ಮನೆ ಕಟ್ಟಿಸಲು ಬಂದ ಕಾಂಟ್ರಾಕ್ಟರ್​​, ಮಕ್ಕಳಿಂದಲೂ ದೂರ ಮಾಡಿ ಸ್ನೇಹಿತನ ಹೆಂಡ್ತಿ ಹಾರಿಸ್ಕೊಂಡ್ಹೋದ

ಮನೆ ಕಟ್ಟಿಸಲು ಬಂದ ಕಾಂಟ್ರಾಕ್ಟರ್​​, ಮಕ್ಕಳಿಂದಲೂ ದೂರ ಮಾಡಿ ಸ್ನೇಹಿತನ ಹೆಂಡ್ತಿ ಹಾರಿಸ್ಕೊಂಡ್ಹೋದ

ಜೊತೆಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕಿದ ಸ್ನೇಹಿತನಿವನು.. ಹೆಂಡ್ತಿ ಮೇಲೆ ಕಣ್ಣಾಕ್ಕಿದ್ದ ಆತ ತನ್ನ ಜೀವದ ಗೆಳಯನ ಹೆಂಡ್ತಿ ಜೊತೆ ಎಸ್ಕೇಪ್ ಆಗಿದ್ದಾನೆ. ಇತ್ತ ಹೆಂಡ್ತಿ ಬೇಕು ಹೆಂಡ್ತಿ ಬೇಕು ಅಂಥ ಪತಿ ಮಹಾಶಯ ಅಂಗಲಾಚುತ್ತಿರುವ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.

ಕೋಣನಕುಂಟೆ ನಿವಾಸಿ ದೇವರಾಜ್ ಹಾಗೂ ಆತನ ಪತ್ನಿ ಲತಾ ಮನೆ ಕಟ್ಟಲು ಸ್ನೇಹಿತ ಮಹೇಶ್ ಗೆ ಕಾಟ್ರೆಂಕ್ಟ್ ಕೊಟ್ಟಿದ್ದರು. ಈ ವೇಳೆ ಲತಾ ಜೊತೆ ಮಹೇಶ್ ಸ್ನೇಹ ಬೆಳೆಸಿದ್ದ. ಬಳಿಕ ಇವರ ಸಂಬಂಧ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಸ್ವಲ್ಪ ದಿನಗಳ ನಂತರ ಗಂಡ ದೇವರಾಜ್ ನ ಬಿಟ್ಟು ಹೊರ ಹೋದ ಹೆಂಡತಿ ಲತಾ ಆತನ ಜೊತೆನೇ ಸಂಸಾರ ಶುರುಮಾಡಿದ್ಲು.

blank
ದೇವರಾಜ್

ಇನ್ನೂ ಅನೈತಿಕ ಸಂಬಂಧದ ಬಗ್ಗೆ ಕಂಪ್ಲೇಂಟ್ ಕೊಡೋಕೆ ಹೋದ್ರೆ ಯಾವುದೇ ಪ್ರಯೋಜನ ಆಗ್ತಿಲ್ಲಂತೆ. ಯಾಕಂದ್ರೆ ಕೋಣನಕುಂಟೆ ಇನ್ಸ್ ಪೆಕ್ಟರ್ ನಂಜೇಗೌಡ ಆರೋಪಿಗಳಿಗೆ ಸಪೋರ್ಟ್ ಮಾಡ್ತಿದ್ದಾರಂಥೆ. ದೇವರಾಜ್ ರಿಂದ ಇನ್ಸ್ ಪೆಕ್ಟರ್ ನಂಜೇಗೌಡರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ತನ್ನ ಹೆಂಡ್ತಿ ಹಾಗೂ ಆತನ ಲವರ್ ನಿಂದ ಲಂಚ ಪಡೆದು ಇನ್ಸ್ ಪೆಕ್ಟರ್ ಕಿರುಕುಳ ಕೊಡ್ತಿದ್ದಾರಂಥೆ. ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೆಂಡತಿ ವಿರುದ್ಧ ದೂರು ಕೊಡೋಕೇ ಹೋದ್ರೆ, ಕೋಣನಕುಂಟೆ ಪೊಲೀಸರು ದೂರು ಸ್ವೀಕರಿಸಿಲ್ವಂಥೆ. ಧಮ್ಕಿ ಹಾಕಿ ಸ್ಟೇಷನ್ ನಲ್ಲೇ ಒಂದು ದಿನ ಕುರಿಸಿರೋ ಆರೋಪ ಕೂಡ ಇದೆ. ಇನ್ನೂ ಇರೋ ಆಸ್ತಿಯೆಲ್ಲಾ ಹೆಂಡತಿ ಹೆಸರಿಗೆ ಮಾಡಿದ್ದ ದೇವರಾಜ್ ಇದೀಗ ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.

blank
ಮಹೇಶ್

ಇನ್ನೂ ಮನೆ ಮಾರಲ್ಲೂ ಪ್ಲಾನ್ ಮಾಡಿರೋ ಲತಾಗೆ ಲವ್ವರ್ ಮಹೇಶ ಸಾಥ್ ಕೊಡ್ತಿದ್ದಾನಂಥೆ. ಇನ್ನೂ ಎರಡು ಹೆಣ್ಣು ಮಕ್ಕಳನ್ನು ನನಗೆ ಕೊಡುವಂತೆ ಗಂಡನಿಗೆ ಧಮ್ಕಿ ಹಾಕಿದ್ದಾಳಂಥೆ. ಸದ್ಯ ಕೋರ್ಟ್ ನಿಂದ ತಡೆಯಾಜ್ಞೆ ತಂದಿರುವ ಪತಿ ದೇವರಾಜ್ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ.

ವರದಿ; ಅಂಕಿತಾ ರೈ, ಬೆಂಗಳೂರು

The post ಮನೆ ಕಟ್ಟಿಸಲು ಬಂದ ಕಾಂಟ್ರಾಕ್ಟರ್​​, ಮಕ್ಕಳಿಂದಲೂ ದೂರ ಮಾಡಿ ಸ್ನೇಹಿತನ ಹೆಂಡ್ತಿ ಹಾರಿಸ್ಕೊಂಡ್ಹೋದ appeared first on News First Kannada.

Source: newsfirstlive.com

Source link