ಶೋಕಿಗಾಗಿ ಬೈಕ್ ಕದಿಯುತ್ತಿದ್ದ ಕುಖ್ಯಾತ ಕಳ್ಳರು ಅರೆಸ್ಟ್​.. 16 ಬೈಕ್​ಗಳು ಜಪ್ತಿ

ಶೋಕಿಗಾಗಿ ಬೈಕ್ ಕದಿಯುತ್ತಿದ್ದ ಕುಖ್ಯಾತ ಕಳ್ಳರು ಅರೆಸ್ಟ್​.. 16 ಬೈಕ್​ಗಳು ಜಪ್ತಿ

ಬೆಂಗಳೂರು: ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ತಲೆ ನೋವಾಗಿದ್ದ ಕುಖ್ಯಾತ ಬೈಕ್​ ಕಳ್ಳರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಿಂದೂಪುರದ ಪ್ರವೀಣ್ ಹಾಗೂ ಸೈಯದ್ ನಿಜಮ್ ಮತ್ತು ದೊಡ್ಡಬಳ್ಳಾಪುರದ ಮಹಮ್ಮದ್ ಪಾಷ ಬಂಧಿತ ಆರೋಪಿಗಳು. ಆರೋಪಿಗಳು ನಕಲಿ ಕೀ ಮತ್ತು ಹ್ಯಾಂಡಲ್ ಮುರಿದು ದೊಡ್ಡಬಳ್ಳಾಪುರದ ಸುತ್ತಮುತ್ತ ಬೈಕ್ ಕಳ್ಳತನ ಮಾಡುತ್ತಿದ್ದರು.

ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಗಳ ತನಿಖೆಯನ್ನು ಡಿವೈಎಸ್​​​ಪಿ ರಂಗಪ್ಪ,  ಸಿಪಿಐ ನವೀನ್ ಕುಮಾರ್ ಎಂ.ಬಿ ಮತ್ತು ಪಿಎಸ್ ಐ ಗೋವಿಂದ್ ನೇತೃತ್ವದಲ್ಲಿ ನಡೆಸಲಾಗಿತ್ತು. ಸದ್ಯ ಬಂಧಿತ ಮೂವರಿಂದ 16 ಬೈಕ್ ಗಳನ್ನು ಜಪ್ತಿ‌ ಮಾಡಲಾಗಿದೆ.

ಮೂವರು ಆರೋಪಿಗಳು ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, ಅಪರಾಧ ಹಿನ್ನಲೆ ಜೈಲಿಗೆ ಹೋದಾಗ ಮೂವರ ನಡುವೆ ಸ್ನೇಹವಾಗಿತ್ತು. ಜೈಲಿನಿಂದ ಹೊರ ಬಂದ ನಂತರ ಬೈಕ್ ಕಳ್ಳತನದಲ್ಲಿ ಆರೋಪಿಗಳು ತೊಡಗಿದ್ದರು. ಬೆಂಗಳೂರು ನಗರದ ಯಶವಂತಪುರ ವಿವಿಧ ಪ್ರದೇಶಗಳು, ದೊಡ್ಡಬಳ್ಳಾಪುರದ ವಿವಿಧ  ರಸ್ತೆಗಳು, ಮನೆಯ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಟಾರ್ಗೆಟ್​ ಮಾಡುತ್ತಿದ್ದ ಖದೀಮರು, ನಕಲಿ ಕೀ ಬಳಸಿ ಮತ್ತು ಹ್ಯಾಂಡಲ್ ಮುರಿದು ಬೈಕ್​​ಗಳನ್ನ ಕದ್ದೊಯ್ಯುತ್ತಿದ್ದರು. ಕದ್ದ ಬೈಕ್ ಗಳನ್ನ ಹಿಂದೂಪುರ ಸೇರಿದಂತೆ ಹಲವಾರು ಕಡೆ ಮಾರಾಟ ಮಾಡಿ ಬಂದ ಹಣದಿಂದ ಶೋಕಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

The post ಶೋಕಿಗಾಗಿ ಬೈಕ್ ಕದಿಯುತ್ತಿದ್ದ ಕುಖ್ಯಾತ ಕಳ್ಳರು ಅರೆಸ್ಟ್​.. 16 ಬೈಕ್​ಗಳು ಜಪ್ತಿ appeared first on News First Kannada.

Source: newsfirstlive.com

Source link