ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ; ದೆಹಲಿಯಲ್ಲಿ ಡ್ರೋಣ್, ಪ್ಯಾರಾ ಗ್ಲೈಡಿಂಗ್​ಗೆ ನಿಷೇಧ

ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ; ದೆಹಲಿಯಲ್ಲಿ ಡ್ರೋಣ್, ಪ್ಯಾರಾ ಗ್ಲೈಡಿಂಗ್​ಗೆ ನಿಷೇಧ

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಇನ್ನೊಂದು ತಿಂಗಳಿರುವಂತೆಯೇ ದೇಶದ ರಾಜಧಾನಿ ದೆಹಲಿಯಲ್ಲಿ ಉಗ್ರರು ದಾಳಿ ನಡೆಸುವ ಶಂಕೆಯಿಂದಾಗಿ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಕ್ರಿಮಿನಲ್, ಸಮಾಜ ವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳ ಸಂಭಾವ್ಯ ಬೆದರಿಕೆ ಹಿನ್ನೆಲೆ ದೆಹಲಿ ಪೊಲೀಸ್ ಕೆಲವು ಚಟುವಟಿಕೆಗಳಿಗೆ ನಿರ್ಬಂಧ ಹೇರಿದೆ.

ರಾಜಧಾನಿಯಲ್ಲಿ ಒಂದು ತಿಂಗಳವರೆಗೆ ಪ್ಯಾರಾ ಗ್ಲೈಡಿಂಗ್, ಹ್ಯಾಂಗ್ ಗ್ಲೈಡಿಂಗ್, ಯುಎವಿ, ಯುಎಎಸ್​, ಮೈಕ್ರೋಲೈಟ್ ಏರ್​ಕ್ರಾಫ್ಟ್​, ಡ್ರೋಣ್, ಹಾಟ್ ಏರ್ ಬಲೂನ್, ಸಣ್ಣಗಾತ್ರ ಏರ್​ಕ್ರಾಫ್ಟ್​ ಕ್ವಾಡ್ ಕಾಪ್ಟರ್​​ ಮತ್ತು ಪ್ಯಾರಾ ಜಂಪಿಂಗ್​ನ್ನು ನಿಷೇಧಿಸಲಾಗಿದೆ.
ಜುಲೈ 16 ರಿಂದ ಆಗಸ್ಟ್ 16 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ಬಾಲಾಜಿ ಶ್ರೀವಾಸ್ತವ್ ಪ್ರಕಟಣೆ ಹೊರಡಿಸಿದ್ದಾರೆ.

The post ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ; ದೆಹಲಿಯಲ್ಲಿ ಡ್ರೋಣ್, ಪ್ಯಾರಾ ಗ್ಲೈಡಿಂಗ್​ಗೆ ನಿಷೇಧ appeared first on News First Kannada.

Source: newsfirstlive.com

Source link