ಮೇಕೆದಾಟು ಜಟಾಪಟಿ; ತ.ನಾಡು ಸರ್ಕಾರಕ್ಕೆ ನಮ್ಮ ಬೆಂಬಲ ಎಂದ ಅಣ್ಣಾಮಲೈ

ಮೇಕೆದಾಟು ಜಟಾಪಟಿ; ತ.ನಾಡು ಸರ್ಕಾರಕ್ಕೆ ನಮ್ಮ ಬೆಂಬಲ ಎಂದ ಅಣ್ಣಾಮಲೈ

ತಿರುಚಿ: ತಮಿಳುನಾಡಿ ಬಿಜೆಪಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ತಮಿಳುನಾಡು ಬಿಜೆಪಿ, ತಮಿಳುನಾಡು ಸರ್ಕಾರದ ಜೊತೆಗೆ ನಿಲ್ಲುತ್ತದೆ ಎಂದಿದ್ದಾರೆ. ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ನಾವು ಸಂಪೂರ್ಣ ಸ್ಪಷ್ಟವಾಗಿದ್ದೇವೆ.. ಇದರಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಬಿಜೆಪಿಗೆ ಅಣ್ಣಾಮಲೈ ಸಾರಥ್ಯ; ರಾಜ್ಯಾಧ್ಯಕ್ಷರಾಗಿ ನೇಮಕ

ಅಲ್ಲದೇ ಕರ್ನಾಟಕದಲ್ಲಿ ಬಿಜೆಪಿ ಪಕ್ಷವೇ ಆಡಳಿತದಲ್ಲಿದ್ದರೂ ಸಹ ತಮಿಳುನಾಡು ಬಿಜೆಪಿ ತಮಿಳುನಾಡು, ಜನರು, ರೈತರ ಹಿತರಕ್ಷಣೆಯ ಪರವಾಗಿ ನಿಲ್ಲುತ್ತದೆ.. ಈ ವಿಚಾರದಲ್ಲಿ ನಾವು ಸ್ಪಷ್ಟ ನಿಲುವು ಹೊಂದಿದ್ದೇವೆ.. ತಮಿಳುನಾಡು ರೈತರು ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರಿನಲ್ಲಿ ತನ್ನ ಪಾಲನ್ನು ಪಡೆಯಲೇಬೇಕೆಂದಿದ್ದಾರೆ.

ಇದನ್ನೂ ಓದಿ: ಡಿಎಂಕೆ ಆಗಲಿ, ಅಣ್ಣಾ ಡಿಎಂಕೆ ಆಗಲಿ.. ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರ- ಡಿಕೆಎಸ್

ಮುಂದುವರೆದು ಇತ್ತೀಚೆಗೆ ಮುಖ್ಯಮಂತ್ರಿ ಸ್ಟಾಲಿನ್ ನಡೆಸಿದ ಸರ್ಚಪಕ್ಷ ಸಭೆಯಲ್ಲಿ ಪಕ್ಷದ ಇಬ್ಬರು ಹಿರಿಯ ನಾಯಕರು ಭಾಗವಹಿಸಿದ್ದರು. ಹಾಗೂ ಪಕ್ಷ ಮೇಕೆದಾಟು ವಿಚಾರದಲ್ಲಿ ಸರ್ಕಾರದ ಪರವಾಗಿರಲಿದೆ ಎಂದಿದ್ದಾರೆ.

The post ಮೇಕೆದಾಟು ಜಟಾಪಟಿ; ತ.ನಾಡು ಸರ್ಕಾರಕ್ಕೆ ನಮ್ಮ ಬೆಂಬಲ ಎಂದ ಅಣ್ಣಾಮಲೈ appeared first on News First Kannada.

Source: newsfirstlive.com

Source link