ಬಳ್ಳಾರಿ: ನಗರದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ನಗರದ ಜೆಸ್ಕಾಂ ಇನ್ಸಪೆಕ್ಟರ್ ಎ.ಎನ್​. ವಿಜಯ್ ಕುಮಾರ್ ಮನೆ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಅಹಂಬಾವಿ ಪ್ರದೇಶದಲ್ಲಿನ ಮನೆಯನ್ನು ತಪಾಸಣೆ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಮೂವರು ಎಸಿಬಿ ಅಧಿಕಾರಿಗಳ ತಂಡ ಮತ್ತು ಡಿವೈಎಸ್ಪಿ ಸುರ್ಯನಾರಾಯಣ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಒಟ್ಟು ನಾಲ್ಕು ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಬಳ್ಳಾರಿಯ ಮೂರು ಕಡೆ ಮತ್ತು ಬೆಂಗಳೂರಿನ ಮನೆಯ ಮೇಲೆ ದಾಳಿ ಮಾಡಿರೋ ಎಸಿಬಿ ದಾಖಲೆಗಳನ್ನು ವಶಪಡಿಸಿಕೊಂಡು ವಿಜಯ್​ ಕುಮಾರ್​ ಅವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

The post ಬಳ್ಳಾರಿ ಜೆಸ್ಕಾಂ ಇನ್ಸ್​​ಪೆಕ್ಟರ್ ಎ.ಎನ್​. ವಿಜಯ್ ಕುಮಾರ್ ಮನೆ ಮೇಲೆ ಎಸಿಬಿ ದಾಳಿ appeared first on News First Kannada.

Source: newsfirstlive.com

Source link