ರಸಗೊಬ್ಬರಕ್ಕಾಗಿ ರೈತರ ನೂಕು ನುಗ್ಗಲು.. ಗೊಬ್ಬರ ವಿತರಣೆಯಲ್ಲಿ ಗೋಲ್​ಮಾಲ್ ಆರೋಪ

ರಸಗೊಬ್ಬರಕ್ಕಾಗಿ ರೈತರ ನೂಕು ನುಗ್ಗಲು.. ಗೊಬ್ಬರ ವಿತರಣೆಯಲ್ಲಿ ಗೋಲ್​ಮಾಲ್ ಆರೋಪ

ವಿಜಯನಗರ: ಇಷ್ಟ್​ ದಿನ, ಅನ್ನದಾತರಿಗೆ ಮೆಣಸಿನಕಾಯಿ ಬೀಜ ಸಿಗದೇ ಒದ್ದಾಡಿದ್ರು, ಈಗ ರಸಗೊಬ್ಬರಕ್ಕಾಗಿ ಹಾಹಾಕಾರ ಎದ್ದಿದ್ದು ಯೂರಿಯಾ ಗೊಬ್ಬರಕ್ಕಾಗಿ ರೈತರು ನೂಕು ನುಗ್ಗಲು ನಡೆಸಿರೋ ಘಟನೆ ನಡೆದಿದೆ.

ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಚಿಕ್ಕ ಕೊಳಚಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವ್ಯವಸಾಯ ಸೇವಾ ಸಹಕಾರ ಸಂಘದಿಂದ ಯೂರಿಯಾ ಗೊಬ್ಬರವನ್ನ ಮಾರಾಟ ಮಾಡ್ತಿದ್ದಾರೆ. ಆದ್ರೆ, ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದು, ರಸಗೊಬ್ಬರ ಸಿಗದೆ ಅನ್ನದಾತರು ಕಂಗಾಲಾಗಿದ್ದಾರೆ. ಗೊಬ್ಬರ ವಿತರಣೆಯಲ್ಲಿ ಗೋಲ್​ಮಾಲ್​ ಆಗಿದೆ.. ವಿತರಕರು ದುಬಾರಿ ಬೆಲೆಗೆ ಮಾರುತ್ತಿದ್ದಾರೆ ಅಂತ ರೈತರು ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ವಿತರಕರು ಗೊಬ್ಬರ ವಿತರಣೆಯನ್ನ ಸ್ಥಗಿತಗೊಳಿಸಿದ್ದಾರೆ.

The post ರಸಗೊಬ್ಬರಕ್ಕಾಗಿ ರೈತರ ನೂಕು ನುಗ್ಗಲು.. ಗೊಬ್ಬರ ವಿತರಣೆಯಲ್ಲಿ ಗೋಲ್​ಮಾಲ್ ಆರೋಪ appeared first on News First Kannada.

Source: newsfirstlive.com

Source link