ಸಿಎಂಗೆ ಹೈಕಮಾಂಡ್ ದಿಢೀರ್ ಬುಲಾವ್; ರಾಜ್ಯ ರಾಜಕಾರಣದಲ್ಲಿ ಆಗಲಿದ್ಯಾ ಮಹತ್ವದ ಬದಲಾವಣೆ?

ಸಿಎಂಗೆ ಹೈಕಮಾಂಡ್ ದಿಢೀರ್ ಬುಲಾವ್; ರಾಜ್ಯ ರಾಜಕಾರಣದಲ್ಲಿ ಆಗಲಿದ್ಯಾ ಮಹತ್ವದ ಬದಲಾವಣೆ?

ಬೆಂಗಳೂರು: ಹೈಕಮಾಂಡ್​ ಬುಲಾವ್​ ಹಿನ್ನೆಲೆ, ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಇಂದು ದೆಹಲಿಗೆ ತೆರಳಲಿದ್ದಾರೆ.

ಮಧ್ಯಾಹ್ನ 2.30 ಕ್ಕೆ ವಿಶೇಷ ವಿಮಾನದಲ್ಲಿ ಸಿಎಂ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ ಅಂತ ಸಿಎಂ ಕಚೇರಿ ಮೂಲಗಳು ಮಾಹಿತಿ ನೀಡಿವೆ. ಹೈಕಮಾಂಡ್​ ಭೇಟಿಯ ನಂತರ ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಬಿಎಸ್​ವೈ, ನಾಡಿದ್ದು ಸಂಜೆ ಅಥವಾ ಭಾನುವಾರ ಬೆಂಗಳೂರಿಗೆ ವಾಪಾಸ್ಸಾಗಲಿದ್ದಾರೆ.

ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರನ್ನ ಭೇಟಿಯಾಗೋದಕ್ಕೆ ಪ್ಲಾನ್​ ಕೂಡ ಹಾಕಿಕೊಂಡಿದ್ದಾರೆ. ಖುದ್ದು ಹೈಕಮಾಂಡ್​ ಬಿಎಸ್​ವೈರನ್ನ ದೆಹಲಿಗೆ ಕರೆಸಿಕೊಳ್ತಿರೋದು ಸಾಕಷ್ಟು ಚರ್ಚೆಗೆ ಜನ್ಮ ನೀಡಿದೆ. ಯಾಕಂದ್ರೆ ಕೆಲವು ಬಿಜೆಪಿ ನಾಯಕರು ನಾಯಕತ್ವ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಬಿಎಸ್​ವೈಗೆ ಬುಲಾವ್ ನೀಡಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

The post ಸಿಎಂಗೆ ಹೈಕಮಾಂಡ್ ದಿಢೀರ್ ಬುಲಾವ್; ರಾಜ್ಯ ರಾಜಕಾರಣದಲ್ಲಿ ಆಗಲಿದ್ಯಾ ಮಹತ್ವದ ಬದಲಾವಣೆ? appeared first on News First Kannada.

Source: newsfirstlive.com

Source link