ಟೋಕಿಯೊ ಒಲಿಂಪಿಕ್ಸ್​​: ಫ್ರೀ-ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಮೇರಿ ಕೋಮ್​

ಟೋಕಿಯೊ ಒಲಿಂಪಿಕ್ಸ್​​: ಫ್ರೀ-ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಮೇರಿ ಕೋಮ್​

ಇಂದು ನಡೆದ ಮಹಿಳೆಯರ 51 ಕೆಜಿ ವಿಭಾಗದ ಬಾಕ್ಸಿಂಗ್​ನಲ್ಲಿ ಜಯ ಸಾಧಿಸಿರುವ ಮೇರಿ ಕೋಮ್​ ಪ್ರಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. 6 ಬಾರಿಯ ವಿಶ್ವ ಚಾಂಪಿಯನ್​ ಮೇರಿ, 51 ಕೆ.ಜಿ ವಿಭಾಗದ ರೌಂಡ್ 32ರ ಹಂತದ ಪಂದ್ಯದಲ್ಲಿ ಡೊಮಿನಿಕಾದ ಮಿಗುಲಿನಾ ಹೆರ್ನಾಂಡೆಜ್​ರನ್ನ ಎದುರಿಸಿದ್ರು. ರಿಂಗ್​ನಲ್ಲಿ ಸಾಮರ್ಥ್ಯ ಮೆರೆದ ಮೇರಿ 4-1 ಅಂತರದಲ್ಲಿ ಜಯಿಸಿ ಗೆಲುವಿನ ಆರಂಭ ಮಾಡಿದ್ದಾರೆ.

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಮೇರಿ ಕೋಮ್ ಪಾಲಿಗೆ ಇದು ಕೊನೆಯ ಒಲಿಂಪಿಕ್ಸ್​ ಎಂದೇ ಹೇಳಲಾಗ್ತಿದೆ. ಮೂರು ಮಕ್ಕಳ ತಾಯಿಯೂ ಆಗಿರುವ 38 ವರ್ಷದ ಮೇರಿ, ಈ ಬಾರಿ ಪದಕದ ಭರವಸೆಯಾಗಿದ್ದು, ಮೊದಲ ಹೆಜ್ಜೆಯಲ್ಲೇ ಯಶಸ್ಸು ಕಂಡಿದ್ದಾರೆ.

The post ಟೋಕಿಯೊ ಒಲಿಂಪಿಕ್ಸ್​​: ಫ್ರೀ-ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಮೇರಿ ಕೋಮ್​ appeared first on News First Kannada.

Source: newsfirstlive.com

Source link