ಮಂಗಳೂರಿನಲ್ಲಿ ಯೂನಿಸೆಕ್ಸ್ ಸೆಲೂನ್‍ಗೆ ನುಗ್ಗಿ ಮಹಿಳೆಗೆ ಕಿರುಕುಳ

– ಸಿಸಿಟಿವಿ ದೃಶ್ಯದಿಂದ ಕೃತ್ಯ ಬಯಲು

ಮಂಗಳೂರು: ನಗರದ ಯೂನಿಸೆಕ್ಸ್ ಸೆಲೂನ್ ಒಂದಕ್ಕೆ ನುಗ್ಗಿದ ವ್ಯಕ್ತಿಯೋರ್ವ ಮಹಿಳೆಯ ಮೈಮೇಲೆ ಕೈ ಹಾಕಿ ಕಿರುಕುಳ ನೀಡಿ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ.

ಜುಲೈ 1 ರಂದು ಮಂಗಳೂರಿನ ಕದ್ರಿಯಲ್ಲಿರುವ ಬ್ಲಿಸ್ ಸಿಗ್ನೇಚರ್ ಯುನಿಸೆಕ್ಸ್ ಸೆಲೂನ್ ಗೆ ಗ್ರಾಹಕನಾಗಿ ಬಂದಿದ್ದ ಅತ್ತಾವರದ ನಿವಾಸಿ ಅಬ್ದುಲ್ ದಾವೂದ್ ಸೆಲೂನ್ ಒಳಗೆ ನುಗ್ಗಿ ಮಹಿಳೆಯ ಮೈಗೆ ಕೈ ಹಾಕಿ ಕಿರುಕುಳ ನೀಡಿ ಹಲ್ಲೆ ನಡೆಸಿದ್ದನು. ಬಳಿಕ 14 ಸಾವಿರ ರೂಪಾಯಿ ಹಣವನ್ನೂ ದರೋಡೆ ನಡೆಸಿ ಪರಾರಿಯಾಗಿದ್ದನು. ಇದನ್ನೂ ಓದಿ: ಎಸಿಬಿ ದಾಳಿ – 15 ಲಕ್ಷ ನಗದು, 750 ಗ್ರಾಂ ಚಿನ್ನ, ಅಪಾರ ಆಸ್ತಿ ಪತ್ರ ಪತ್ತೆ

ಆರೋಪಿ ದಾವೂದ್ ಮಹಿಳೆಯ ಕಿರುಕುಳ ನೀಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

The post ಮಂಗಳೂರಿನಲ್ಲಿ ಯೂನಿಸೆಕ್ಸ್ ಸೆಲೂನ್‍ಗೆ ನುಗ್ಗಿ ಮಹಿಳೆಗೆ ಕಿರುಕುಳ appeared first on Public TV.

Source: publictv.in

Source link