ಕತ್ತಿಯವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ: ರಾಜೂಗೌಡ

ಯಾದಗಿರಿ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿಕೆ ನೀಡಿದ ಸಚಿವ ಉಮೇಶ್ ಕತ್ತಿ ಅವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಎಂದು ಸುರಪುರ ಶಾಸಕ ರಾಜೂಗೌಡ ಸ್ವಪಕ್ಷದ ಸಚಿವರಿಗೆ ಟಾಂಗ್ ನೀಡಿದ್ದಾರೆ.

ಈ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನಮ್ಮದೇ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೋಸ ಆಗಿದೆ ಎಂದು ಸ್ವಪಕ್ಷದ ಸಚಿವರಾದ ಉಮೇಶ್ ಕತ್ತಿಯವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೂಗೌಡ, ಬೆಳಗಾವಿಗೆ ಇನ್ನೂ ಏನು ಕೊಡಬೇಕು, ಅನ್ಯಾಯ ಎನ್ನುವ ಪದ ಬೆಂಗಳೂರು ಮತ್ತು ಬೆಳಗಾವಿ ಭಾಗದವರ ಬಾಯಿಯಲ್ಲಿ ಬರಬಾರದು. ಬಸವಣ್ಣನವರ ಆಶೀರ್ವಾದದಿಂದ ನಮ್ಮ ಭಾಗದಲ್ಲಿ ನಮ್ಮ ಪಕ್ಷದಿಂದ ಎಷ್ಟು ಜನ ಗೆದ್ದರು ನಮಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭ್ರಷ್ಟ ಅಧಿಕಾರಿಗಳ ಮೇಲೆ ಎಸಿಬಿ ದಾಳಿ -ಬಲೆಗೆ ಬಿದ್ದವರೆಲ್ಲ ಕೋಟಿ ಕೋಟಿ ಕುಳಗಳು

ಕಲ್ಯಾಣ ಕರ್ನಾಟಕದಂತೆ, ಕರಾವಳಿ ಮತ್ತು ಮೈಸೂರು ಭಾಗಕ್ಕೆ ಸಹ ಅನ್ಯಾಯವಾಗಿದೆ. ಆದರೆ ಬೆಳಗಾವಿಗೆ ಸಾಕಷ್ಟು ಕೊಟ್ಟಿದ್ದಾರೆ. ಇವರಿಗೆ ಮತ್ತೇನು ಬೇಕು, ಮೋದಿಯವರೇ ದಯವಿಟ್ಟು ಉಮೇಶ್ ಕತ್ತಿಯವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ ಎಂದು ಉಮೇಶ್ ಕತ್ತಿಗೆ ರಾಜೂಗೌಡ ಚಮಕ್ ನೀಡಿದ್ದಾರೆ.

The post ಕತ್ತಿಯವರನ್ನು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಮಾಡಿ: ರಾಜೂಗೌಡ appeared first on Public TV.

Source: publictv.in

Source link