‘ಸ್ಟಾರ್​ ಆಗೋಗಿಂತ ಮೊದಲೇ ನನ್ನ ಸ್ನೇಹಿತ.. ನಮ್ಮ ಸ್ನೇಹ ಒಡೆಯಲು ಇಂದ್ರಜಿತ್​ ಹೀಗೆ ಮಾಡಿದ್ದಾರೆ’

‘ಸ್ಟಾರ್​ ಆಗೋಗಿಂತ ಮೊದಲೇ ನನ್ನ ಸ್ನೇಹಿತ.. ನಮ್ಮ ಸ್ನೇಹ ಒಡೆಯಲು ಇಂದ್ರಜಿತ್​ ಹೀಗೆ ಮಾಡಿದ್ದಾರೆ’

ಮೈಸೂರು: ಇಂದ್ರಜಿತ್ ಲಂಕೇಶ್ ನಟ ದರ್ಶನ್ ಅವರ ಮೇಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗೋಪಾಲ್​ರಾಜ್​.. ಸುಮಾರು ಎರಡೂವರೆ ತಿಂಗಳ ಹಿಂದೆ ನಾನು ದರ್ಶನ್​ ಅವರನ್ನ ಭೇಟಿಯಾಗಿದ್ದೆ.. ಜೊತೆಯಲ್ಲೇ ಊಟ ಮಾಡಿದ್ದೆವು.. ಬಿಟ್ರೆ ಯಾವ ಪಾರ್ಟಿಯನ್ನೂ ಮಾಡಿಲ್ಲ.. ನಾವಿಬ್ಬರೂ ಒಂದೇ ಸ್ಕೂಲ್.. ನಮ್ಮ ಸ್ನೇಹ ಒಡೆಯಲಿಕ್ಕಾಗಿ ಯಾರೋ ಹೀಗೆ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:  “‘ನಾನು ಕೋಮಾದಲ್ಲಿದ್ರೆ ಹೀಗೆ ಮಾತಾಡ್ತಿದ್ನಾ.? ದರ್ಶನ್​​​ ಸರ್ ಹೊಡೆದಿಲ್ಲ’ ಇಂದ್ರಜಿತ್​ಗೆ ಗೋಪಾಲ್​ರಾಜ್ ತಿರುಗೇಟು” 

30 ವರ್ಷಗಳಿಂದ ನಾವು ಜೊತೆಯಲ್ಲೇ ಇದ್ದೇವೆ.. ಹೀಗಾಗಿ ನಮ್ಮ ಸ್ನೇಹ ಒಡೆಯಲಿಕ್ಕೆ ಇಂದ್ರಜಿತ್​ ಅವರು ಹೀಗೆ ಮಾಡಿದ್ದಾರೆ. ನಮ್ಮ ಮಧ್ಯೆ ಯಾವ ಗಲಾಟೆಯೂ ಆಗಿಲ್ಲ. ನನ್ನ ಮೇಲೆ ಅವರು ಹಲ್ಲೆಯನ್ನೂ ಮಾಡಿಲ್ಲ. ನಾನು ಕೋಮಾಗೂ ಹೋಗಿಲ್ಲ.. ಇದೆಲ್ಲ ಸುಳ್ಳು.. ಇಂದ್ರಜಿತ್ ಲಂಕೇಶ್ ಅವರೇ ಇದೆಲ್ಲ ನಿಲ್ಲಿಸಿಬಿಡಿ.. ನಾನು ಕೋಮಾ ಸ್ಟೇಜ್​ಗೆ ಹೋದವನಂತೆ ಕಾಣ್ತಿದ್ದೀನಾ..? ಎಂದು ಪ್ರಶ್ನಿಸಿದ್ದಾರೆ.

The post ‘ಸ್ಟಾರ್​ ಆಗೋಗಿಂತ ಮೊದಲೇ ನನ್ನ ಸ್ನೇಹಿತ.. ನಮ್ಮ ಸ್ನೇಹ ಒಡೆಯಲು ಇಂದ್ರಜಿತ್​ ಹೀಗೆ ಮಾಡಿದ್ದಾರೆ’ appeared first on News First Kannada.

Source: newsfirstlive.com

Source link