ಲಾಕ್​ಡೌನ್​ನಿಂದ ನೆಲಕಚ್ಚಿದ ಹೋಟೆಲ್ ಉದ್ಯಮ; ಹೊಸ ಮಾರ್ಗ ಕಂಡುಕೊಂಡ ಮಾಲೀಕರು

ಲಾಕ್​ಡೌನ್​ನಿಂದ ನೆಲಕಚ್ಚಿದ ಹೋಟೆಲ್ ಉದ್ಯಮ; ಹೊಸ ಮಾರ್ಗ ಕಂಡುಕೊಂಡ ಮಾಲೀಕರು

ಬೆಂಗಳೂರು: ಲಾಕ್‌ಡೌನ್‌.. ಹೋಟೆಲ್‌ ಉದ್ಯಮ ಹಳಿ ತಪ್ಪಿತ್ತು. ರುಚಿಕರ ಊಟ ಮಾಡೋಕೆ ಜನ ಬಾರದೇ ಇದ್ದಿದ್ದಿರಿಂದ ಲಾಭವಿಲ್ಲದೇ ಅದೆಷ್ಟೋ ಮಾಲೀಕರ ಜೀವನ ಸಪ್ಪೆಯಾಗಿತ್ತು. ನೆಲಕ್ಕಚ್ಚಿರೋ ಹೋಟೆಲ್‌ ಉದ್ಯಮ ಮೇಲೆತ್ತೋದೆ ಮಾಲೀಕರಿಗೆ ಸವಾಲಾಗಿದೆ. ಮುಂದೇನು ಮಾಡೋದು ಅಂತಾ ಕಂಗಾಲಾಗಿದ್ದ ಕೆಲವರು ಈಗ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಮನೆಲ್ಯಾರಪ್ಪ ಅಡುಗೆ ಮಾಡ್ತಾರೆ, ಬಾ ಮಗಾ ಪಾರ್ಟಿ ಮಾಡೋಣ, ಇವತ್ತು ಯಾಕೋ ಹೊರಗಡೆ ತಿನ್ನಬೇಕು ಅಂತಾ ಅನ್ನಿಸ್ತಿದೆ, ಹೀಗೆ ನಾನಾ ಕಾರಣ ಹೇಳಿನೋ ಅಥವಾ ಹೋಟೆಲ್‌ ಊಟ ನಂಬಿಕೊಂಡು ಬೆಂಗಳೂರಲ್ಲಿ ವಾಸ ಮಾಡೋರೇ ಜಾಸ್ತಿ. ಆದ್ರೆ, ಇಂತಹ ಗ್ರಾಹಕರನ್ನು ನಂಬಿಯೇ ಹೊಟ್ಟೆಕಟ್ಟಿಕೊಳ್ಳುತ್ತಿದ್ದ ಹೋಟೆಲ್‌ ಉದ್ಯಮ ಈಗ ನೆಲಕ್ಕಚ್ಚಿದ್ದು, ಇದಕ್ಕೆಲ್ಲಾ ಕೊರೊನಾ ಕಾರಣ.

blank

ಹೋಟೆಲ್‌ ಉದ್ಯಮ ನಂಬಿಕೊಂಡು ಬದುಕುತ್ತಿರೋ ಅದೆಷ್ಟೋ ಮಾಲೀಕರು ಈಗ ಹೋಟೆಲ್‌ ಮುಚ್ಚೋ ಪರಿಸ್ಥಿತಿಗೆ ಬಂದಿದ್ದಾರೆ. ಇದೇ ಕಾರಣಕ್ಕೆ ಈಗ ಹೋಟೆಲ್‌ಗಳೆಲ್ಲಾ ಆಸ್ಪತ್ರೆಗಳಾಗಿ ಕನ್ವರ್ಟ್‌ ಆಗ್ತಿದ್ದಾವೆ. ಇಲ್ಲಿ ನಡೆಯುತ್ತಿರೋ ಕೆಲಸವೂ ಇದೇ ಕಾರಣಕ್ಕೆ. ಈಗಾಗಲೇ 10ಕ್ಕೂ ಹೆಚ್ಚು ಹೋಟೆಲ್‌ಗಳು ಆಸ್ಪತ್ರೆಗಳಾಗುತ್ತಿವೆ. ಅದರಲ್ಲಿ ಪ್ರಮುಖ ಹೋಟೆಲ್‌ಗಳೆಂದರೆ..

ಶೇಷಾದ್ರಿಪುರಂ ಸರ್ಕಲ್‌ನಲ್ಲಿದ್ದ ಟ್ರಿನಿಟಿ ಹೋಟೆಲ್‌ ಈಗ ಟ್ರಿನಿಟಿ ಆಸ್ಪತ್ರೆಯಾಗಿ ಬದಲಾಗ್ತಿದೆ‌. ಇನ್‌ಫ್ಯಾಂಟ್ರಿ ರಸ್ತೆಯಲ್ಲಿದ್ದ ಮಿಂಟ್‌ ಮಸಾಲಾ ಹೋಟೆಲ್‌ ಕೂಡಾ ಆಸ್ಪತ್ರೆಯ ರೂಪ ಪಡೆಯುತ್ತಿದೆ. ಇದನ್ನು ಸ್ಪರ್ಶ್‌ ಆಸ್ಪತ್ರೆಯ ಆಡಳಿತ ಮಂಡಳಿ ಹೋಟೆಲ್‌ ಖರೀದಿಸಿ ನವೀಕರಣ ಮಾಡ್ತಿದ್ದಾರೆ. ಮಲ್ಲೇಶ್ವರಂನ ಮಂತ್ರಿ ಮಾಲ್‌ ಬಳಿ ಇದ್ದ ಎಂಟಿಆರ್‌ ಹೋಟೆಲ್‌ ಪಕ್ಕದ ವಸತಿ ಗೃಹ ಆಸ್ಪತ್ರೆಯಾಗಿ ಬದಲಾಗ್ತಿದೆ.

blank

ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ, ಸರ್ಜಾಪುರ ಬಳಿಯ ಸಣ್ಣ ಹೋಟೆಲ್‌ಗಳು ಬಂದ್‌ ಆಗಿವೆ. ಐಟಿ ಕಂಪನಿಗಳಿಗೆ ವರ್ಕ್ ಫ್ರಂ ಹೋಂ ಆಪ್ಷನ್‌ ಇರೋದ್ರಿಂದ ಅವುಗಳ ಪಕ್ಕದಲ್ಲಿರುವ 15-20 ಹೋಟೆಲ್‌ಗಳು ಕೂಡಾ ಕ್ಲೋಸ್‌ ಅಗಿವೆ. ಕಟ್ಟಡ ಬಾಡಿಗೆ, ತೆರಿಗೆ, ಕಾರ್ಮಿಕರಿಗೆ ವೇತನ ಕಟ್ಟಲಾಗದೆ ನಷ್ಟದಲ್ಲಿರುವ ಒಂದು ಸಾವಿರ ಹೋಟೆಲ್‌ಗಳು ಮಾರಾಟಕ್ಕಿವೆ ಅನ್ನೋದು ಮತ್ತೊಂದು ಆಘಾತಕಾರಿ ಸಂಗತಿ.

ಗ್ರಾಹಕರಿಗೆ ಹೊಟ್ಟೆತುಂಬಿಸೋ ಹೋಟೆಲ್‌ ಉದ್ಯಮದ ಮಾಲೀಕರೇ ಕೈ ಈಗ ಬರಿದಾಗಿರೋದು ಎಲ್ಲಾ ಕೊರೊನಾ ತಂದಿರೋ ಸಂಕಷ್ಟಕ್ಕೆ ಹಿಡಿದ ಕೈಗನ್ನಡಿ. ಕೇವಲ ಹೋಟೆಲ್‌ ಮಾತ್ರವಲ್ಲ, ಅಲ್ಲಿ ಕೆಲಸ ಮಾಡ್ತಿರೋ ಅದೆಷ್ಟೋ ಜನ ಕೂಡಾ ಈಗ ಉದ್ಯೋಗವಿಲ್ಲದೆ ಖಾಲಿ ಕೂರೋ ಪರಿಸ್ಥಿತಿ ಬಂದಿದೆ. ಈ ಕಷ್ಟಗಳಿಗೆಲ್ಲಾ ಅದ್ಯಾವಾಗ ಬ್ರೇಕ್‌ ಬೀಳುತ್ತೋ, ದುಡಿಯೋ ಕೈಗಳಿಗೆ ಕೆಲಸ ಸಿಕ್ಕು ನೆಮ್ಮದಿಯಾಗಿ ಜೀವನ ನಡೆಸೋದು ಯಾವಾಗ ಅನ್ನೋದು ಪ್ರಶ್ನೆ.

The post ಲಾಕ್​ಡೌನ್​ನಿಂದ ನೆಲಕಚ್ಚಿದ ಹೋಟೆಲ್ ಉದ್ಯಮ; ಹೊಸ ಮಾರ್ಗ ಕಂಡುಕೊಂಡ ಮಾಲೀಕರು appeared first on News First Kannada.

Source: newsfirstlive.com

Source link