 120 ವಾಹನಗಳನ್ನ ನಿಲ್ಲಿಸಬಹುದಾಗಿದೆ. ಮೊದಲ ಮಹಡಿಯಲ್ಲಿ ಸಭಾಂಗಣವಿದ್ದು, ವಿಯೆಟ್ನಾಂನಿಂದ ಆಮದು ಮಾಡಿಕೊಂಡಿರುವ ಕುರ್ಚಿಗಳಿವೆ. ಸುಮಾರು 1200 ಜನರು ಏಕಕಾಲದಲ್ಲಿ ಸಭಾಂಗಣದಲ್ಲಿ ಕುಳಿತುಕೊಳ್ಳಬಹುದಾಗಿದೆ.

blank

ವಿಶ್ವದರ್ಜೆಯ ಕಾನ್ಫರೆನ್ಸ್​ ಹಾಲ್​​ಗಳು
ಇನ್ನು ವಿಶೇಷ ಚೇತನದವರಿಗಾಗಿ ಪ್ರತ್ಯೇಕ ಖುರ್ಚಿಗಳ ವ್ಯವಸ್ಥೆ ಇದೆ. ಇವುಗಳನ್ನ ಸಭಾಗಂಣದ ಬಾಗಿಲುಗಳ ಬಳಿಯೇ ಇಡಲಾಗಿದೆ. ಮಾತ್ರವಲ್ಲ ಶೌಚಾಲಯದ ವ್ಯವಸ್ಥೆಯನ್ನೂ ಕೂಡ ವಿಶೇಷ ಚೇತನ ಹೊಂದಿರೋರ ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಗ್ರೀನ್ ರೂಮ್, 150 ಜನರ ಸಾಮರ್ಥ್ಯ ಹೊಂದಿರುವ ಎರಡು ವಿಡಿಯೋ ಕಾನ್ಫರೆನ್ಸ್ ಹಾಲ್​ಗಳು ಅಥವಾ ಗ್ಯಾಲರಿಗಳಿವೆ. ಎರಡೂ ಹಾಲ್​ಗಳನ್ನೂ ವಿಶ್ವದ ಅತ್ಯಾಧುನಿಕ ಹಾಲ್​ಗಳ ಮಾದರಿಯಲ್ಲೇ ನಿರ್ಮಾಣ ಮಾಡಲಾಗಿದೆ.

ಸಭಾಂಗಣವನ್ನ ವಿಭಿನ್ನ ಡಿಸೈನ್​ಗೆ ಅವಕಾಶ
ಜೊತೆಗೆ ಈ ಸಭಾಂಗಣವನ್ನ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಅಂದರೆ ಸಭಿಕರ ಆಗಮನ ಪ್ರಮಾಣದ ಮೇಲೆ ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಮೆ ಮಾಡಲೂ ಬಹುದಾಗಿದೆ. ನಮ್ಮ ಅಗತ್ಯಕ್ಕೆ ತಕ್ಕಂತೆ ಡಿಸೈನ್ ಮಾಡಿಕೊಳ್ಳಬಹುದು. ಇನ್ನು ಇದರ ನಿರ್ಮಾಣಕ್ಕೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ ಹಣ ನೀಡಿದೆ. ಇಲ್ಲಿ ಜಪಾನ್ ಮಾದರಿಯ ಒಂದು ಸಣ್ಣ ಉದ್ಯಾನವನ್ನೂ ಕಾಣಬಹುದಾಗಿದೆ.

blank

ಗಮನ ಸೆಳೆಯುತ್ತೆ ‘ಜಪಾನ್ ಉದ್ಯಾನವನ’
110 ಕಿಲೋವ್ಯಾಟ್ ಶಕ್ತಿಗಾಗಿ ಸೌರ ಸ್ಥಾವರವನ್ನೂ ಸಹ ಸ್ಥಾಪಿಸಲಾಗಿದೆ. ಜೊತೆಗೆ ಈ ಕೇಂದ್ರವನ್ನು ಹವಾನಿಯಂತ್ರಿತವಾಗಿಡಲು ಗೋಡೆಗಳ ಮೇಲೆ ಇಟಾಲಿಯನ್ ಸಾಧನಗಳನ್ನು ಸ್ಥಾಪಿಸಲಾಗಿದೆ. ರುದ್ರಾಕ್ಷ್ ಕೇಂದ್ರದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಭಾರೀ ಪ್ರಮಾಣದಲ್ಲಿ ಭದ್ರತಾ ವ್ಯವಸ್ಥೆಗಳನ್ನೂ ಸಹ ಮಾಡಲಾಗಿದೆ. ಇದರ ನಿರ್ಮಾಣವು 10 ಜುಲೈ 2018 ರಿಂದ ಪ್ರಾರಂಭವಾವಾಗಿತ್ತು.

The post ವಾರಣಸಿಯಲ್ಲಿ ತಲೆ ಎತ್ತಿ ನಿಂತ ಶಿವಲಿಂಗ ಆಕಾರದ ‘ರುದ್ರಾಕ್ಷ’.. ಇದರ ವಿಶೇಷತೆಗಳೇನು ಗೊತ್ತಾ? appeared first on News First Kannada.

Source: newsfirstlive.com

Source link