ಬ್ರೆಜಿಲ್ ಅಧ್ಯಕ್ಷನಿಗೆ ವಿಚಿತ್ರ ಕಾಯಿಲೆ; ಎರಡು ವಾರಗಳಿಂದ ಬಿಕ್ಕಳಿಕೆ ನಿಲ್ಲದೇ ಆಸ್ಪತ್ರೆಗೆ ದಾಖಲು

ಬ್ರೆಜಿಲ್ ಅಧ್ಯಕ್ಷನಿಗೆ ವಿಚಿತ್ರ ಕಾಯಿಲೆ; ಎರಡು ವಾರಗಳಿಂದ ಬಿಕ್ಕಳಿಕೆ ನಿಲ್ಲದೇ ಆಸ್ಪತ್ರೆಗೆ ದಾಖಲು

ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸೊನಾರೊ ವಿಚಿತ್ರ ಕಾಯಿಲೆಗೆ ಗುರಿಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 66 ವರ್ಷದ ಬೊಲ್ಸೊನಾರೊಗೆ ಜುಲೈ 3 ರಂದು ಹಲ್ಲು ಜೋಡಣೆಯ ಚಿಕಿತ್ಸೆ ನೀಡಲಾಗಿದ್ದು ಅಂದಿನಿಂದಲೂ ನಿರಂತರ ಬಿಕ್ಕಳಿಕೆ ಪ್ರಾರಂಭವಾಗಿದೆಯಂತೆ.

ಬೊಲ್ಸೊನಾರೊ ಅವರನ್ನ ಮೊದಲಿಗೆ ಬರ್ಸಿಲಿಯಾದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ ಅವರನ್ನ ಬ್ರೆಜಿಲಿಯನ್ ಏರ್​ಫೋರ್ಸ್ ವಿಮಾನದ ಮೂಲಕ ವಿಲ್ವ ನೊವ ಸ್ಟಾರ್ ಪ್ರೈವೇಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಬೊಲ್ಸೊನಾರೊ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಹಲವು ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದೆ.

2018 ರಲ್ಲಿ ಬೊಲ್ಸೊನಾರೊ ಅವರ ಹೊಟ್ಟೆಗೆ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿದಿದ್ದರಂತೆ..ಆನಂತರ ಹಲವು ಬಾರಿ ಸರ್ಜರಿಗಳನ್ನ ಮಾಡಲಾಗಿದ್ದು ನಿರಂತರ ಬಿಕ್ಕಳಿಕೆಗೆ ಇದೂ ಕಾರಣ ಎನ್ನಲಾಗಿದೆ. ಇದು ಕನ್ಫರ್ಮ್ ಆದಲ್ಲಿ ಬೊಲ್ಸೊನಾರೊಗೆ ಮತ್ತೊಂದು ಸರ್ಜರಿ ಮಾಡಬೇಕಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

The post ಬ್ರೆಜಿಲ್ ಅಧ್ಯಕ್ಷನಿಗೆ ವಿಚಿತ್ರ ಕಾಯಿಲೆ; ಎರಡು ವಾರಗಳಿಂದ ಬಿಕ್ಕಳಿಕೆ ನಿಲ್ಲದೇ ಆಸ್ಪತ್ರೆಗೆ ದಾಖಲು appeared first on News First Kannada.

Source: newsfirstlive.com

Source link