ದರ್ಶನ್ ಒಮ್ಮೆ ಕೆಟ್ಟದಾಗಿ ಬೈದ್ರು ಅದಕ್ಕೆ ಕೆಲಸ ಬಿಟ್ಟೆ: ಹಾರ್ಸ್ ರೈಡರ್ ಸಂತೋಷ್

ಬೆಂಗಳೂರು: ನಟ ದರ್ಶನ್ ಅವರೊಂದಿಗಿದ್ದ ಹಾರ್ಸ್ ರೈಡರ್‍ಗೆ ಹಲ್ಲೆ ಮಾಡಿದ್ದರು ಎಂಬ ಆರೋಪವನ್ನು ಇಂದ್ರಜಿತ್ ಲಂಕೇಶ್ ಮಾಡಿದ್ದರ. ಆದ್ರೆ ಹಾರ್ಸ್ ರೈಡರ್ ಸಂತೋಷ್ ಆರೋಪವನ್ನು ಅಲ್ಲಗಳೆದಿದ್ದಾರೆ. ನನಗೆ ದರ್ಶನ್ ಅವರು ಹಲ್ಲೆ ಮಾಡಿಲ್ಲ. ನಾನು ಏಳು ವರ್ಷ ದರ್ಶನ್ ಅವರೊಂದಿಗಿದ್ದೆ. ಒಂದು ದಿನ ಕೆಟ್ಟದಾಗಿ ಬೈದ್ರು, ಅದಕ್ಕೆ ಕೆಲಸ ಬಿಟ್ಟೆ ಎಂದಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂತೋಷ್, ನಾನು 7 ವರ್ಷಗಳ ಕಾಲ ಹಾರ್ಸ್ ರೈಡರ್ ಆಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಕೂಡ ದರ್ಶನ್ ನನ್ನೊಂದಿಗೆ ಏಕವಚನದಲ್ಲೂ ಮಾತನಾಡಿರಲಿಲ್ಲ ತುಂಬಾ ಚೆನ್ನಾಗಿ ಇದ್ವಿ, ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದ್ರು ಅದಕ್ಕೆ ಕೆಲಸ ಬಿಟ್ಟೆ ಅದನ್ನು ಹೊರತು ಪಡಿಸಿ ನನಗೆ ಯಾವುದೇ ರೀತಿ ಹಲ್ಲೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

ದರ್ಶನ್ ಮತ್ತು ನಾನು ಚೆನ್ನಾಗಿ ಇದ್ವಿ, ಈಗಲೂ ಅವರ ಅಮ್ಮ ನನ್ನೊಂದಿಗೆ ಮಾತನಾಡಿಸುತ್ತಾರೆ. ದರ್ಶನ್ ಅವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆ ಬಳಿಕ ಒಂದು ದಿನ ಕುದುರೆ ವಿಚಾರವಾಗಿ ನನಗೆ ಬೈದರು. ಅದಕ್ಕೆ ನಾನು ಕೆಲಸ ಬಿಟ್ಟು ಬಂದೆ. ಅವರೊಂದಿಗೆ ಕೆಲಸ ಬಿಟ್ಟು ಬಂದು 3 ವರ್ಷ ಆಯ್ತು. ನಾನು ಅವರು ಸೆಲೆಬ್ರಿಟಿ ಅಂತ ಜಂಬದಿಂದ ಹೇಳುತ್ತಿಲ್ಲ. ಅವರಿಂದ ಬಿಟ್ಟು ಬಂದೆ ಎನ್ನುವ ಕೋಪಕ್ಕೂ ಹೇಳುತ್ತಿಲ್ಲ. ನಾನು ಅವರೊಂದಿಗೆ 7 ವರ್ಷ ಉತ್ತಮ ಬಾಂಧವ್ಯ ಹೊಂದಿದ್ದೆ. ಅದನ್ನು ಹೊರತು ಪಡಿಸಿ ಬೇರೆನಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್‍ಗೆ ದರ್ಶನ್ ತಿರುಗೇಟು

ಇಂದ್ರಜಿತ್ ಲಂಕೇಶ್ ಆರೋಪವೇನು?:

ದರ್ಶನ್ ವೇಟರ್ ಮೇಲೆ ಹಲ್ಲೆ ಮಾಡಿರುವ ಆರೋಪ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಇಲ್ಲ. ಆದ್ರೆ ತಪ್ಪನ್ನು ತಪ್ಪು ಅಂತ ಒಪ್ಪಿಕೊಳ್ಳಬೇಕು. ಎಷ್ಟು ಅಂತ ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತೀರಾ..? ಓರ್ವ ಸೆಲೆಬ್ರಿಟಿಯಾಗಿದ್ದುಕೊಂಡು ನಿರ್ದೇಶಕ, ನಿರ್ಮಾಪಕ, ವಾಚ್ ಮ್ಯಾನ್ ಗೆ ಅಥವಾ ಸಾಮಾನ್ಯ ನಾಗರಿಕನಿಗೆ ಹೊಡೆಯುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

blank

ಜುಲೈ 3ರಂದು ಗೋಪಾಲ್ ರಾಜ್ ಅರಸು(ಪಪ್ಪು) ಅವರಿಗೆ ಸೋಶಿಯಲ್ ನಲ್ಲಿ ಹೊಡೆದಿದ್ದಾರೆ. ನಿಮ್ಮ ತೋಟದಲ್ಲಿದ್ದ ವಾಚ್ ಮ್ಯಾನ್ ಗೂ ಒದೆ ಬಿದ್ದಿದೆ. ಅವನು ಕೆಲಸನೇ ಬಿಟ್ಟು ಹೋಗಿದ್ದಾನೆ. ಏನಿದು ಇಷ್ಟೊಂದು ಹೊಡೆಯುವುದು, ಇದೇನು ಪಾಳೇಗಾರಿಕೆನಾ..? ಕರ್ನಾಟಕದಲ್ಲಿ ಪಾಳೇಗಾರಿಕೆ ನಡೆಯಲ್ಲ ಎಂದು ದರ್ಶನ್ ವಿರುದ್ಧ ಇಂದ್ರಜಿತ್ ಕಿಡಿಕಾರಿದರು.

blank

ಅರುಣಾ ಕುಮಾರಿ ವಿಚಾರ, ಸಂದೇಶ್ ನಾಗರಾಜ್ ಹೋಟೆಲ್ ನಲ್ಲಿ ಜಗಳದ ಬಗ್ಗೆ ಮಾತಾಡಿದ್ದೆ. ಆ ಬಳಿಕ ದರ್ಶನ್ ಅವರು, ಹೌದು ಹೊಡೆದೆ. ಕೋಪ ಬಂತು ಹೊಡೆದಿದ್ದು ನಿಜ ಅಂದ್ರು. ಈ ಘಟನೆಗೆ ನಾನು ಬದ್ಧ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳು ಕೊಡ್ತೀನಿ. ಸದ್ಯ ಆ ಹುಡುಗ ಕೆಲಸ ಕಳೆದುಕೊಂಡಿದ್ದಾನೆ. ಬರೇ ಇದೊಂದೆ ಅಲ್ಲ, ಇಂತಹ ಪ್ರಕರಣಗಳು ತುಂಬಾ ಇದ್ದಾವೆ ಎಂದು ಹೇಳಿದರು.

The post ದರ್ಶನ್ ಒಮ್ಮೆ ಕೆಟ್ಟದಾಗಿ ಬೈದ್ರು ಅದಕ್ಕೆ ಕೆಲಸ ಬಿಟ್ಟೆ: ಹಾರ್ಸ್ ರೈಡರ್ ಸಂತೋಷ್ appeared first on Public TV.

Source: publictv.in

Source link