ಮತ್ತೆ ದೆಹಲಿ ಯಾತ್ರೆ ಶುರು; ಆಡಳಿತ ಪಕ್ಷದ ಶಾಸಕರಿಂದ ಜುಲೈ 21, 22ಕ್ಕೆ ಪಯಣ -ರೇಣುಕಾಚಾರ್ಯ

ಮತ್ತೆ ದೆಹಲಿ ಯಾತ್ರೆ ಶುರು; ಆಡಳಿತ ಪಕ್ಷದ ಶಾಸಕರಿಂದ ಜುಲೈ 21, 22ಕ್ಕೆ ಪಯಣ -ರೇಣುಕಾಚಾರ್ಯ

ಬೆಂಗಳೂರು: ಲೋಕಸಭಾ ಅಧಿವೇಶನ ಜುಲೈ 19 ರಿಂದ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ 21, 22 ರಂದು ಕೆಲವು ಶಾಸಕರು ದೆಹಲಿಗೆ ಹೋಗಬೇಕು ಅಂತಿದ್ದೇವೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರು, ಸಿಎಂ ಅವರನ್ನು ಬದಲಾಯಿಸಬೇಕು ಅಂತ ಹೇಳುವ ಹಕ್ಕು ಯಾರಿಗೂ ಇಲ್ಲ. ಬದಲಾವಣೆ ಮಾಡೋ ಅಧಿಕಾರ ಒಬ್ಬಿಬ್ಬರ ಕೈನಲ್ಲಿ ಇಲ್ಲ. ಅಂಥವರು ರಾಜ್ಯದ ಜನರ ಮುಂದೆ ವಿಲನ್ ಆಗ್ತಾರೆ. ಬಿಎಸ್​​ವೈ ಸಿಎಂ ಆಗಿ ಎರಡು ವರ್ಷ ಆಯ್ತು. ಒಳ್ಳೆಯ ಕೆಲಸ ಮಾಡ್ತಿದ್ದಾರೆ. ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ಉತ್ತಮ ಕೆಲಸ ಮಾಡ್ತಿದ್ದಾರೆ. ರೇಣುಕಾಚಾರ್ಯ ನಂತ ಒಬ್ಬಿಬ್ಬರಿಂದ ಯಡಿಯೂರಪ್ಪ ಸಿಎಂ ಆಗಿಲ್ಲ. ಎಲ್ಲ ಶಾಸಕರು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಿದ್ದಾರೆ.

blank

ಬೆಂಗಳೂರಿನಲ್ಲಿ ಕುಳಿತು ದೆಹಲಿಯಲ್ಲಿ ಲಾಬಿ ಮಾಡಿದರೆ ಅದೆಲ್ಲ ಆಗಲ್ಲ. ಕೋವಿಡ್ ನಿಂದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಜವಾಬ್ದಾರಿ. ವಿನಾಕಾರಣ ರಾಜಕಾರಣ ಮಾಡಬಾರದು ಅಂತ ವರಿಷ್ಟರು ಹೇಳಿದ್ದಾರೆ. ಏನೇ ಇದ್ದರೂ ನಾಲ್ಕು ಗೋಡೆಯ ಮಧ್ಯೆ ಮಾತನಾಡಬೇಕು. ಶಾಸಕರ ಸಹಿ ಸಂಗ್ರಹ ಮಾಡುವುದಕ್ಕೆ ಅರುಣ್ ಸಿಂಗ್ ಬರುವಾಗ ನಿರ್ಧರಿಸಿದ್ದು ಸತ್ಯ, ಆದರೆ ಯಡಿಯೂರಪ್ಪ ಹಾಗೂ ಅಧ್ಯಕ್ಷರು ಸಹಿ ಸಂಗ್ರಹ ಬೇಡ ಅಂತ ಖಡಾಖಂಡಿತವಾಗಿ ಹೇಳಿದ್ದರು. ಸಹಿ ಮಾಡಿಸಿದ್ದು ಸತ್ಯ, ತೋರಿಸಿದ್ದು ಸತ್ಯ ಆದರೆ ಕೇಂದ್ರದ ವರಿಷ್ಠರಿಗೆ ಅದನ್ನು ನಾನು ಕೊಡ್ತೀನಿ ಅಂತ ಹೇಳಿಲ್ಲ ಎಂದರು.

ಇದೇ ವೇಳೆ ಸಿಎಂ ದೆಹಲಿ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಹಜವಾಗಿಯೇ ಸಿಎಂ ರಾಜ್ಯದ ಅಭಿವೃದ್ಧಿಗೋಸ್ಕರ ಹೋಗಬಹುದು. ಆದರೆ ಅದನ್ನು ಕೇಳುವಷ್ಟು ದೊಡ್ಡವನೂ ನಾನಲ್ಲ, ಅವರು ನನ್ನ ಬಳಿ ಹೇಳುವಷ್ಟು ಸಣ್ಣವರೂ ಅವರಲ್ಲ. ಯಾರು ಪದೇ ಪದೇ ನಾಯಕತ್ವ ಬದಲಾವಣೆ ಮಾತನಾಡುವವರಿಗೆ ಈಗಾಗಲೇ ಹೇಳಿಯಾಗಿದೆ. ಆದರೆ ಕೆಲವರು ಹಗಲು ಕನಸು ಕಾಣ್ತಾರೆ, ಯಾರ್ ಯಾರಿಗೆ ಯಾವ ಕನಸು ಬೀಳತ್ತೋ ಎಂಜಾಯ್ ಮಾಡಿ ಎಂದರು.

The post ಮತ್ತೆ ದೆಹಲಿ ಯಾತ್ರೆ ಶುರು; ಆಡಳಿತ ಪಕ್ಷದ ಶಾಸಕರಿಂದ ಜುಲೈ 21, 22ಕ್ಕೆ ಪಯಣ -ರೇಣುಕಾಚಾರ್ಯ appeared first on News First Kannada.

Source: newsfirstlive.com

Source link