ಕಣ್ಣಮುಂದೆಯೇ ನಡೆಯಿತು ಅಚ್ಚರಿ; 9ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಹಿಳೆ

ಕಣ್ಣಮುಂದೆಯೇ ನಡೆಯಿತು ಅಚ್ಚರಿ; 9ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಹಿಳೆ

ಲಕ್ನೋ: ಬಹುಮಹಡಿ ಕಟ್ಟದ 9ನೇ ಅಂತಸ್ತಿನಿಂದ ಬಾಲ್ಕನಿಯಿಂದ ಬಿದ್ದ ಮಹಿಳೆಯೊಬ್ಬರು ಅದೃಷ್ಟವಶಾತ್​ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಬಾದ್​ ನಗರದಲ್ಲಿ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

ವಿಡಿಯೋದಲ್ಲಿ ಮಹಿಳೆ ಬಾಲ್ಕನಿಯಲ್ಲಿದ್ದ ವ್ಯಕ್ತಿಯ ಕೈ ಹಿಡಿದುಕೊಂಡು ನೇತಾಡುವುದನ್ನು ಕಾಣಬಹುದಾಗಿದ್ದು, ವ್ಯಕ್ತಿ ಆಕೆಯನ್ನು ರಕ್ಷಣೆ ಮಾಡುವ ಪ್ರಯತ್ನದಲ್ಲಿರುವಾಗಲೇ ಕೈಜಾರಿ ಆಕೆ ನೆಲಕ್ಕೆ ಉರುಳಿಸುವುದನ್ನು ನೋಡಬಹುದಾಗಿದೆ. ಈ ಘಟನೆ ಮಂಗಳವಾರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂದಹಾಗೇ, ಮಹಿಳೆ ತನ್ನೊಂದಿಗೆ ಇದ್ದ ವ್ಯಕ್ತಿಯೊಂದಿಗೆ ಜಗಳವಾಡಿದ್ದು, ಈ ನಡುವೆ ಕೋಪದಿಂದ ಬಾಲ್ಕನಿಯಿಂದ ಹಾರಿದ್ದಾಳೆ ಎನ್ನಲಾಗಿದೆ. ಮಹಿಳೆಯ ನಡೆಯಿಂದ ಶಾಕ್​​ಗೆ ಒಳಗಾದ ಆತ ಆಕೆಯನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದು, ಕೆಲ ಕ್ಷಣಗಳ ಕಾಲ ಆಕೆಯ ಕೈ ಹಿಡಿದು ಮೇಲಕ್ಕೆ ಎಳೆದುಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ.

ಇತ್ತ ಮಹಿಳೆ ನೆಲಕ್ಕೆ ಉರುಳುತ್ತಿದ್ದಂತೆ ಅಪಾರ್ಟ್​​ಮೆಂಟ್​ ನಿವಾಸಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಆಕೆಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ ಘಟನೆ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಅಲ್ಲದೇ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಅಂತಾ ತಿಳಿಸಿದ್ದಾರೆ. ಇತ್ತ ಘಟನೆಯ ವಿಡಿಯೋ ಮಾಡಿದ್ದ ವ್ಯಕ್ತಿಯನ್ನು ಕೂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ.

The post ಕಣ್ಣಮುಂದೆಯೇ ನಡೆಯಿತು ಅಚ್ಚರಿ; 9ನೇ ಮಹಡಿಯಿಂದ ಬಿದ್ದರೂ ಬದುಕುಳಿದ ಮಹಿಳೆ appeared first on News First Kannada.

Source: newsfirstlive.com

Source link