ರಾಜ್ಯದಲ್ಲಿಂದು 1,977 ಪಾಸಿಟಿವ್ ಕೇಸ್​- 3,188 ಸೋಂಕಿತರು ಡಿಸ್ಚಾರ್ಜ್​

ರಾಜ್ಯದಲ್ಲಿಂದು 1,977 ಪಾಸಿಟಿವ್ ಕೇಸ್​- 3,188 ಸೋಂಕಿತರು ಡಿಸ್ಚಾರ್ಜ್​

ಬೆಂಗಳೂರು: ರಾಜ್ಯಾದ್ಯಂತ ಇಂದು 31,859 ಱಪಿಡ್ ಆ್ಯಂಟಿಜೆನ್ ಟೆಸ್ಟ್ ಹಾಗೂ 1,06,415 ಆರ್​​ಟಿಪಿಸಿಆರ್ ಟೆಸ್ಟ್​ಗಳೂ ಸೇರಿದಂತೆ ಒಟ್ಟು 1,38,274 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಇಂದು ರಾಜ್ಯದಲ್ಲಿ 1,977 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 28,78,564ಕ್ಕೆ ಏರಿಕೆಯಾಗಿದೆ.

ಇಂದು 3,188 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಇಲ್ಲಿವರೆಗೆ ಒಟ್ಟು 28,10,121 ಮಂದಿ ಕೊರೊನಾದಿಂದ ಮುಕ್ತರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 48 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ಈವರೆಗೆ ಒಟ್ಟು 36,037 ಮಂದಿ ಸೋಂಕಿಗೆ ಬಲಿಯಾದಂತಾಗಿದೆ. ರಾಜ್ಯದಲ್ಲಿ ಸದ್ಯ 32,383 ಆ್ಯಕ್ಟಿವ್ ಕೇಸ್​ಗಳಿವೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತಿವೆ.

ಬೆಂಗಳೂರು ನಗರದಲ್ಲಿ 462 ಮಂದಿ ಸೋಂಕಿಗೊಳಗಾಗಿದ್ರೆ ದಕ್ಷಿಣ ಕನ್ನಡದಲ್ಲಿ 224, ಚಿಕ್ಕಮಗಳೂರು 109, ಹಾಸನ 158, ಮೈಸೂರು 197, ಉಡುಪಿ ಜಿಲ್ಲೆಯಲ್ಲಿ 110 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ.

blank

The post ರಾಜ್ಯದಲ್ಲಿಂದು 1,977 ಪಾಸಿಟಿವ್ ಕೇಸ್​- 3,188 ಸೋಂಕಿತರು ಡಿಸ್ಚಾರ್ಜ್​ appeared first on News First Kannada.

Source: newsfirstlive.com

Source link