ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ..: 34.46 ಲಕ್ಷ ರೂ. ಮೌಲ್ಯದ ಚಿನ್ನ ವಶ, ಇಬ್ಬರ ಬಂಧನ

ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ..: 34.46 ಲಕ್ಷ ರೂ. ಮೌಲ್ಯದ ಚಿನ್ನ ವಶ, ಇಬ್ಬರ ಬಂಧನ

ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 339 ಗ್ರಾಂ ಚಿನ್ನವನ್ನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚಿನ್ನವನ್ನು ಸೂಟ್‌ಕೇಸ್‌ ಅಡಿಯಲ್ಲಿ ಕಾಣದಂತೆ ಇಟ್ಟು ಕಸ್ಟಮ್ಸ್​ ಅಧಿಕಾರಿಗಳ ಕಣ್ಣು ತಪ್ಪಿಸಿ ಹೋಗುತ್ತಿರುವಾಗ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದು ಅಕ್ರಮವಾಗಿ ಸಾಗಿಸಲಾಗುತ್ತಿದ್ದ 34.46 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಗಿದೆ. ಕೇರಳದ ಕಾಸರಗೋಡು ನಿವಾಸಿ ಮೊಹಮ್ಮದ್‌ ಅನ್ಸಾರ್‌ ಕಯ್ಯಾರ್‌(34) ಹಾಗೂ ಕೋಝಿಕ್ಕೋಡ್‌ ನಿವಾಸಿ ಮೊಹಮ್ಮದ್‌ ಮೂಸಾ ಮಿಯಾಸ್‌(18) ಬಂಧಿತರು.

ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನದಲ್ಲಿ ದುಬೈ ನಿಂದ ಬಂದಿದ್ದ ಅನ್ಸಾರ್ ಕಯ್ಯಾರ್ ಹಾಗು ಮೂಸಾ ಮಿಯಾಸ್, ಭಾರತಕ್ಕೆ ವಾಪಾಸಾಗಿದ್ದು ಸಂಶಯದ ಮೇಲೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ ಸಂದರ್ಭದಲ್ಲಿ ಚಿನ್ನ ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

The post ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ..: 34.46 ಲಕ್ಷ ರೂ. ಮೌಲ್ಯದ ಚಿನ್ನ ವಶ, ಇಬ್ಬರ ಬಂಧನ appeared first on News First Kannada.

Source: newsfirstlive.com

Source link