ಕೈಯಲ್ಲಿದ್ದ ಮೈಕ್ ಬಿಸಾಡಿದ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್!

– ಡಿಕೆಶಿ ಮೇಲೆ ಮುನಿಸಿಕೊಂಡ್ರಾ ಪಿಟಿಪಿ?

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಶಾಸಕ ಪಿ.ಟಿ.ಪರಮೇಶ್ವರ್ ನಾಯ್ಕ್ ಮೈಕ್ ಬಿಸಾಡಿದ ಘಟನೆ ನಡೆಯಿತು.

ದಾವಣಗೆರೆಯ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿರುವ ಸಂತ ಸೇವಾಲಾಲ್ ಜನ್ಮ ಸ್ಥಳ ಭಾಯಗಾಡ್ ನಲ್ಲಿ ಬಂಜಾರ ಸಮುದಾಯದ ಜನರ ಜೊತೆ ಡಿಕೆಶಿ ಸಂವಾದ ವೇಳೆ ಘಟನೆ ಜರುಗಿದೆ.

ಬಂಜಾರ ಸಮುದಾಯದ ಸಮಸ್ಯೆಗಳನ್ನು ಸಂವಾದದ ಮೂಲಕ ಡಿ.ಕೆ.ಶಿವಕುಮಾರ್ ಆಲಿಸುತ್ತಿದ್ದರು. ಈ ವೇಳೆ ಯುವತಿ, ಬಂಜಾರ ಸಮುದಾಯದ ಮಹಿಳೆಯರ ಸಮಸ್ಯೆ ಮತ್ತು ಸಮುದಾಯದ ಜನರಿಗೆ ಮನೆ ಸಿಗದೆ ಇರೋ ಬಗ್ಗೆ ಪ್ರಸ್ತಾಪಿಸಿದ್ದರು. ಶಾಸಕ ಪಿಟಿ ಪರಮೇಶ್ವರ ನಾಯ್ಕ್ ಯುವತಿಯ ಪ್ರಶ್ನೆಗೆ ಉತ್ತರ ನೀಡಲು ಮುಂದಾದರು. ಈ ವೇಳೆ ನಾವು ಉತ್ತರ ನೀಡಲು ಬಂದಿಲ್ಲ ಅಂತ ಡಿಕೆ ಶಿವಕುಮಾರ್ ಪಿಟಿ ಪರಮೇಶ್ವರ್ ನ್ನು ತಡೆದರು.

ಇದರಿಂದ ಸಿಟ್ಟಾದ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ಕೈಯಲ್ಲಿದ್ದ ಮೈಕ್ ನ್ನು ಸಿಟ್ಟಿನಿಂದ ಎಸೆದರು. ಶಾಸಕ ಪಿಟಿ ಪರಮೇಶ್ವರ ನಾಯ್ಕ್ ರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದಿಟ್ಟವಾಗಿ ನೋಡಿ ಸುಮ್ಮನಾದರು. ಇದನ್ನೂ ಓದಿ: ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ತಮ್ಮ ಶಿವಾಜಿ ನಾಯ್ಕ್ ಅರೆಸ್ಟ್

The post ಕೈಯಲ್ಲಿದ್ದ ಮೈಕ್ ಬಿಸಾಡಿದ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್! appeared first on Public TV.

Source: publictv.in

Source link