ತಾಲಿಬಾನ್ ಜೊತೆ ಕೈಜೋಡಿಸಿದ​ ಪಾಕ್ ಉಗ್ರರು- ಅಫ್ಘಾನ್​ನಲ್ಲಿ ಮಹಿಳೆಯರು ಗನ್ ಕೈಗೆತ್ತಿಕೊಂಡಿದ್ದೇಕೆ?

ತಾಲಿಬಾನ್ ಜೊತೆ ಕೈಜೋಡಿಸಿದ​ ಪಾಕ್ ಉಗ್ರರು- ಅಫ್ಘಾನ್​ನಲ್ಲಿ ಮಹಿಳೆಯರು ಗನ್ ಕೈಗೆತ್ತಿಕೊಂಡಿದ್ದೇಕೆ?

ಅಫ್ಘಾನ್​ನಲ್ಲಿ ಮತ್ತೆ ಅರಾಜಕತೆ ಉಂಟಾಗಿದೆ. ವಿಶ್ವದ ದೊಡ್ಡಣ್ಣನ ಸೇನೆ ಮರಳಿ ತವರು ಸೇರುತ್ತಿದ್ದಂಗೆ, ಪಾಕಿಸ್ತಾನದ ಸಾವಿರಾರು ಭಯೋತ್ಪಾದಕರು ಅಫ್ಘಾನ್ ತಾಲಿಬಾನ್​ಗಳ ಜೊತೆ ಸೇರ್ಕೊಂಡು ಬಿಟ್ಟಿದ್ದಾರೆ. ಅಘ್ಘಾನ್​ ತಾಲಿಬಾನ್​ಗಳು ಪಾಕ್ ಭಯೋತ್ಪಾದಕರು ಸೇರಿ ಹೊಸ ಗೇಮ್ ಪ್ಲಾನ್ ಮಾಡ್ಕೊಂಡಿದ್ದಾರೆ. ಈ ನಡುವೆ ಅಫ್ಘಾನ್​ನಲ್ಲಿ ಮಹಿಳೆಯರು ಗನ್ ಹಿಡಿದು ಹೊರಟಿ ಬಿಟ್ಟಿದ್ದಾರೆ.

ವಿಶ್ವದ ದೊಡ್ಡಣ್ಣ ಅಘ್ಘಾನ್ ನೆಲದಿಂದ ಹೆಜ್ಜೆ ಹಿಂದಿಟ್ಟಿದ್ದಾನೆ. ಯಾವಾಗ ಅಮೆರಿಕ ಸೇನೆ ಸಮೇತ ಅಫ್ಘಾನ್ ನೆಲದಿಂದ ಜಾಗ ಖಾಲಿ ಮಾಡಿತೋ, ಅವಾಗ್ಲೆ ಅಫ್ಘಾನಿಸ್ತಾನದ ಗಲ್ಲಿಗಲ್ಲಿಯಲ್ಲೂ ಅಡಗಿ ಕೂತಿದ್ದ ತಾಲಿಬಾನ್ ಉಗ್ರರು ಕೆಂಪಿರುವೆಯಂತೆ ಹೊರ ಬಂದಿದ್ದಾರೆ. ತಾಲಿಬಾನ್ ಉಗ್ರರು ಒಂದೊಂದೆ ಪ್ರದೇಶಗಳ ಮೇಲೆ ಅಧಿಪತ್ಯ ಸ್ಥಾಪಿಸುತ್ತಿದ್ದಾರೆ. ಒಂದೊಂದೇ ರಾಜ್ಯಗಳೇ ತಾಲಿಬಾನಿಗಳ ವಶವಾಗುತ್ತಿವೆ. ಒಂದು ಕಾಲದ ಸ್ವರ್ಗದಂತಹ ಜಾಗ ನರಕವಾಗಲು ಅಂದು ಯಾರು ಕಾರಣರಾಗಿದ್ರೋ ಮತ್ತೆ ಅದೇ ತಾಲಿಬಾನ್​ಗಳು ಅಫ್ಗಾನ್​ ನೆಲದಲ್ಲಿ ನೆತ್ತರು ಹರಿಸಲು ಮತ್ತೆ ಶಸ್ತ್ರಾಸ್ತ್ರ ಕೈ ಗೆತ್ತಿಕೊಂಡಿದ್ದಾರೆ. ಎರಡು ಕೈ ಸೇರಿದ್ರೆ ಚಪ್ಪಾಳೆ ಎಂಬಂತೆ, ತಾಲಿಬಾನ್​ಗಳ ಕುಕೃತ್ಯಕ್ಕೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರು ಕೂಡ ಸಾಥ್ ನೀಡ್ತಿದ್ದಾರೆ. ಈ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದೆ.

blank

7200 ಪಾಕ್ ಭಯೋತ್ಪಾದಕರು ತಾಲಿಬಾನ್​ಗೆ ಸೇರ್ಪಡೆ!

ಜಗತ್ತಿನ ಯಾವ ಮೂಲೆಯಲ್ಲಾದ್ರು ಭಯೋತ್ಪಾದಕ ಚಟುವಟಿಕೆ ನಡೆತ್ತಿದೆ ಅನ್ನೋದು ಗೊತ್ತಾದ್ರೆ ಸಾಕು, ಅಲ್ಲೆಲ್ಲ ಪಾಕಿಸ್ತಾನ ಎಂಟ್ರಿ ಕೊಟ್ಟು ತನ್ನ ಬೆಂಬಲ ಸೂಚಿಸುತ್ತೆ. ಅಂದಮೇಲೆ ತನ್ನ ನೆರೆಯ ರಾಷ್ಟ್ರದಲ್ಲಿ ಭಯೋತ್ಪಾದಕರು ಚಿಗುರಿಕೊಂಡಿದ್ದಾರೆನ್ನುವುದು ಗೊತ್ತಾದ್ರೆ ಪಾಕಿಸ್ತಾನ ಸುಮ್ಮನಿರುತ್ತಾ ಹೇಳಿ..? ಖಂಡಿತ ಇಲ್ಲ. ಅಮೆರಿಕ ಸೇನೆ ಅಘ್ಫಾನ್ ನಿಂದ ರಿಟರ್ನ್ ಹೆಜ್ಜೆ ಹಿಡ್ತಿದ್ದಂಗೆ, ಅದ್ಕೆಂದೆ ಕಾಯುತ್ತಿದ್ದ ಪಾಕಿಸ್ತಾನದಲ್ಲಿ ಉಗ್ರ ಸಂಘಟನೆಗಳು ಅಫ್ಘಾನ್​ಗೆ ಹಾರಿ ಬಿಟ್ಟಿದೆ.

ರೋಗಿ ಬಯಸಿದ್ದು ಹಾಲು, ವೈದ್ಯ ಹೇಳಿದ್ದು ಎಂಬಂತ್ತಾಗಿದೆ ಸದ್ಯ ಅಘ್ಘಾನ್ ತಾಲಿಬಾನ್ ಹಾಗೂ ಪಾಕ್ ಉಗ್ರರ ನಡುವಿನ ಸಂಬಂಧ. ಅಘ್ಘಾನ್ ನೆಲದಿಂದ ಪಾಕ್ ಸೇನೆ ವಾಪಸಾದ ಮೇಲೆ ಪಾಕ್ ನಲ್ಲಿದ್ದ ಉಗ್ರರ ಸಂಭ್ರಮ ಮುಗಿಲು ಮುಟ್ಟಿತ್ತು. ತಮ್ಮ ದುಷ್ಕೃತ್ಯಗಳಿಗೆ ವಿಶ್ವದ ದೊಡ್ಣಣ್ಣನ ಸೇನೆ ಅಡ್ಡ ಬರಲ್ಲ ಎಂಬುವುದು ಯಾವಾಗ ಖಾತ್ರಿಯಾಯ್ತೋ, ಪಾಕ್​ನಲ್ಲಿ ಉಗ್ರರು ಅಘ್ಘಾನ್​ನಲ್ಲಿದ್ದ ತಾಲಿಬಾನ್​ಗಳ ಜೊತೆ ಸೇರಿ ವಿಧ್ವಂಸಕ ಕೃತ್ಯ ಎಸಗಲು ರೆಡಿಯಾಗಿದ್ದಾರೆ.

ಈ ನಡುವೆ ಪಾಕಿಸ್ತಾನದ ಬರೋಬ್ಬರಿ 7200 ಭಯೋತ್ಪಾದಕರು ತಾಲಿಬಾನ್​ ಸೇರ್ಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ತಾಲಿಬಾನ್ ಪರ ಭಾವನೆ ಬಲಗೊಳ್ಳುತ್ತಿದ್ದು, ಪಾಕಿಸ್ತಾನದ ಆರು ಭಯೋತ್ಪಾದಕ ಸಂಘಟನೆಗಳು ತಾಲಿಬಾನ್ ಜೊತೆ ಸೇರ್ಕೊಂಡಿದ್ದಾರೆ. ಪಾಕ್ ಭಯೋತ್ಪಾದಕರು ಸಲಹೆಗಾರರಗಾಗಿ, ಕಮಾಂಡರ್ ಆಗಿ ತಾಲಿಬಾನ್ ಸೇರ್ಕೊಂಡಿದ್ದಾರೆ ಎನ್ನಲಾಗಿದೆ. ಪಾಕ್ ಭಯೋತ್ಪಾದನೆ ಸಂಘಟನೆ ಕೈ ಜೋಡಿಸುತ್ತಿದ್ದಂಗೆ ತಾಲಿಬಾನ್​ಗಳಿಗೆ ತಮ್ಮ ದುಷ್ಕೃತ್ಯ ಎಸಗಲು ಮತ್ತಷ್ಟು ಬಲಬಂದಂತಾಗಿದೆ.

blank

ಕಳ್ಳರು, ಸುಳ್ಳರು ಸೇರಿ ದೊಡ್ಡ ಸ್ಕೆಚ್​ಗೆ ಸಿದ್ಧರಾದ್ರಾ?
ಅಫ್ಘಾನ್ ತಾಲಿಬಾನ್​ಗಳು ಹಾಗು ಪಾಕಿಸ್ತಾನದ ಭಯೋತ್ಪಾದಕರು ಸೇರಿ ಹೊಸ ಗೇಮ್​ ಪ್ಲಾನ್ ಶುರು ಮಾಡ್ಕೊಂಡಿದ್ದಾರೆ. ಒಂದು ಕಡೆ ಕಳ್ಳರು, ಮತ್ತೊಂದು ಕಡೆ ಸುಳ್ಳರು. ಕಳ್ಳರು, ಸುಳ್ಳರು ಸೇರಿ ದೊಡ್ಡ ಸ್ಕೆಚ್​ಗೆ ಸಿದ್ಧರಾಗಿದ್ದಾರೆ. ಈ ನಡುವೆ ಪಾಕ್ ಭಯೋತ್ಪಾದಕರು ತಾಲಿಬಾನ್ ಗಳ ಜೈಜೋಡಿಸಿ ಹಲವು ಗಡಿ ಪ್ರಾಂತ್ಯಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೂ ಕೂಡ ಹೊರ ಬಿದ್ದಿದೆ. ಇಬ್ಬರು ಒಟ್ಟಾಗಿ ಕೈ ಜೋಡಿಸಿದ್ದು, ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಆತಂಕ ತರ್ತಾ ಇದಾರೆ.

ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಭಯೋತ್ಪಾದನೆಗೆ ದುಡ್ಡಿದ್ಯಾ?
ಒಂದು ಕಡೆ ಪಾಕ್​ ನೆಲದಲ್ಲಿ ಬಡತನ ತಾಂಡವಾಡ್ತಿದೆ. ದಿನಬಳಕೆಯ ವಸ್ತುಗಳಿಗೂ ಹಾಹಾಕಾರ ಎದ್ದಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆದ್ರೆ ಈ ನಡುವೆ ಭಯೋತ್ಪಾದಕ ಕೃತ್ಯಗಳು ಪಾಕ್​ನಲ್ಲಿ ಬಲಗೊಳ್ತಾನೇ ಇದೆ. ಇದಕ್ಕೆ ಅದ್ಯಾರು ಫಂಡಿಂಗ್ ಮಾಡ್ತಾರೋ ಗೊತ್ತಾಗುವುದಿಲ್ಲ. ಆದ್ರೆ ಪಾಕಿಸ್ತಾನ ಸರ್ಕಾರ ಮೇಲ್ನೋಟಕ್ಕೆ ಮಾತ್ರ ಉಗ್ರ ನಿಗ್ರಹದ ಮಾತನಾಡುತ್ತೆ ವಿನಹ ಅದನ್ನು ಜಾರಿಗೆ ತರೋದೇ ಇಲ್ಲ. ಹೀಗಾಗಿ ಪಾಕಿಸ್ತಾನವನ್ನು ಎಂದಿಗೂ ನಂಬೋಕೆ ಆಗೋದಿಲ್ಲ. ಇದು ವಿಶ್ವ ಸಮುದಾಯಕ್ಕೂ ಗೊತ್ತಿದೆ. ಆದ್ರೆ ಈಗ ಬಾಲಬಿಚ್ಚಿರುವ ತಾಲಿಬಾನಿಗಳ ಜೊತೆ ಪಾಕಿಗಳು ಸೇರಿಕೊಂಡು ಬಿಟ್ಟರೆ ಅದೇನೇನು ಅನಾಹುತ ಸೃಷ್ಟಿಸ್ತಾರೋ ಅನ್ನೋದೇ ಆತಂಕಕ್ಕೆ ಕಾರಣ.

blank

ಅಫ್ಘಾನನ್ನು ಮತ್ತೆ ನರಕ ಮಾಡಲು ಹೊರಟ್ರಾ ಇವರು?
ಒಂದು ಕಾಲದ ಸ್ವರ್ಗದಂತಹ ಜಾಗ ಅಫ್ಘಾನಿಸ್ತಾನ ನರಕವಾಗಿದ್ದೇ ಇದೇ ತಾಲಿಬಾನ್ ಗಳಿಂದ. ಅಘ್ಘಾನ್ ಜನರ ಕಿವಿಗಳಿಗೆ ಹಕ್ಕಿಗಳ ಚಿಲಿಪಿಲಿ ಮಾಯವಾಗಿ ಬಾಂಬು ಗುಂಡುಗಳ ಶಬ್ದವೇ ಹೆಚ್ಚಾಗಿ ಕೇಳಲು ಕಾರಣವಾಗಿದ್ದೆ ತಾಲಿಬಾನ್​ಗಳು. ಆದರೆ 20 ವರ್ಷಗಳ ಹಿಂದೆ ವಿಶ್ವದ ದೊಡ್ಡಣ್ಣ ತನ್ನ ಸೇನೆಯಲ್ಲಿ ಕರೆದುಕೊಂಡು ಬಂದು, ತಾಲಿಬಾನ್​ಗಳ ವಿರುದ್ಧ ಸಮರ ಸಾರಿದ್ದ. ಆ ಬಳಿಕ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿತ್ತು. ಉಗ್ರರು ಹಾವಳಿ ಸಂಪೂರ್ಣವಾಗಿ ನಿಂತಿಲ್ಲವಾದ್ರೂ, ಮುಖ್ಯವಾಹಿನಿಗೆ ಬಂದು ನಿಲ್ಲುವಂತಹ ಧೈರ್ಯ ಮಾಡ್ಲಿಲ್ಲ. ಅಮೆರಿಕ ಸೇನೆ ಪ್ರಾಬಲ್ಯಕ್ಕೆ ತಾಲಿಬಾನ್ ಗಳೆಲ್ಲ ಚದುರಿ ಹೋಗಿದ್ರು. ಉಗ್ರೆರೆಲ್ಲಾ ಚೆಲ್ಲಾಪಿಲ್ಲಿಯಾಗಿ ಗುಹೆ ಸೇರಿದ್ರು.ಆದ್ರೆ ಅಮೆರಿಕ ಸೇನೆ ವಾಪಸ್ಸಾತಿಯಿಂದ ಚದುರಿ ಹೋಗಿದ್ದ, ತಾಲಿಬಾನ್ ಗಳು ಮತ್ತೆ ಚಿಗುರಿಕೊಂಡಿದ್ದಾರೆ. ಅಫ್ಘಾನಲ್ಲಿ ಮತ್ತೆ ಅಟ್ಟಹಾಸದ ನಗು ಬೀರಲು ಸಿದ್ದರಾಗಿದ್ದಾರೆ.

ಚದುರಿ ಹೋಗಿದ್ದ ತಾಲಿಬಾನಿಗಳು ಮತ್ತೆ ಚಿಗುರಿಕೊಂಡಿದ್ದೇಗೆ?
ಅಫ್ಘಾನಿಸ್ತಾನದ ಜನರು ಅದೇನು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಜನರಿಗೆ ಶಾಂತಿ ಎನ್ನವುದೇ ಮರೆತು ಹೋದಂತ್ತಿದೆ. ಹೆಜ್ಜೆ ಹೆಜ್ಜೆಗೂ ಜನರಲ್ಲಿ ಭಯ ಆವರಿಸಿದೆ. ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಆತಂಕ ಉಂಟಾಗಿದೆ. ಅಫ್ಘಾನಿಸ್ತಾನ ಎಂಬ ಉಗ್ರರ ಕೂಪದಲ್ಲಿ ಶಾಂತಿ ಕಾಪಾಡುತ್ತೇನೆ ಅಂತಾ ಮೊಳೆ ಹೊಡೆದು ಕೂತಿದ್ದ ಅಮೆರಿಕ, ದಿಢೀರ್ ಅಲ್ಲಿಂದ ಹೊರಗೆ ಬಂದಂದೆ ತಡ, ಒಂದಷ್ಟು ಬಾಲ ಮುದುರಿಕೊಂಡು ಬೆಟ್ಟ, ಗುಡ್ಡದಲ್ಲಿ ಅಡಗಿ ಕೂತಿದ್ದ ಉಗ್ರರು ಬಾಲ ಬಿಚ್ಚುತ್ತಿದ್ದಾರೆ. ಅಘ್ಘಾನ್ ನಲ್ಲಿ ಮತ್ತೆ ತಾಲಿಬಾನ್ ಗಳ ಅಬ್ಬರ ಮುಂದುವರೆದಿದೆ.

‘ಮೂರ್ಖಂಗೆ ಬುದ್ಧಿಯನು ನೂರ್ಕಾಲ ಪೇಳಿದರೆ, ಗೋರ್ಕಲ್ಲ ಮೇಲೆ ಮಳೆ ಸುರಿದರಾ ಕಲ್ಲು, ನೀರ್ಕೊಂಬುದುಂಟೆ ಸರ್ವಜ್ಞ’ ಎಂಬ ಸರ್ವಜ್ಷರ ಮಾತನ್ನು ಇಲ್ಲಿ ನಾವು ಗಮನಿಸಬಹುದು. ಮೂರ್ಖಂಗೆ ಎಷ್ಟೇ ಬುದ್ದಿ ಹೇಳಿದ್ರೂ, ಕಡೆಗೆ ಅದು ಅನುಭವವಾದಾಗ ಮಾತ್ರ ಕಲ್ಲಿನಂತ ಜಡತ್ವದಿಂದ ಮೇಲೆದ್ದು ಬರ್ತಾನೆ. ಆದ್ರೆ ಅಘ್ಘಾನ್​ಗೆ ಪಾಕ್ ಉಪಟಳ ಬಗ್ಗೆ ಗೊತ್ತಿದೆ. ಪಾಕಿಸ್ತಾನ ಜಗತ್ತಿನ ಯಾವ ಮೂಲೆಗೆ ಹೋದ್ರು ತನ್ನ ಬುದ್ದಿಯನ್ನು ಬಿಡಲ್ಲ ಅನ್ನೋದು ಕೂಡ ಕನ್ಫರ್ಮ್ ಇದೆ. ಪಾಕ್ ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದ್ರೂ,ಪಾಕ್ ಉಗ್ರರು ಅಘ್ಘಾನ್ ನೆಲ ಸೇರ್ತಿದ್ರೂ ಅಘ್ಘಾನ್ ಸರ್ಕಾರ ಮೌನವಾಗಿದ್ದೇಕೆ..? ಅಫ್ಘಾನ್​ ಸರ್ಕಾರವೇ ದಾರಿಯಲ್ಲಿರುವ ಕಲ್ಲನ್ನ ತನ್ನ ಎದೆ ಮೇಲೆ ಹಾಕಿಕೊಳ್ಳುತ್ತಿದ್ಯಾ ಎಂಬ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅದ್ಯಾವಾಗ ಅಫ್ಘಾನ್ ಎಚ್ಚೆತ್ತೊ ಕೊಳ್ಳುತ್ತೋ ಗೊತ್ತಿಲ್ಲ. ಎಚ್ಚೆತ್ತು ಕೊಳ್ಳುವಷ್ಟರಲ್ಲಿ ದುರಂತ ಕಡೆ ಮುಖ ಮಾಡಿರುತ್ತೆ ಎನ್ನುವುದು ಮಾತ್ರ ಪಕ್ಕಾ.

blank

ತಾಲಿಬಾನ್ ವಿರುದ್ಧ ಸಮರ ಸಾರಿದ್ರಾ ನಾರಿಯರು?
ಅಫ್ಘಾನ್​ನಲ್ಲಿ ಮಹಿಳೆಯರು ಗನ್ ಕೈಗೆತ್ತಿಕೊಂಡಿದ್ದೇಕೆ?
ಮಹಿಳೆಯರು ಗನ್ ಹಿಡಿದು ಹೊರಟ್ಟಿದ್ದಾದ್ರೂ ಎಲ್ಲಿಗೆ?

ತಾಲಿಬಾನ್ ಗಳು ತಮ್ಮ ಹಿಡಿತ ಬಲ ಪಡಿಸುತ್ತಿದ್ದಂಗೆ ಅಫ್ಘಾನ್ ನಲ್ಲಿ ವಿಚಿತ್ರ ವಿಚಿತ್ರ ನಿಯಮಗಳನ್ನು ಜಾರಿಗೆ ತರ್ತಿದ್ದಾರೆ. ಮಹಿಳೆಯರು ಮತ್ತೆ ಮನೆಯೊಳಗಡೆ ಬಂಧಿಯಾಗುವಂತೆ ರೂಲ್ಸ್ ಮಾಡಿದ್ದಾರೆ. ತಾಲಿಬಾನ್​ಗಳ ಉಪಟಳಕ್ಕೆ ಖುದ್ದು ಸರ್ಕಾರವೇ ಏನು ಮಾಡಲಾಗದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಯೋಧರು ದೇಶವನ್ನೇ ಬಿಟ್ಟು ಪಲಾಯನ ಮಾಡ್ತಿದ್ದಾರೆ. ತಾಲಿಬಾನ್ ಉಪಟಳ ಮಹಿಳೆಯರ ಸಹನೆಯನ್ನ ಕಟ್ಟೆಯನ್ನು ಹೊಡೆಯುವಂತೆ ಮಾಡಿದೆ. ತಾಲಿಬಾನ್​ಗಳ ವಿರುದ್ಧ ಅಫ್ಘಾನ್ ಅಘ್ಘಾನ್ ನಾರಿಯರು ಸಿಡಿದು ನಿಂತ್ತಿದ್ದಾರೆ. ಗನ್ ಕೈಗೆತ್ತಿಗೊಂಡು ತಾಲಿಬಾನ್ ವಿರುದ್ಧ ಬಂಡಾಯ ಸಾರುತ್ತಿದ್ದಾರೆ. ನೂರಾರು ಮಹಿಳೆಯರು ಗನ್ ಹಿಡಿದು ತಾಲಿಬಾನ್​ ವಿರುದ್ಧ ಬೀದಿಗಿಳಿದ್ದಾರೆ. ತಾಲಿಬಾನ್ ವಿರುದ್ಧ ಘೋಷಣೆ ಕೂಗುತ್ತಾ ತಮ್ಮ ಕಿಚ್ಚನ್ನ ಹೊರ ಹಾಕಿದ್ದಾರೆ. ಇದನ್ನೆಲ್ಲ ಗಮನಿಸಿದ್ರೆ ಅಫ್ಘಾನಿಸ್ತಾನ ಮುಂದೆ ಆಂತರಿಕ ಸಂಘರ್ಷದಿಂದ ನಲುಗಿ ಹೋಗುತ್ತೋ ಅನ್ನೋ ಅನುಮಾನ ದಟ್ಟವಾಗ್ತಿದೆ.

ಅಘ್ಘಾನ್​ ದೇಶದ ಸದ್ಯದ ಪರಿಸ್ಥಿತಿ ಹೇಗಿದೆ?
ಅಮೆರಿಕ ಸೇನೆ ಇದ್ದಾಗಲೇ ಅಫ್ಘಾನ್​ನಲ್ಲಿ ತಾಲಿಬಾನ್ ಅಟ್ಟಹಾಸ ನಿಯಂತ್ರಣಕ್ಕೆ ಬಂದಿರ್ಲಿಲ್ಲ. ಇನ್ನು ಅಮೆರಿಕ ತನ್ನ ಸೇನೆ ಹಿಂದಕ್ಕೆ ಕರೆಸಿಕೊಂಡ್ಮೇಲೆ ಅಫ್ಘಾನ್ ಪರಿಸ್ಥಿತಿ ಹೇಗಿರಬೇಡ ಊಹಿಸಿ? ಅಘ್ಗಾನಲ್ಲಿ ಸದ್ಯ ನೆಮ್ಮದಿ, ಶಾಂತಿ ಅಫ್ಘಾನಿಸ್ತಾನದ ಜನರಿಗೆ ಮರೆತು ಹೋಗಿದೆ. ಆರ್ಥಿಕ ಸ್ಥಿತಿ ಕೂಡ ಹದಗೆಟ್ಟು ಹೋಗಿದೆ. ಹೊಟ್ಟೆಗೆ ಅನ್ನವಿಲ್ಲದೆ ಜನರು ನರಳುತ್ತಿದ್ದಾರೆ. ಇವೆಲ್ಲದರ ನಡುವೆ ಅಘ್ಘಾನ್ ನಲ್ಲಿ ತಾಲಿಬಾನ್ ಗಳು ನೆತ್ತರು ಹರಿಸಲು ಮತ್ತಷ್ಟು ಬಲಗೊಳ್ಳುತ್ತಿದ್ದಾರೆ. ಜನರ ನೆಮ್ಮದಿ ಹಾರಿ ಹೋಗಿದೆ.

ಅಮೆರಿಕದ ವಾಪಸ್ಸಾತಿಯಿಂದ ಅಘ್ಘಾನ್ ಪರಿಸ್ಥಿತಿ ಬಾಣಲೆಯಿಂದ ಬೆಂಕಿ ಬಿದ್ದದ್ದಂತ್ತಾಗಿದೆ. ಅಮೆರಿಕದ ರಿಟರ್ನ್ ಹೋಗಿದ್ದರಿಂದ ಒಂಟಿಯಾಗಿದ್ದ ಅಘ್ಘಾನ್​ಗೆ ಜಂಟಿಯಾಗಿ ದುಷ್ಕೃತ್ಯ ಎಸಗಲು ಪಾಕ್ ಭಯೋತ್ಪಾದಕರು ರೆಡಿಯಾಗಿದ್ದಾರೆ. ಇಬ್ಬರು ಕಳ್ಳರು, ಸುಳ್ಳರು, ಮೋಸಗಾರರು, ಒಟ್ಟಾಗಿ ಕೈ ಜೋಡಿಸಿದ್ದು, ಜಾಗತಿಕ ಆತಂತಕ್ಕೂ ಕಾರಣವಾಗಿದೆ. ಅಘ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಪ್ರತಿರೋಧದ ಅಲೆಗಳು ಎದ್ದಿದೆ. ಸರ್ಕಾರ ಸುಮ್ಮನಿದ್ರೂ, ಯೋಧರು ಅಸಹಾಯಕರಾಗಿದ್ರು ನಾರಿಯರು ಬಂದೂಕು ಹಿಡಿದು ಹೊರಟಿದ್ದಾರೆ. ಆದ್ರೆ ತಾಲಿಬಾನಿಗಳ ಜೊತೆ ಪಾಕಿಸ್ತಾನದ ಉಗ್ರರು ಕೈ ಜೋಡಿಸಲು ಹೊರಟಿರೋದು ಮಾತ್ರ ಆತಂಕಕಾರಿ ಬೆಳವಣಿಗೆ.

blank

The post ತಾಲಿಬಾನ್ ಜೊತೆ ಕೈಜೋಡಿಸಿದ​ ಪಾಕ್ ಉಗ್ರರು- ಅಫ್ಘಾನ್​ನಲ್ಲಿ ಮಹಿಳೆಯರು ಗನ್ ಕೈಗೆತ್ತಿಕೊಂಡಿದ್ದೇಕೆ? appeared first on News First Kannada.

Source: newsfirstlive.com

Source link