ಶೃಂಗೇರಿ ಮಹಿಳೆ ಮೇಲೆ ಆಸಿಡ್​ ದಾಳಿ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಶೃಂಗೇರಿ ಮಹಿಳೆ ಮೇಲೆ ಆಸಿಡ್​ ದಾಳಿ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಮಹಿಳೆಯ ಮೇಲೆ ಆಸಿಡ್ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿರುವ ಜಿಲ್ಲಾ 2ನೇ ಜೆಎಂಎಫ್‌ಸಿ ನ್ಯಾಯಾಲಯ, ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 20 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.

2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ್ ಸಂಗ್ರೇಶಿ ಅವರು ಅಪರಾಧಿಗಳಿಗೆ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ. 2015ರ ಏಪ್ರಿಲ್ 18 ರಂದು ಶೃಂಗೇರಿಯ ಮೆಣಸೆಯಲ್ಲಿ ಮಹಿಳೆಯ ಮೇಲೆ ಆಸಿಡ್​ ದಾಳಿ ನಡೆಸಲಾಗಿತ್ತು. ಗಣೇಶ್, ಕಬೀರ್, ವಿನೋದ್, ಅಬ್ದುಲ್ ಮಜೀದ್ ಎಂಬ ಅಪರಾಧಿಗಳು ಕೃತ್ಯವನ್ನು ಎಸಗಿದ್ದರು. ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿಕೊಂಡು ಬರುವಾಗ ಆರೋಪಿಗಳು ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ್ದರು. ಪ್ರಕರಣದ ಕುರಿತಂತೆ 6 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿದ್ದ ನ್ಯಾಯಾಲಯ ಇಂದು ತೀರ್ಪು ಪ್ರಕಟ ಮಾಡಿದೆ.

blank

ಪ್ರಕರಣದ ತೀರ್ಪಿನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತೆ, ನ್ಯಾಯಾಲಯದ ತೀರ್ಪಿನಿಂದ ಸಂತಸ ಆಗಿದೆ. ಸತತ 6 ವರ್ಷಗಳ ಕಾಲ ಹೋರಾಟ ಮಾಡಿದ್ದೇನೆ. ಈಗ ನನಗೆ ಜೀವನವೇ ಕಷ್ಟವಾಗಿದೆ. ಎಲ್ಲಯೂ ಹೋಗಲು ಆಗೋದಿಲ್ಲ. ಕೆಲಸ ಮಾಡುವುದು ಕೂಡ ಕಷ್ಟವಾಗಿದೆ. ಇಷ್ಟು ದಿನ ಸತ್ತೆ ಹೋಗಿದ್ದೆ. ಇಂದು ನನಗೆ ಸ್ವಲ್ಪ ಉಸಿರು ಬಂದಿದೆ. ಜೀವಂತವಾಗಿಯೇ ಸುಟ್ಟ ಅನುಭವ ನನಗೆ ಆಗಿತ್ತು. ಆಗ ಅವರಿಗೂ ಅದರ ನೋವು ಗೊತ್ತಾಬೇಕು. ಸುದೀರ್ ಹೆಗ್ಡೆ ಅವರು ನನಗೆ ಸಹೋದರನಂತೆ ನಿಂತು ನನಗೆ ಬೆಂಬಲ ನೀಡಿ ಹೋರಾಟ ಮಾಡಿದ್ದಾರೆ. ನನಗೆ ಕೆಲಸದ ಅಗತ್ಯವಿದ್ದು, ನನಗೆ ಇರುವ ಒಂದು ಕಣ್ಣು ಕಣೋ ತನಕ ಕೆಲಸ ಮಾಡುತ್ತೇನೆ ಎಂದರು.

blank

The post ಶೃಂಗೇರಿ ಮಹಿಳೆ ಮೇಲೆ ಆಸಿಡ್​ ದಾಳಿ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ appeared first on News First Kannada.

Source: newsfirstlive.com

Source link