ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಬಂದ ಸುಚಿತ್ರ ಮತ್ತು ಯಶವಂತ.. ಯಾರಿವರು..?

ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಬಂದ ಸುಚಿತ್ರ ಮತ್ತು ಯಶವಂತ.. ಯಾರಿವರು..?

ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಮತ್ತೆ ಎರಡು ಸಿಂಹಗಳ ಆಗಮನವಾಗಿದೆ.. ಈ ಮೂಲಕ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ಬಹು ದಿನಗಳಿಂದಲೂ ಸಿಂಹಗಳನ್ನು ತರುವ ಮಹತ್ವಾಕಾಂಕ್ಷಿ ಕಾರ್ಯ ಕೊನೆಗೂ ಕೈಗೂಡಿದೆ.

13-07-2021ರ ರಾತ್ರಿ ಎರಡು ಸಿಂಹಗಳನ್ನು ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ತರಲಾಗಿದೆ. ಏಳು ವರ್ಷದ ಯಶವಂತ ಹಾಗು ಸುಚಿತ್ರ ಜೋಡಿ ಸಿಂಹಗಳು ಎಂಟ್ರಿ ಪಡೆದಿದೆ. ಇವೆರಡು ಸಿಂಹಗಳ ಹೊಂದಾಣಿಕೆಯನ್ನು ನೋಡಿಕೊಂಡು ನಂತರ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಮಾಡಿಕೊಡುವುದಾಗಿ ತ್ಯಾವರೆಕೊಪ್ಪ ಹುಲಿ ಸಿಂಹಧಾಮದ ಡಿಸಿಎಫ್ ಮುಕುಂದ್ ಚಂದ್ ತಿಳಿಸಿದ್ದಾರೆ. ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಈಗಿರುವ ಆರ್ಯಗೆ, ಹನ್ನೊಂದು ವರ್ಷ ಕಳೆದಿದ್ದು, ವಂಶಾಭಿವೃದ್ಧಿ ಶಕ್ತಿ ಕಳೆದುಕೊಂಡಂತಿದೆ. ಸಫಾರಿಯಲ್ಲಿ ಚಾಮುಂಡಿ ಹುಲಿಗೆ ಹುಟ್ಟಿದ ವಿಜಯ ದಶಮಿ ಮರಿಯೇ ಕೊನೆಯ ವಂಶಜ ಎಂಬಂತಾಗಿತ್ತು.

blank

ಕಳೆದ 13 ವರ್ಷಗಳಿಂದ ಸಫಾರಿಯಲ್ಲಿ ಸಿಂಹಗಳಿಗೆ ಸಂತಾನ ಭಾಗ್ಯವೇ ಇಲ್ಲದಂತಾಗಿದೆ. ಈಗ ಯಶವಂತ ಸುಚಿತ್ರ ಜೋಡಿಯಿಂದ ಮತ್ತೆ ಸಫಾರಿಯಲ್ಲಿ ವಂಶ ಬೆಳಗುವ ನಿರೀಕ್ಷೆಯಲ್ಲಿ ಸಿಂಹಧಾಮದ ಅಧಿಕಾರಿಗಳಿದ್ದಾರೆ, ಯಶವಂತ ಮತ್ತು ಸುಚಿತ್ರ ಆಗಮನದಿಂದ ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಹುಲಿಗಳ ಸಂಖ್ಯೆ 6ಕ್ಕೆ ಏರಿದೆ.

The post ತ್ಯಾವರೆಕೊಪ್ಪ ಹುಲಿ-ಸಿಂಹಧಾಮಕ್ಕೆ ಬಂದ ಸುಚಿತ್ರ ಮತ್ತು ಯಶವಂತ.. ಯಾರಿವರು..? appeared first on News First Kannada.

Source: newsfirstlive.com

Source link