ಚಾಲೆಂಜ್ ಅಡ್ಡಾದಲ್ಲಿ ಗೆಲುವಿನ ದಂಡ; ಈ ವಾರ ಎಲಿಮಿನೇಶನ್​ನಿಂದ ಪಾರಾಗುವವರು ಯಾರು?

ಚಾಲೆಂಜ್ ಅಡ್ಡಾದಲ್ಲಿ ಗೆಲುವಿನ ದಂಡ; ಈ ವಾರ ಎಲಿಮಿನೇಶನ್​ನಿಂದ ಪಾರಾಗುವವರು ಯಾರು?

ಈ ವಾರದ ಟಾಸ್ಕ್​ಗಳಲ್ಲಿ ಎದ್ದು ಬಿದ್ದು ಆಟ ಆಡುತ್ತಿರುವ ಬಿಗ್​ ಮನೆಯ ಸದಸ್ಯರು, ಎಲಿಮಿನೇಶನ್​ನಿಂದ ತಪ್ಪಿಸಿಕೊಳ್ಳಲು ಗೆಲ್ಲಲೇಬೇಕು ಎಂಬ ಹಠದಲ್ಲಿದ್ದಾರೆ. ಹೀಗಾಗಿ ತುಂಬಾನೇ ಕಾಂಪಿಟೇಟಿವ್​ ಆಗಿ ಟಾಸ್ಕ್​ ಆಡುತ್ತಿದ್ದಾರೆ.

ನಿನ್ನೆ ನಡೆದ ಚಾಲೆಂಜ್​ ಅಡ್ಡಾ ಸರಣಿ ಟಾಸ್ಕ್​ಗಳಲ್ಲಿ ಅರವಿಂದ್​ ಅವರ ನೇತೃತ್ವದ ವಿಜಯ ಯಾತ್ರೆ ತಂಡ ಎರಡು ದಂಡ ಪಡೆದರೆ, ಮಂಜು ಅವರ ನೇತೃತ್ವದ ನಿಂಗ್​ ಐತೆ ಇರು ತಂಡ ಎರಡು ಗೆಲುವಿನ ದಂಡ ಪಡೆದು ಸಮಬಲ ಸಾಧಿಸಿವೆ.

blank

ಮೊದಲ ಟಾಸ್ಕ್ ಈ ಉಸಿರ ಕೊಲ್ಲಬೇಡದಲ್ಲಿ ವಿಜಯ ಯಾತ್ರೆ ತಂಡದಿಂದ ಪ್ರಶಾಂತ್​ ಹಾಗೂ ನಿಂಗ್​ ಐತೆ ಇರು ತಂಡದಿಂದ ಶಮಂತ್​ ಆಡುತ್ತಾರೆ. ಈ ಆಟದ ಪ್ರಕಾರ ಗಾಳಿ ತುಂಬಿದ ಬಲೂನ್​ ಮೇಲೆ ಶೇವಿಂಗ್​ ಕ್ರೀಂ ಹಚ್ಚಿ ಶೇವ್​ ಮಾಡಬೇಕು. ಬಲೂನ್​ ಒಡೆಯದಂತೆ ಕಾಳಜಿ ವಹಿಸಿ ಯಾರು ಹೆಚ್ಚು ಬಲೂನ್​ ಶೇವ್​ ಮಾಡುತ್ತಾರೋ ಆ ತಂಡ ವಿಜೇತವಾಗುತ್ತದೆ. ಈ ಟಾಸ್ಕ್​ನಲ್ಲಿ ಶಮಂತ್​ ನಿಂಗ್​ ಐತೆ ಇರು ತಂಡಕ್ಕೆ ಗೆಲವು ತಂದುಕೊಡುತ್ತಾರೆ.

blank

ಇನ್ನು ಹುಳಿ ಹಿಂಡಿ ಟಾಸ್ಕ್​ನಲ್ಲಿ ಮಂಜು ಮತ್ತು ಅರವಿಂದ್​ ಭಾಗವಹಿಸಿ, ಅರವಿಂದ್​ ವಿನ್​ ಆಗುತ್ತಾರೆ. ಬಾಟಲಿ ಬರಹ ಟಾಸ್ಕ್​ನಲ್ಲಿ ಪೆನ್ಸಿಲ್​ನ್ನು ತುಟಿಯ ಮೇಲ್ಭಾಗದಲ್ಲಿ ಇಟ್ಟುಕೊಂಡು ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಿ ಗಾಜಿನ ಬಾಟಲಿ ಒಳಗೆ ಪೆನ್ಸಿಲ್​ ಹಾಕಬೇಕು. ಶುಭಾ ಹಾಗೂ ದಿವ್ಯಾ ಸುರೇಶ್​ ಭಾಗವಹಿಸಿ, ಶುಭಾ ವಿನ್​ ಆಗುತ್ತಾರೆ.

ಅದೇ ರೀತಿ ನಾ ಹಾಡಲು.. ನೀವು ಹಾಡಬೇಕು.. ಟಾಸ್ಕ್​ನಲ್ಲಿ ಪ್ರಿಯಾಂಕಾ ಮತ್ತು ದಿವ್ಯಾ ಉರುಡುಗ ಭಾಗವಹಿಸಿದ್ದರು. ಇದ್ರಲ್ಲಿ ದಿವ್ಯಾ ಉರುಡುಗ ಅವರು ಗೆದ್ದು ನಿಂಗ್​ ಐತೆ ಇರು ತಂಡ ಅಂಕ ಪಡೆಯುತ್ತದೆ.

blank

ಇನ್ನು ಏಳು ಬೀಳು ಟಾಸ್ಕ್​ನಲ್ಲಿ ಸದಸ್ಯರ ಫೋಟೋಗಳನ್ನು ಸೀಸಾಗಳಿಗೆ ಅಂಟಿಸಲಾಗಿರುತ್ತದೆ. ಒಂದು ಬದಿಗೆ ಮರಳು ತುಂಬಿರುತ್ತಾರೆ. ಇನ್ನೊಂದು ಬದಿಗೆ ತಂಡದ ಸದಸ್ಯರು ಮರಳು ತುಂಬಿ ಫೋಟೋನ್ನು ನೆಲಕ್ಕೆ ತಾಗಿಸಬೇಕು. ಇದ್ರಲ್ಲಿ ನಿಂಗ್​ ಐತೆ ಇರು ತಂಡ ವಿನ್​ ಆಗುತ್ತದೆ.

ಎರಡು ತಂಡಗಳು ಸಮಬಲದಲ್ಲಿ ಟಾಸ್ಕ್​ ಆಡುತ್ತಿವೆ. ಶನಿವಾರಕ್ಕೆ ಎರಡೇ ದಿನ ಬಾಕಿ ಇದ್ದು, ಯಾವ ತಂಡ ಗೆದ್ದು ಎಲಿಮಿನೇಶನ್​ನಿಂದ ಸೇವ್​ ಆಗುತ್ತದೆ ಎಂಬ ಕುತೂಹಲದಿಂದ ಫ್ಯಾನ್ಸ್​ಗಳು ಕಾತರರಾಗಿ ಕಾಯುತ್ತಿದ್ದಾರೆ.

The post ಚಾಲೆಂಜ್ ಅಡ್ಡಾದಲ್ಲಿ ಗೆಲುವಿನ ದಂಡ; ಈ ವಾರ ಎಲಿಮಿನೇಶನ್​ನಿಂದ ಪಾರಾಗುವವರು ಯಾರು? appeared first on News First Kannada.

Source: newsfirstlive.com

Source link