‘ನಾನು ಕೋಮಾದಲ್ಲಿದ್ರೆ ಹೀಗೆ ಮಾತಾಡ್ತಿದ್ನಾ.? ದರ್ಶನ್​​​ ಸರ್ ಹೊಡೆದಿಲ್ಲ’ ಇಂದ್ರಜಿತ್​ಗೆ ಗೋಪಾಲ್​ರಾಜ್ ತಿರುಗೇಟು

‘ನಾನು ಕೋಮಾದಲ್ಲಿದ್ರೆ ಹೀಗೆ ಮಾತಾಡ್ತಿದ್ನಾ.? ದರ್ಶನ್​​​ ಸರ್ ಹೊಡೆದಿಲ್ಲ’ ಇಂದ್ರಜಿತ್​ಗೆ ಗೋಪಾಲ್​ರಾಜ್ ತಿರುಗೇಟು

ಮೈಸೂರು: ಇಂದು ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್.. ದರ್ಶನ್​ರಿಂದ ಹಲ್ಲೆಗೊಳಗಾಗದ ಗೋಪಾಲ್ ರಾಜ್ ಎಂಬುವವರು ಕೋಮಾದಲ್ಲಿದ್ದಾರೆ ಎಂದಿದ್ದರು. ಇದೀಗ ಸ್ವತಃ ಗೋಪಾಲ್​ ರಾಜ್ ಮಾಧ್ಯಮಗಳ ಮುಂದೆ ಬಂದಿದ್ದು.. ನನ್ನ ಮೇಲೆ ಯಾವ ಹಲ್ಲೆಯೂ ನಡೆದಿಲ್ಲ.. ನಾನು ಕೋಮಾಗೂ ಹೋಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದರ್ಶನ್ ಅವರಿಗೂ ನಮಗೂ 30 ವರ್ಷಗಳ ಸ್ನೇಹವಿದೆ.. ಅವರು ನನ್ನ ಮೇಲೆ ಹಲ್ಲೆ ಮಾಡಿಲ್ಲ.. ನನ್ನ ಹೆಸರು ಪಾಪು ಅಂತ ಗೋಪಾಲ್​ ರಾಜ್ ಅಂತ ಮನೆಯವರೆಲ್ಲ ಕರೀತಾರೆ. ನನ್ನ ಮೇಲೆ ಹಲ್ಲೆಯಾಗಿರೋದು.. ಕೋಮಾ ಸೇರಿದ್ದಾನೆ ಎಂದು ಇಂದ್ರಜಿತ್ ಹೇಳಿರುವುದೆಲ್ಲ ಸುಳ್ಳು.. ಅವರು ಬಂದಾಗ ಫೋನ್​ ಮಾಡಿ ನನ್ನನ್ನ ಫಾರ್ಮ್​ಹೌಸ್​ಗೆ ಕರೆಸಿಕೊಳ್ತಾರೆ ಎಂದಿದ್ದಾರೆ.

ದರ್ಶನ್ ಅವರು ಫಾರ್ಮ್​ ಹೌಸ್​ಗೆ ಬಂದಾಗಲೆಲ್ಲ ನಾನು ಹೋಗ್ತಿರ್ತೇನೆ.. ನಮ್ಮ ಸ್ನೇಹದಲ್ಲಿ ಯಾವುದೇ ಒಡಕಿಲ್ಲ.. ದರ್ಶನ್ ಅವರ ಸ್ನೇಹಿತರೂ ಸಹ ನನ್ನೊಂದಿಗೆ ಚೆನ್ನಾಗೇ ಇದ್ದಾರೆ. ಇಂದ್ರಜಿತ್ ಲಂಕೇಶ್ ಅವರು ನನಗೆ ಪರಿಚಯವೇ ಇಲ್ಲ. ಏಳೆಂಟು ದಿನಗಳ ಹಿಂದೆ ದರ್ಶನ್ ಅವರನ್ನ ಭೇಟಿಯಾಗಿದ್ದೆ ಎಂದಿದ್ದಾರೆ.

The post ‘ನಾನು ಕೋಮಾದಲ್ಲಿದ್ರೆ ಹೀಗೆ ಮಾತಾಡ್ತಿದ್ನಾ.? ದರ್ಶನ್​​​ ಸರ್ ಹೊಡೆದಿಲ್ಲ’ ಇಂದ್ರಜಿತ್​ಗೆ ಗೋಪಾಲ್​ರಾಜ್ ತಿರುಗೇಟು appeared first on News First Kannada.

Source: newsfirstlive.com

Source link