ಕ್ಯಾಬಿನೆಟ್ ಪುನಾರಚನೆ ಬೆನ್ನಲ್ಲೇ ರಾಷ್ಟ್ರಪತಿ ಭೇಟಿಯಾದ ಮೋದಿ; ಪ್ರಮುಖ ವಿಚಾರಗಳ ಚರ್ಚೆ

ಕ್ಯಾಬಿನೆಟ್ ಪುನಾರಚನೆ ಬೆನ್ನಲ್ಲೇ ರಾಷ್ಟ್ರಪತಿ ಭೇಟಿಯಾದ ಮೋದಿ; ಪ್ರಮುಖ ವಿಚಾರಗಳ ಚರ್ಚೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ರಾಮ್​​ನಾಥ್ ಕೋವಿಡ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ಕುರಿತು ಸ್ವತಃ ರಾಷ್ಟ್ರಪತಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿ ರಾಮ್​​​ನಾಥ್​​ ಕೋವಿಂದ್ ಅವರೊಂದಿಗೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ವಾರಾಣಸಿಗೆ ಭೇಟಿ ನೀಡಿ, ಸುಮಾರು 1,500 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಶಂಕು ಸ್ಥಾಪನೆ ನೆರವೇರಿಸಿದ್ದರು.

ಇದನ್ನೂ ಓದಿ: ವಾರಣಸಿಯಲ್ಲಿ ತಲೆ ಎತ್ತಿ ನಿಂತ ಶಿವಲಿಂಗ ಆಕಾರದ ‘ರುದ್ರಾಕ್ಷ’.. ಇದರ ವಿಶೇಷತೆಗಳೇನು ಗೊತ್ತಾ?

The post ಕ್ಯಾಬಿನೆಟ್ ಪುನಾರಚನೆ ಬೆನ್ನಲ್ಲೇ ರಾಷ್ಟ್ರಪತಿ ಭೇಟಿಯಾದ ಮೋದಿ; ಪ್ರಮುಖ ವಿಚಾರಗಳ ಚರ್ಚೆ appeared first on News First Kannada.

Source: newsfirstlive.com

Source link